8th Pay Commission ಕುರಿತು ಬಿಗ್ ಅಪ್ಡೇಟ್, ಶೇ.44 ರಷ್ಟು ಹೆಚ್ಚಾಗಲಿದೆ ವೇತನ!

8th Pay Commission Update: ತುಟ್ಟಿಭತ್ಯೆ ಹೆಚ್ಚಳದ ಬಳಿಕ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ದೇಶಾದ್ಯಂತ ಉದ್ಯೋಗಿಗಳು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ, ಆದರೆ ಶಿಫಾರಸುಗಳ ಪ್ರಕಾರ ವೇತನ ಸಿಗುತ್ತಿಲ್ಲ ಎಂದು ನೌಕರರಿಂದ ಇಂತಹ ಅನೇಕ ದೂರುಗಳು ಬಂದಿವೆ.  

Written by - Nitin Tabib | Last Updated : Mar 30, 2023, 10:12 PM IST
  • ಪ್ರಸ್ತುತ ಕನಿಷ್ಠ ವೇತನ ಮಿತಿಯನ್ನು 18,000 ರೂ.ಗೆ ಇರಿಸಲಾಗಿದೆ ಎಂದು ಕೇಂದ್ರ ನೌಕರರ ಸಂಘಟನೆಗಳು ಹೇಳುತ್ತವೆ.
  • ಇದರ ಹೆಚ್ಚಳಕ್ಕೆ ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
  • 7ನೇ ವೇತನ ಆಯೋಗದಲ್ಲಿ ಇದನ್ನು 3.68 ಪಟ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಲಾಗಿದ್ದರೂ ಈ ಅಂಶ 2.57 ಪಟ್ಟು ಹೆಚ್ಚಿದೆ.
8th Pay Commission ಕುರಿತು ಬಿಗ್ ಅಪ್ಡೇಟ್, ಶೇ.44 ರಷ್ಟು ಹೆಚ್ಚಾಗಲಿದೆ ವೇತನ! title=
8 ನೇ ವೇತನ ಆಯೋಗ!

8th Pay Commission latest Updates: ಇತ್ತೀಚೆಗಷ್ಟೇ ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಪ್ರಸ್ತುತ, ದೇಶಾದ್ಯಂತ ಉದ್ಯೋಗಿಗಳು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ, ಆದರೆ ನೌಕರರು ಶಿಫಾರಸುಗಳ ಪ್ರಕಾರ ವೇತನ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ, ಅಂದರೆ ಅವರು ಪಡೆಯಬೇಕಾದುದಕ್ಕಿಂತ ಕಡಿಮೆ ಹಣವನ್ನು ಪಡೆಯುತ್ತಿದ್ದಾರೆ ಎಂಬ ಅನೇಕ ದೂರುಗಳು ನೌಕರರಿಂದ ಕೇಳಿಬರುತ್ತಿವೆ. ಈ ಎಲ್ಲ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ  ವೇತನ ಆಯೋಗಕ್ಕಾಗಿ ಬೇಡಿಕೆ ಇಡುಟ್ಟಿದ್ದಾರೆ.

ಸರ್ಕಾರ ಶೀಘ್ರವೇ ಜ್ಞಾಪಕ ಪತ್ರ ಸಿಗಲಿದೆ
ನೌಕರರ ಸಂಘದಿಂದ ಬಂದಿರುವ ಮಾಹಿತಿ ಪ್ರಕಾರ, ಈ ಬಗ್ಗೆ ಜ್ಞಾಪಕ ಪತ್ರ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಸರಕಾರಕ್ಕೆ ನೀಡಲಾಗುವುದು ಎನ್ನಲಾಗಿದೆ. ಇದರ ನಂತರ, ಅದರ ಶಿಫಾರಸುಗಳನ್ನು ಅವಲೋಕಿಸಿದ ನಂತರ, ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಮತ್ತೊಂದೆಡೆ, ಸದನದಲ್ಲಿ 8 ನೇ ವೇತನ ಆಯೋಗವನ್ನು ಜಾರಿಗೊಳಿಸುವ ವಿಷಯದ ಬಗ್ಗೆ ಯಾವುದೇ ಪರಿಗಣನೆಯನ್ನು ಸರ್ಕಾರ ನಿರಾಕರಿಸಿದೆ, ಆದರೆ ಇದರ ಬಳಿಕವೂ  ನೌಕರರು ಮುಂದಿನ ವೇತನ ಆಯೋಗವನ್ನು ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ.

ಜಾರಿಗೆ ಬಂದರೆ ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ?
ನಮ್ಮ ಅಸೋಸಿಯೇಟ್ ವೆಬ್‌ಸೈಟ್ Zee ಬ್ಯುಸಿನೆಸ್ ನಲ್ಲಿ ಪ್ರಕಟಗೊಂಡ ಪ್ರಕಾರ, ಪ್ರಸ್ತುತ ಕನಿಷ್ಠ ವೇತನ ಮಿತಿಯನ್ನು 18,000 ರೂ.ಗೆ ಇರಿಸಲಾಗಿದೆ ಎಂದು ಕೇಂದ್ರ ನೌಕರರ ಸಂಘಟನೆಗಳು ಹೇಳುತ್ತವೆ. ಇದರ ಹೆಚ್ಚಳಕ್ಕೆ ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 7ನೇ ವೇತನ ಆಯೋಗದಲ್ಲಿ ಇದನ್ನು 3.68 ಪಟ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಲಾಗಿದ್ದರೂ ಈ ಅಂಶ 2.57 ಪಟ್ಟು ಹೆಚ್ಚಿದೆ. ಇದಕ್ಕೆ ಸರಕಾರ ಒಪ್ಪಿಗೆ ನೀಡಿದರೆ ನೌಕರರ ಕನಿಷ್ಠ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ.

4ನೇ ವೇತನ ಆಯೋಗದಿಂದ ನೌಕರರ ವೇತನ ಎಷ್ಟು ಹೆಚ್ಚಳವಾಗಿದೆ?
ಸಂಬಳದಲ್ಲಿ ಹೆಚ್ಚಳ - ಶೇ.27.6 ರಷ್ಟು
ಕನಿಷ್ಠ ವೇತನ - 750 ರೂ

5ನೇ ವೇತನ ಆಯೋಗದಿಂದ ನೌಕರರ ವೇತನ ಎಷ್ಟು ಹೆಚ್ಚಳವಾಗಿದೆ?
ಸಂಬಳದಲ್ಲಿ ಹೆಚ್ಚಳ - ಶೇ.31 ರಷ್ಟು
ಕನಿಷ್ಠ ವೇತನ - 2,550 ರೂ

6ನೇ ವೇತನ ಆಯೋಗದಿಂದ ನೌಕರರ ವೇತನ ಎಷ್ಟು ಹೆಚ್ಚಳವಾಗಿದೆ?
ಫಿಟ್ಮೆಂಟ್ ಫ್ಯಾಕ್ಟರ್ - 1.86 ಪಾಯಿಂಟ್
ಸಂಬಳದಲ್ಲಿ ಹೆಚ್ಚಳ - ಶೇ.54 ರಷ್ಟು
ಕನಿಷ್ಠ ವೇತನ - 7,000 ರೂ

ಇದನ್ನೂ ಓದಿ-New Car Launch News: ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಇಳಿಯುತ್ತಿದೆ ಟಾಟಾ ಕಂಪನಿಯ ಈ ಅಗ್ಗದ ಕಾರು!

7 ನೇ ವೇತನ ಆಯೋಗದಿಂದ (ಫಿಟ್‌ಮೆಂಟ್ ಫ್ಯಾಕ್ಟರ್) ನೌಕರರ ವೇತನವನ್ನು ಎಷ್ಟು ಹೆಚ್ಚಿಸಲಾಗಿದೆ
ಫಿಟ್ಮೆಂಟ್ ಫ್ಯಾಕ್ಟರ್ - 2.57 ಪಾಯಿಂಟ್
ಸಂಬಳದಲ್ಲಿ ಹೆಚ್ಚಳ - ಶೇ. 14.29 ರಷ್ಟು 
ಕನಿಷ್ಠ ವೇತನ - 18,000 ರೂ

8ನೇ ವೇತನ ಆಯೋಗವು ನೌಕರರ ವೇತನವನ್ನು ಎಷ್ಟು ಹೆಚ್ಚಿಸಲಿದೆ (ಫಿಟ್‌ಮೆಂಟ್ ಫ್ಯಾಕ್ಟರ್)
ಫಿಟ್ಮೆಂಟ್ ಫ್ಯಾಕ್ಟರ್ - 3.68 ಪಾಯಿಂಟ್ಸ್ 
ವೇತನ ಹೆಚ್ಚಳ - ಶೇ. 44.44 ರಷ್ಟು ಹೆಚ್ಚಾಗುವ ಸಾಧ್ಯತೆ
ಕನಿಷ್ಠ ಸಂಬಳ - ರೂ 26000 ಕ್ಕೆ ಏರುವ ಸಾಧ್ಯತೆ

ಇದನ್ನೂ ಓದಿ-New Rules From April 1: ಏಪ್ರಿಲ್ 1 ರಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಹರಿಸದೆ ಹೋದರೆ ಹಾನಿ ತಪ್ಪದು!

ಸರಕಾರ ಹೊಸ ವ್ಯವಸ್ಥೆಯನ್ನು ಕೂಡ ಆರಂಭಿಸುವ ಸಾಧ್ಯತೆ ಇದೆ
ಮೂಲಗಳ ಪ್ರಕಾರ ಪ್ರಸ್ತುತ 7ನೇ ವೇತನ ಆಯೋಗದ ನಂತರ ಹೊಸ ವೇತನ ಆಯೋಗ ಬರುವುದಿಲ್ಲ ಎಂದೂ ಕೂಡ ಹೇಳಲಾಗುತ್ತಿದೆ. ಬದಲಾಗಿ ಇಂತಹ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲು ಹೊರಟಿದ್ದು, ಇದರಿಂದ ಸರ್ಕಾರಿ ನೌಕರರ ವೇತನ ತನ್ನಷ್ಟಕ್ಕೆ ತಾನೇ  ಹೆಚ್ಚಾಗಲಿದೆ. ಇದು 'ಸ್ವಯಂಚಾಲಿತ ವೇತನ ಪರಿಷ್ಕರಣೆ ವ್ಯವಸ್ಥೆ' ಆಗಿರುವ ಸಾಧ್ಯತೆ ಇದೆ, ಇದರಲ್ಲಿ ಡಿಎ ಶೇಕಡಾ 50 ಕ್ಕಿಂತ ಹೆಚ್ಚಿದ್ದರೆ ವೇತನದಲ್ಲಿ ಸ್ವಯಂಚಾಲಿತ ಪರಿಷ್ಕರಣೆಗೆ ಒಳಗಾಗಲಿದೆ. ಇದು ಸಂಭವಿಸಿದಲ್ಲಿ, 68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 52 ಲಕ್ಷ ಪಿಂಚಣಿದಾರರು ಇದರ ನೇರ ಪ್ರಯೋಜನವನ್ನು ಪಡೆಯುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News