Budget 2024: ಬಜೆಟ್ ನಲ್ಲಿ ಈ ಬೇಡಿಕೆಗೆ ಸಚಿವರು ಅಸ್ತು ಎಂದರೆ ಮಧ್ಯಮ ಮತ್ತು ವೇತನ ವರ್ಗಕ್ಕೆ ಸಿಗುವುದು ಬಹು ದೊಡ್ಡ ಉಡುಗೊರೆ !

Union Budget 2024 :ಇಂದು ಮಂಡನೆಯಗಲಿರುವ ಬಜೆಟ್ ಮೇಲೆ  ವೇತನ ವರ್ಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.ಈ ಬಾರಿಯ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಪರಿಹಾರ ಸಿಗುವ ನಿರೀಕ್ಷೆ ಇದೆ. 

Written by - Ranjitha R K | Last Updated : Jul 23, 2024, 09:07 AM IST
  • ಇನ್ನು ಕೆಲವೇ ಕ್ಷಣಗಳಲ್ಲಿ ಸಾಮಾನ್ಯ ಬಜೆಟ್ ಮಂಡನೆ
  • ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್
  • ದೊಡ್ಡ ನಿರೀಕ್ಷೆ ಇಟ್ಟುಕೊಂಡಿರುವ ಮಧ್ಯಮ ವರ್ಗ
Budget 2024: ಬಜೆಟ್ ನಲ್ಲಿ ಈ ಬೇಡಿಕೆಗೆ ಸಚಿವರು ಅಸ್ತು ಎಂದರೆ ಮಧ್ಯಮ ಮತ್ತು ವೇತನ ವರ್ಗಕ್ಕೆ ಸಿಗುವುದು ಬಹು ದೊಡ್ಡ ಉಡುಗೊರೆ ! title=

Union Budget 2024 : ಇನ್ನು ಕೆಲವೇ ಕ್ಷಣಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ.ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿರಲಿದೆ.ಈ ಬಾರಿ ಮಧ್ಯಮ ವರ್ಗ ಸರ್ಕಾರದಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.ಪ್ರತಿ ಬಾರಿಯಂತೆ ಈ ಬಾರಿಯೂ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್‌ನಲ್ಲಿ ಪರಿಹಾರವನ್ನು ವೇತನದಾರರು ನಿರೀಕ್ಷಿಸುತ್ತಿದ್ದಾರೆ.ಈ ಬಾರಿಯ ಹಣಕಾಸು ಸಚಿವರು ಮಧ್ಯಮ ವರ್ಗದವರಿಗೆ ಪರಿಹಾರ ನೀಡುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಹೆಚ್ಚುವುದೇ ತೆರಿಗೆ ವಿನಾಯಿತಿ ಮಿತಿ ? : 
ಹಣಕಾಸು ಸಚಿವರು 2023-24ನೇ ಸಾಲಿನ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ರಿಯಾಯಿತಿಯನ್ನು ಹೆಚ್ಚಿಸಿದ್ದರು.ಇದರ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ಪದ್ದತಿಯ ಪ್ರಕಾರ, 7 ಲಕ್ಷದವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ.ಆದರೆ, ಸರಕಾರ ಮತ್ತೆ ಈ ಮಿತಿಯನ್ನು ಹೆಚ್ಚಿಸಬಹುದು ಎನ್ನುವ ಭರವಸೆನ್ನು ಉದ್ಯೋಗಿಗಳು ಇಟ್ಟುಕೊಂಡಿದ್ದಾರೆ.7 ಲಕ್ಷದ ಮಿತಿಯನ್ನು8 ಲಕ್ಷಕ್ಕೆ ಹೆಚ್ಚಿಸಬೇಕು ಎನ್ನುವ ಬೇಡಿಕೆಯೂ ಇದೆ. 

ಇದನ್ನೂ ಓದಿ : ATM ಅವಶ್ಯಕತೆಯೇ ಇಲ್ಲ, ಈಗ ಮೊಬೈಲ್‌ನ ಸಹಾಯದಿಂದ ಹಣ ವಿತ್ ಡ್ರಾ ಮಾಡಬಹುದು!

ಹಳೆಯ ತೆರಿಗೆ ಪದ್ಧತಿಯ ವ್ಯಾಪ್ತಿಯಲ್ಲಿ ಹೆಚ್ಚಳ : 
2019ರಲ್ಲಿ ಹಳೆಯ ತೆರಿಗೆ ಪದ್ಧತಿಯಲ್ಲಿ ಕೊನೆಯ ಬದಲಾವಣೆ ಮಾಡಲಾಗಿದೆ.ಈ ಹಿಂದೆ 2.5 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ರೀತಿಯ ತೆರಿಗೆ ಇರಲಿಲ್ಲ.ಆದರೆ 2019 ರ ಬಜೆಟ್‌ನಲ್ಲಿ ಸರ್ಕಾರವು 5 ಲಕ್ಷದವರೆಗಿನ ಆದಾಯದ ಮೇಲಿನ ತೆರಿಗೆಗೆ ವಿನಾಯಿತಿ ನೀಡಿತ್ತು.ತೆರಿಗೆಗೆ ಒಳಪಡುವ ವ್ಯಕ್ತಿಯ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.ಹಳೆಯ ಪದ್ದತಿಯಲ್ಲಿ  ಆದಾಯ ತೆರಿಗೆಯ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ.ಉದ್ಯೋಗಿಗಳ ಪರವಾಗಿ,ಹಳೆಯ ತೆರಿಗೆ ಪದ್ಧತಿಯ ವ್ಯಾಪ್ತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ:
ಆದಾಯ ತೆರಿಗೆ ಸ್ಲ್ಯಾಬ್ ದರಗಳನ್ನು ಸರ್ಕಾರವು ಪರಿಷ್ಕರಿಸಬಹುದು ಎಂಬ ಭರವಸೆಯಲ್ಲಿ ಅನೇಕ ಉದ್ಯೋಗಿಗಳು ಇದ್ದಾರೆ. ಮಧ್ಯಮ ಆದಾಯ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ದರ ಇಳಿಕೆ ಮಾಡಬೇಕೆಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ.ಹೊಸ ತೆರಿಗೆ ಪದ್ಧತಿಯಲ್ಲಿ ವಿಧಿಸಲಾದ ತೆರಿಗೆಯ ಗರಿಷ್ಠ ದರವು 25% ಆಗಿದೆ.ಹಳೆಯ ತೆರಿಗೆ ಪದ್ಧತಿಯಲ್ಲಿ ಗರಿಷ್ಠ ದರವು 37% ಆಗಿದೆ.ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಲಭ್ಯವಿರುವ ಪರಿಹಾರವನ್ನು ಹಳೆಯ ತೆರಿಗೆ ಪದ್ಧತಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ : Arecanut Price in Karnataka: ಚಿತ್ರದುರ್ಗ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?

ಎಚ್‌ಆರ್‌ಎ ವಿನಾಯಿತಿ : 
ಎಚ್‌ಆರ್‌ಎ ವಿನಾಯಿತಿಯನ್ನು ಲೆಕ್ಕಾಚಾರ ಮಾಡಲು ಮೆಟ್ರೋ ನಗರಗಳ ಪಟ್ಟಿಯಲ್ಲಿ ಹೆಚ್ಚಿನ ಶ್ರೇಣಿ-II ನಗರಗಳನ್ನು ಸೇರಿಸುವ ಬೇಡಿಕೆಯೂ ಇದೆ . ಪ್ರಸ್ತುತ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ಮೆಟ್ರೋ ನಗರಗಳನ್ನು ಮಾತ್ರ HRA ವಿನಾಯಿತಿಗಾಗಿ  ಪರಿಗಣಿಸಲಾಗಿದೆ. ಬೆಂಗಳೂರು, ಹೈದರಾಬಾದ್, ಪುಣೆ, ಗುರಗಾಂವ್, ಅಹಮದಾಬಾದ್ ಸೇರಿದಂತೆ ಇತರ ನಗರಗಳ ನಿವಾಸಿಗಳು ಎಚ್‌ಆರ್‌ಎ ರಿಯಾಯಿತಿಯ ಉದ್ದೇಶಕ್ಕಾಗಿ ಈ ನಗರಗಳನ್ನೂ ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕಡಿತ ಮಿತಿಯಲ್ಲಿ ಹೆಚ್ಚಳ:
ಸೆಕ್ಷನ್ 80ಡಿ ಅಡಿಯಲ್ಲಿ ಲಭ್ಯವಿರುವ ಆರೋಗ್ಯ ವಿಮಾ ಪ್ರೀಮಿಯಂನ ಕವರ್‌ನಲ್ಲಿ ಬದಲಾವಣೆಗೆ ಬೇಡಿಕೆಯಿದೆ.ವಿಮಾ ಪ್ರೀಮಿಯಂನ ಹೆಚ್ಚಿನ ವೆಚ್ಚದ ಕಾರಣ,ಅದರ ಮಿತಿಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎನ್ನುವ ವಾದವೂ ಇದೆ.ತೆರಿಗೆದಾರರಿಗೆ ಪರಿಹಾರ ನೀಡಲು 80ಸಿ ಮಿತಿಯನ್ನು ಹೆಚ್ಚಿಸಬೇಕೆಂಬ ಆಗ್ರಹವಿದೆ.80ಸಿ ಅಡಿಯಲ್ಲಿ ಕೊನೆಯ ಬದಲಾವಣೆಯನ್ನು 2014-15 ರಲ್ಲಿ ಮಾಡಲಾಗಿದೆ.ಸದ್ಯ ಇದರ ಮಿತಿ 1.5 ಲಕ್ಷ ರೂ.ಗಳಾಗಿದ್ದು, ಇದನ್ನು 2 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯೂ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

Trending News