Budget 2022 ಮಂಡನೆಗೂ ಮುನ್ನ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು, Fixed Deposit ಬಡ್ಡಿ ದರ ಹೆಚ್ಚಳ

Budget 2022 ಮಂಡನೆಗೂ  ಮುನ್ನ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಗ್ರಾಹಕರಿಗೆ ಉಳಿತಾಯ ಮಾಡಲು ಉತ್ತಮ ಅವಕಾಶ ಕಲ್ಪಿಸಿವೆ.

Written by - Nitin Tabib | Last Updated : Jan 31, 2022, 01:24 PM IST
  • ಬಜೆಟ್ ಮಂಡನೆಗೂ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು
  • ಸ್ಥಿರ ಠೇವಣಿಗಳ ಬಡ್ಡಿ ದರಗಳಲ್ಲಿ ಏರಿಕೆ.
  • ಯಾವ ಯಾವ ಬ್ಯಾಂಕುಗಳು ಎಷ್ಟು ಬಡ್ಡಿ ನೀಡುತ್ತಿವೆ ತಿಳಿಯಲು ವರದಿ ಓದಿ
Budget 2022 ಮಂಡನೆಗೂ ಮುನ್ನ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು, Fixed Deposit ಬಡ್ಡಿ ದರ ಹೆಚ್ಚಳ  title=
FD Interest Rates Updates (Representational Image)

ನವದೆಹಲಿ: FD Interest Rates Update - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಎಚ್‌ಡಿಎಫ್‌ಸಿ ಬ್ಯಾಂಕ್ (HDFC), ಆಕ್ಸಿಸ್ ಬ್ಯಾಂಕ್ (Axis Bank) ಮತ್ತು ICICI ಬ್ಯಾಂಕ್ ಕೇಂದ್ರ ಬಜೆಟ್‌ ಮಂಡನೆಗೂ ಮುನ್ನವೇ ಹಣ ಉಳಿತಾಯ ಮಾಡುವವರನ್ನು ಆಕರ್ಷಿಸಲು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವಾರದ ಆರಂಭದಲ್ಲಿ ಸ್ಥಿರ ಠೇವಣಿ (Fixed Deposit) ದರವನ್ನು ಒಂದಲ್ಲ ಎರಡು ಬಾರಿ ಹೆಚ್ಚಿಸಿದೆ. ಈ ಹಿಂದೆ, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳು (Kotak Mahindra) ಸಹ ಎಫ್‌ಡಿ ಬಡ್ಡಿ ದರಗಳನ್ನು ಹೆಚ್ಚಿಸಿವೆ.

ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನ
ಈ ಕುರಿತು ದಿ ಎಕನಾಮಿಕ್ ಟೈಮ್ಸ್‌ನೊಂದಿಗೆ ಮಾತನಾಡಿರುವ  ದೊಡ್ಡ ಬ್ಯಾಂಕಿಂಗೇತರ ಸಾಲದಾತ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು (CEO) ಸಾಲದಾತರು ಬಡ್ಡಿದರ ಸೈಕಲ್ ನಲ್ಲಿ ಬದಲಾವಣೆಗಳನ್ನು ಸೂಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ನಾನ್-ಬ್ಯಾಂಕ್ ಸಾಲದಾತ ಕಂಪನಿಯ ಸಿಇಒ, “ಸಾಲದಾತರು ಶೀಘ್ರದಲ್ಲೇ ಬಡ್ಡಿದರದ ಚಕ್ರವನ್ನು ಬದಲಾಯಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ, ಇದರಿಂದಾಗಿ ಸಾರ್ವಜನಿಕ ಹಿತಾಸಕ್ತಿ  ಹೆಚ್ಚಾಗಲಿದೆ. ಇದರಿಂದ ಜನರ ಆಸಕ್ತಿ ಕೂಡ  ಹೆಚ್ಚಾಗಲಿದೆ. ಯಾರಲ್ಲಿ ಪ್ರಮುಖವಾಗಿ  ಎನ್‌ಬಿಎಫ್‌ಸಿಗಳ ಲಿಕ್ವಿಡಿಟಿ ಆಶಾದಾಯಕವಾಗಿವೆ." ಬಜೆಟ್‌ಗೂ ಮುನ್ನ ಗ್ರಾಹಕರನ್ನು ಓಲೈಸುವುದು ಈ ಬ್ಯಾಂಕ್‌ಗಳ ಯೋಜನೆ ಎಂದು ಅವರು ಹೇಳಿದ್ದಾರೆ.

ಎಸ್‌ಬಿಐ ಬಡ್ಡಿದರಗಳನ್ನು ಹೆಚ್ಚಿಸಿದೆ
ಬಡ್ಡಿ ದರವನ್ನು ಹೆಚ್ಚಿಸುವ ಬ್ಯಾಂಕ್‌ಗಳಲ್ಲಿ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಕುರಿತು ಹೇಳುವುದಾದರೆ, ಬ್ಯಾಂಕ್ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳನ್ನು 10 ಬೇಸಿಸ್ ಪಾಯಿಂಟ್‌ಗಳವರೆಗೆ (ಬಿಪಿಎಸ್) ಹೆಚ್ಚಿಸಿದೆ. ಈ ಹೊಸ ಬಡ್ಡಿ ದರವು 2 ಕೋಟಿಗಿಂತ ಕಡಿಮೆ FD ಗಳಿಗೆ ಅನ್ವಯಿಸಲಿದೆ. ಎಸ್‌ಬಿಐ ಅಂಕಿಅಂಶಗಳ ಪ್ರಕಾರ, 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ. 5 ರಿಂದ ಶೇ.5.1 ಕ್ಕೆ ಹೆಚ್ಚಿಸಲಾಗಿದೆ. ಇತರ ಅವಧಿಗಳ FD ಗಳ ಮೇಲಿನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಿಶೇಷವೆಂದರೆ ಎಸ್‌ಬಿಐ 5-10 ವರ್ಷಗಳವರೆಗೆ ಎಫ್‌ಡಿಗೆ ಶೇಕಡಾ 5.40 ಬಡ್ಡಿ, ಎರಡರಿಂದ ಮೂರು ವರ್ಷಕ್ಕಿಂತ ಕಡಿಮೆಗೆ ಶೇಕಡಾ 5.10 ಬಡ್ಡಿ ಮತ್ತು 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆಗೆ ಶೇಕಡಾ 5.30 ಬಡ್ಡಿ ನೀಡುತ್ತದೆ.

ಎಚ್‌ಡಿಎಫ್‌ಸಿ ದೊಡ್ಡ ಘೋಷಣೆ ಮಾಡಿದೆ
ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್‌ಡಿಎಫ್‌ಸಿ ಕೂಡ ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರವನ್ನು ಹೆಚ್ಚಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕೆಲವು ಅವಧಿಗಳಲ್ಲಿ ಮಾತ್ರ ದರಗಳನ್ನು ಹೆಚ್ಚಿಸಿದೆ. 2 ವರ್ಷದಿಂದ 3 ವರ್ಷಗಳಲ್ಲಿ ಪಕ್ವವಾಗುವ FD ಗಳು ಈಗ 5.20 ಶೇಕಡಾ ಬಡ್ಡಿಯನ್ನು ಪಡೆಯಲಿವೆ. ಬ್ಯಾಂಕ್ 3 ರಿಂದ 5 ವರ್ಷಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೇಚ್ಚಿಸಿದೆ. ಶೇ. 5.40 ರಷ್ಟು ಬಡ್ಡಿ ಈ ಠೇವಣಿಗಳ ಮೇಲೆ ಲಭ್ಯವಿರುತ್ತದೆ. ಇದೇ ವೇಳೆ 5 ವರ್ಷದಿಂದ 10 ವರ್ಷಗಳವರೆಗಿನ ಅವಧಿಯೊಂದಿಗೆ ಠೇವಣಿಗಳ ಮೇಲೆ ಶೇ. 5.60  ಬಡ್ಡಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ-Budget 2022: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ, 8 ವರ್ಷಗಳ ಬಳಿಕ ಸಿಗಲಿದೆ ಈ ಲಾಭ!

ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ ಬಡ್ಡಿದರವನ್ನು ಹೆಚ್ಚಿಸಿದೆ
ಇದಲ್ಲದೆ, ಕೋಟಕ್ ಮಹೀಂದ್ರಾ ಬ್ಯಾಂಕ್ ವಿವಿಧ ಅವಧಿಗಳೊಂದಿಗೆ ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು ಹೆಚ್ಚಿಸಿದೆ. 7 ರಿಂದ 30 ದಿನಗಳ ಎಫ್‌ಡಿಗಳ ಮೇಲೆ ಶೇಕಡಾ 2.5 ರ ಬಡ್ಡಿದರವನ್ನು, 31 ರಿಂದ 90 ದಿನಗಳ ಎಫ್‌ಡಿಗಳ ಮೇಲೆ ಶೇಕಡಾ 2.75 ಮತ್ತು 91 ರಿಂದ 120 ದಿನಗಳ ಎಫ್‌ಡಿಗಳ ಮೇಲೆ ಶೇಕಡಾ 3 ರ ಬಡ್ಡಿದರವನ್ನು ಅನ್ವಯಿಸಲಾಗಿದೆ.

ಇದನ್ನೂ ಓದಿ-FD Interest Rates: ಈ ಬ್ಯಾಂಕ್‌ಗಳ ಎಫ್‌ಡಿಗಳಲ್ಲಿ ಉತ್ತಮ ಬಡ್ಡಿ ಲಭ್ಯ! ಹೆಚ್ಚಿನ ಆದಾಯ ಇಲ್ಲಿದೆ

ಆಕ್ಸಿಸ್ ಬ್ಯಾಂಕ್ ಕೂಡ ಬಡ್ಡಿಯನ್ನು ಹೆಚ್ಚಿಸಿದೆ
ಇನ್ನೊಂದೆಡೆ, ಆಕ್ಸಿಸ್ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರಗಳನ್ನು ಸಹ ಹೆಚ್ಚಿಸಿದೆ. ಪರಿಷ್ಕರಣೆಯ ನಂತರ, ಆಕ್ಸಿಸ್ ಬ್ಯಾಂಕ್ 7 ದಿನಗಳು ಮತ್ತು 29 ದಿನಗಳ ನಡುವಿನ ಮುಕ್ತಾಯದೊಂದಿಗೆ FD ಗಳ ಮೇಲೆ ಶೇಕಡಾ 2.50 ರ ಬಡ್ಡಿದರವನ್ನು ನೀಡುತ್ತಿದೆ. 30 ದಿನಗಳು ಮತ್ತು 3 ತಿಂಗಳುಗಳಿಗಿಂತ ಕಡಿಮೆ ಇರುವ FD ಗಳ ಮೇಲೆ 3% ಬಡ್ಡಿಯನ್ನು ಮತ್ತು 3 ತಿಂಗಳು ಮತ್ತು 6 ತಿಂಗಳಿಗಿಂತ ಕಡಿಮೆ FD ಗಳ ಮೇಲೆ 3.5% ಬಡ್ಡಿಯನ್ನು ನೀಡುತ್ತದೆ. ವಿಶೇಷವೆಂದರೆ ಆಕ್ಸಿಸ್ ಬ್ಯಾಂಕ್ ಆಯ್ದ ಮೆಚುರಿಟಿಗಳಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 2.5 ರಿಂದ 6.50 ರಷ್ಟು ಬಡ್ಡಿದರವನ್ನು ಪಡೆಯಲಿದ್ದಾರೆ.

ಇದನ್ನೂ ಓದಿ-Fixed Deposit: ಎಫ್‌ಡಿಯಲ್ಲಿ ಎಸ್‌ಬಿಐಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ ಈ ಬ್ಯಾಂಕುಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News