ಉಕ್ರೇನ್-ರಷ್ಯಾ ಯುದ್ಧದ ಎಫೆಕ್ಟ್ ದಾಖಲೆ ಬರೆದ ತೈಲ ದರ!

ಉಕ್ರೇನ್-ರಷ್ಯಾ ಯುದ್ಧದ (Russia-Ukraine war) ಪರಿಣಾಮ ಬ್ರೆಂಟ್ ಕಚ್ಚಾ ತೈಲ ದರ ದಾಖಲೆಯ ಮಟ್ಟಕ್ಕೆ ಏರಿದೆ. ಒಂದು ಬ್ಯಾರಲ್‌ಗೆ 139.13 ಡಾಲರ್ ಬೆಲೆ ತಲುಪಿದೆ. ಇದು 14 ವರ್ಷಗಳಲ್ಲೇ ದಾಖಲೆಯ ದರವಾಗಿದೆ ಎಂದು ವರದಿಯಾಗಿದೆ. 

Written by - Zee Kannada News Desk | Last Updated : Mar 7, 2022, 02:23 PM IST
  • ಉಕ್ರೇನ್-ರಷ್ಯಾ ಯುದ್ಧದ ಎಫೆಕ್ಟ್ ದಾಖಲೆ ಬರೆದ ತೈಲ ದರ
  • ಇದು 14 ವರ್ಷಗಳಲ್ಲೇ ದಾಖಲೆಯ ದರವಾಗಿದೆ
  • ಒಂದು ಬ್ಯಾರಲ್‌ಗೆ 139.13 ಡಾಲರ್ ಬೆಲೆ ತಲುಪಿದೆ
ಉಕ್ರೇನ್-ರಷ್ಯಾ ಯುದ್ಧದ ಎಫೆಕ್ಟ್ ದಾಖಲೆ ಬರೆದ ತೈಲ ದರ! title=
ತೈಲ ದರ

ಮುಂಬೈ: ಉಕ್ರೇನ್-ರಷ್ಯಾ ಯುದ್ಧದ (Russia-Ukraine war) ಪರಿಣಾಮ ಬ್ರೆಂಟ್ ಕಚ್ಚಾ ತೈಲ ದರ ದಾಖಲೆಯ ಮಟ್ಟಕ್ಕೆ ಏರಿದೆ. ಒಂದು ಬ್ಯಾರಲ್‌ಗೆ 139.13 ಡಾಲರ್ ಬೆಲೆ ತಲುಪಿದೆ. ಇದು 14 ವರ್ಷಗಳಲ್ಲೇ ದಾಖಲೆಯ ದರವಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: TDS ಜಮಾ ಮಾಡದೆ ನೀವು EPF ನಿಂದ ನಿಮ್ಮ ಹಣ ಹಿಂಪಡೆಯಬಹುದು! ಹೇಗೆ ಇಲ್ಲಿದೆ ನೋಡಿ 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ (Brent crude) ಏರಿಕೆಯಾದ ಕಾರಣ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರವನ್ನು (Diesel Price) ಏರಿಕೆ ಆಗುವ ಸಾಧ್ಯತೆಗಳು ಸಹ ದಟ್ಟವಾಗಿದೆ. 

ಯುದ್ಧದ ಪರಿಣಾಮವಾಗಿ ತೈಲ ಉದ್ಯಮಿಗಳು ಆತಂಕದಲ್ಲಿದ್ದು, ಉತ್ಪಾದನೆ ಮತ್ತು ಸರಬರಾಜಿನ ಮೇಲೆ ಭಾರೀ ಹೊಡೆತ ಬಿದ್ದಿದೆ. 2008 ರಲ್ಲಿ ಕಚ್ಚಾ ತೈಲ ದರವು ಬ್ಯಾರೆಲ್‌ಗೆ 147 ಡಾಲರ್‌ಗೆ ತಲುಪಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಆದರೆ ಭಾನುವಾರ 14 ವರ್ಷಗಳ ಬಳಿಕ ಈ ದಾಖಲೆ ಮುರಿದಿದೆ. 

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಬ್ರೆಂಟ್ ಕಚ್ಚಾ ತೈಲದ ಪ್ರತಿ ಬ್ಯಾರೆಲ್ ಬೆಲೆ ಶೇಕಡಾ 33 ರಷ್ಟು ಹೆಚ್ಚಾಗಿದೆ. 

ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ (Petrol Price) ಬೆಲೆ  ₹100.58 ಆಗಿದೆ.  ಒಂದು ಲೀಟರ್ ಡೀಸೆಲ್ ದರ  ₹85.01 ಆಗಿದೆ.

ಇದನ್ನೂ ಓದಿ:ನೀವೂ ಈ ತಪ್ಪು ಮಾಡಿದ್ದರೆ ಕ್ಷಣಾರ್ಧದಲ್ಲಿ ರದ್ದಾಗಲಿದೆ ಪಡಿತರ ಚೀಟಿ , ಹೊಸ ನಿಯಮ ಏನು ಹೇಳುತ್ತದೆ ತಿಳಿಯಿರಿ

ತೈಲವು ತಾಂತ್ರಿಕವಾಗಿ ನಿರ್ಬಂಧಗಳಿಂದ ವಿನಾಯಿತಿ ಪಡೆದಿದ್ದರೂ ಸಹ, ರಷ್ಯಾದ ತೈಲ ರಫ್ತುದಾರರು ಖರೀದಿದಾರರನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ರಷ್ಯಾದ ತೈಲವನ್ನು ಖರೀದಿಸುತ್ತಿರುವ ಏಕೈಕ ಕಂಪನಿಗಳಲ್ಲಿ ಶೆಲ್ ಒಂದಾಗಿದೆ, ಆದರೂ ಅದು ಲಾಭವನ್ನು ಉಕ್ರೇನಿಯನ್ ಕಾರಣಗಳಿಗೆ ದಾನ ಮಾಡುವುದಾಗಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News