Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

New 100 Rupee Note: ಪ್ರಾಯೋಗಿಕ ರೂಪದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಇಂತಹ 1 ಬಿಲಿಯನ್ ನೋಟುಗಳನ್ನು ಮುದ್ರಿಸುತ್ತಿದ್ದು, ಪ್ರಯೋಗ ಯಶಸ್ವಿಯಾದ ಬಳಿಕ ಈ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಹಳೆ ನೋಟುಗಳನ್ನು ಕ್ರಮೇಣ ಸಿಸ್ಟಮ್ ನಿಂದ ತೆಗೆದುಹಾಕಲಾಗುವುದು ಎನ್ನಲಾಗಿದೆ.

Written by - Nitin Tabib | Last Updated : May 29, 2021, 01:16 PM IST
  • ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ 100 ಮುಖಬೆಲೆಯ ಹೊಸ ನೋಟು ಪರಿಚಯ.
  • ಈಗಾಗಲೇ ಹೊಸ ನೋಟೊಂದು ಮಾರುಕಟ್ಟೆಯಲ್ಲಿರುವಾಗ ಹೊಸ ನೋಟು ಯಾಕೆ ಅಂತಿರಾ?
  • ಸಂಪೂರ್ಣ ವಿವರ ತಿಳಿದುಕೊಳ್ಳಲು ಈ ವರದಿಯನ್ನೊಮ್ಮೆ ಓದಿ.
Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI title=
New 100 Rupees Note (File Photo)

New 100 Rupee Note: ನಿಮ್ಮ ಕೈಯಲ್ಲಿರುವ 100 ರೂಪಾಯಿ ಮುಖಬೆಲೆಯ ನೋಟು ಇನ್ನು ಮುಂದೆ ಹರಿದು ಹೋಗುವುದಿಲ್ಲ ಅಥವಾ ನೆನೆಯುವುದು ಇಲ್ಲ ಎಂದರೆ ನೀವು ನಂಬುವಿರಾ? ಹೌದು, ಶೀಘ್ರದಲ್ಲೇ ಇಂತಹ ನೋಟು ನಿಮ್ಮ ಕೈಯಲ್ಲಿ ಇರಲಿದೆ. ಆರ್‌ಬಿಐ ಈ ರೀತಿಯ 100 ರೂಪಾಯಿಗಳ ಹೊಸ ನೋಟು ಶೀಘ್ರದಲ್ಲಿಯೇ ಜಾರಿಗೊಳಿಸಲಿದೆ.  ಈ ನೋಟನ್ನು ನೀವು ನಿಮ್ಮ ಜೇಬಿನಲ್ಲಿ ಹಲವು ದಿನಗಳವರೆಗೆ ಇರಿಸಬಹುದು, ಅದು ಹರಿದು ಹೋಗುವುದಿಲ್ಲ ಮತ್ತು ನೀರಿನಲ್ಲಿ ನೆನೆಯುವುದು ಇಲ್ಲ. ಅದಕ್ಕೆ ಎಷ್ಟೇ ಮಡಿಕೆ ಹಾಕಿದರೂ ಕೂಡ ಅದು ತುಂಡಾಗುವುದಿಲ್ಲ. ನೋಟದಲ್ಲಿ, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ 100 ರೂಪಾಯಿ ನೋಟಿನಂತೆಯೇ ಇರಲಿದೆ. ಆದರೆ, ಅದರಲ್ಲಿ ವಿಶೇಷ ವೈಶಿಷ್ಟ್ಯಗಲಿರಲಿವೆ.  ಈ ವಿಶೇಷ ವೈಶಿಷ್ಟ್ಯದಿಂದಾಗಿ, ನೀವು ಅದನ್ನು ನಿಮ್ಮ ಜೇಬಿನಲ್ಲಿ ಹೇಗೆ ಬೇಕಾದರೂ ಇರಿಸಿಕೊಳ್ಳಬಹುದು. ಆರ್‌ಬಿಐ ಅಂತಹ 1 ಬಿಲಿಯನ್ ನೋಟುಗಳನ್ನು ಮುದ್ರಿಸುತ್ತಿದೆ. ನೋಟುಗಳ ಬಾಳಿಕೆ ಹಾಗೂ ಅವುಗಳ ಸುರಕ್ಷತೆಯೇ ಈ ವಾರ್ನಿಶ್ ಮಾಡಲಾಗಿರುವ ನೋಟು ಬಿಡುಗಡೆಯ ಹಿಂದಿನ ಕಾರಣ ಎನ್ನಲಾಗಿದೆ. ಈ ನೋಟುಗಳ ಯಶಸ್ವಿ ಕ್ಷೇತ್ರವಾರು ಪ್ರಯೋಗಗಳ ನಂತರ, ಅವುಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಮತ್ತು ಹಳೆಯ ನೋಟುಗಳನ್ನು ವ್ಯವಸ್ಥೆಯಿಂದ ಕ್ರಮೇಣ ತೆಗೆದು ಹಾಕಲಾಗುವುದು. ಹೀಗಂತ ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ವಾರ್ನಿಷ್ ಕರೆನ್ಸಿ ನೋಟುಗಳ ಬಗ್ಗೆ ಉಲ್ಲೇಖಿಸಿದೆ.

ನೋಟುಗಳಿಗೆ ವಾರ್ನಿಷ್ ಬಳಸಲಾಗುತ್ತಿದೆ
ಪ್ರಸ್ತುತ ಮಾರುಕಟ್ಟೆಯಲ್ಲಿ ಬದನೆ ಬಣ್ಣದ 100 ರೂ. ಮುಖಬೆಲೆಯ ನೋಟು ಈಗಾಗಲೇ ಲಭ್ಯವಿದೆ. ಇಂತಹುದರಲ್ಲಿ ಹೊಸ ನೋಟು ಯಾಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿರಬಹುದು. ಆದರೆ, ಆರ್.ಬಿ. ಐ ಈ ನೂತನ ನೋಟಿನಲ್ಲಿ ಒಂದು ಹೊಸ ವೈಶಿಷ್ಟ್ಯ ಜೋಡಿಸಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾರ್ನಿಶ್ ಹಚ್ಚಲಾಗಿರುವ ಹೊಸ 100 ರೂ. ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಜಾರಿಗೊಳಿಸಲಿದೆ. ಈ ನೋಟು ಕೂಡ ಬದನೆ ಬಣ್ಣದ್ದಾಗಿರಲಿದೆ. ಈ ನೋಟು ಯಾವುದೇ ವಿಧದಲ್ಲಿ ಹಾಳಾಗುವುದಿಲ್ಲ ಎಂಬುದೇ ಈ ನೋಟಿನ ವೈಶಿಷ್ಟ್ಯ. ಈ ನೋಟಿನ ಮೇಲೆ ನೀರು ಕೂಡ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಈ ನೋಟುಗಳ ಮೇಲೆ ವಾರ್ನಿಶ್ ಬಳಸಲಾಗುತ್ತಿದೆ. ಕತ್ತಿಗೆಗೆ ಬಳಸಲಾಗುವ ವಾರ್ನಿಶ್ ಪೇಂಟ್ ಇದಾಗಿರಲಿದೆ. ಮುಂಬರುವ ದಿನಗಳಲ್ಲಿ RBI ಇಂತಹ ನೋಟುಗಳನ್ನು ಮುದ್ರಿಸಲು ಸಿದ್ಧತೆ ನಡೆಸಿದೆ.

ಈಗಾಗಲೇ ಸರ್ಕಾರದ ಅನುಮತಿ ಕೂಡ ದೊರೆತಿದೆ
ಕೇಂದ್ರ ಸರ್ಕಾರ (Modi Government) ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಇಂತಹ 1 ಬಿಲಿಯನ್ ನೋಟು ಮುದ್ರಿಸಲು ಅನುಮತಿ ನೀಡಿದೆ. ಕಳೆದ ವರ್ಷ ರಾಜ್ಯಸಭೆಯಲ್ಲಿ ಲಿಖಿತ ರೂಪದಲ್ಲಿ ಈ ಕುರಿತು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದರು. ಈ ಕುರಿತು ಹೇಳಿಕೆ ನೀಡಿದ್ದ ಅವರು ಕೇಂದ್ರ ಸರ್ಕಾರ, ವಾರ್ನಿಶ್ ಪೇಂಟ್ ಬಳಸಲಾಗಿರುವ 1 ಬಿಲಿಯನ್ ನೋಟುಗಳ ಮುದ್ರಣಕ್ಕೆ ಅನುಮತಿ ನೀಡುತ್ತಿದೆ ಎಂದಿದ್ದರು. ಈ ರೀತಿಯ ನೋಟುಗಳನ್ನು ದೀರ್ಘಾವಧಿಯವರೆಗೆ ಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ- SBI Bank Latest Update: ನಿಮಗೂ Online Bankingನಲ್ಲಿ ಈ ಸಮಸ್ಯೆ ಎದುರಾಗುತ್ತಿದೆಯೇ? ಈ ಲಿಂಕ್ ಬಳಸಿ ಸಮಸ್ಯೆ ಪರಿಹರಿಸಿಕೊಳ್ಳಿ

ನೋಟುಗಳ ವೈಶಿಷ್ಟ್ಯ ಇಲ್ಲಿದೆ (RBI On Varnish Painted 100 Rupees Note)
>> ಈ ನೋಟುಗಳ ಸೈಜ್ ಪ್ರಸ್ತುತ ಜಾರಿಯಲ್ಲಿರುವ 100 ರೂ. ನೋಟಿನಂತೆಯೇ ಇರಲಿದೆ.
>> ಇದೂ ಕೂಡ ಗಾಂಧಿ ಸಿರೀಸ್ ನೋಟು ಅಗಿರಲಿದೆ.
>> ಇದರ ಡಿಸೈನ್ ಕೂಡ ಪ್ರಸ್ತುತ ಜಾರಿಯಲ್ಲಿರುವ ನೋಟಿನ ರೀತಿಯೇ ಇರಲಿದೆ.
>> ವಾರ್ನಿಶ್ ಹಚ್ಚಲಾಗಿರುವ ಹೊಸ ನೋಟು ಪ್ರಸ್ತುತ ಇರುವ ನೋಟಿನ ಹೊಲಿಕೆಯಲ್ಲಿ ದುಪ್ಪಟ್ಟು ಬಾಳಿಕೆ ಹೊಂದಿರಲಿದೆ.
>> ಪ್ರಸ್ತುತ ಜಾರಿಯಲ್ಲಿರುವ 100 ರೂ. ನೋಟಿನ (100 Rupee Note) ಸರಾಸರಿ ಬಾಳಿಕೆ ಎರಡೂವರೆ ವರ್ಷಗಳಿಂದ ಹಿಡಿದು ಮೂರು ವರ್ಷಗಳವರೆಗೆ ಇರಲಿದೆ. ವಾರ್ನಿಶ್ ಬಳಸಲಾಗಿರುವ ನೋಟುಗಳ ಬಾಳಿಕೆ 7 ವರ್ಷಗಳದ್ದಾಗಿದೆ.

ಹೊಸ ನೋಟು ಶೇ.20 ರಷ್ಟು ದುಬಾರಿ ಇರಲಿದೆ (New 100 Rupees Note Features)
>> ಪ್ರಸ್ತುತ ಜಾರಿಯಲ್ಲಿರುವ 100 ರೂ. ಮುಖಬೆಲೆಯ 1000 ನೋಟುಗಳ (Cost Of Printing Of 1000 Notes) ಮುದ್ರಣಕ್ಕೆ 1570 ರೂ. ವೆಚ್ಚ ತಗುಲುತ್ತದೆ.
>> ವಾರ್ನಿಶ್ ಬಳಸಲಾಗಿರುವ ನೋಟುಗಳ ಮುದ್ರಣಕ್ಕೆ ಶೇ.20 ರಷ್ಟು ಹೆಚ್ಚು ವೆಚ್ಚ ತಗುಲಲಿದೆ. 
>> ವಾರ್ನಿಶ್ ಬಳಸಲಾದ ಕಾರಣ ಈ ನೋಟುಗಳ ಮೇಲೆ ನೀರು ಹಾಗೂ ಕೆಮಿಕಲ್ ಪರಿಣಾಮ ಬೀರುವುದಿಲ್ಲ.
>> ಪ್ರಸ್ತುತ ಜಾರಿಯಲ್ಲಿರುವ 100 ರೂ.ಮುಖಬೆಲೆಯ ನೋಟುಗಳ ಹೋಲಿಕೆಯಲ್ಲಿ ವಾರ್ನಿಶ್ ಬಳಸಲಾಗಿರುವ ನೋಟುಗಳ ಹಾಳಾಗುವ ಸಾಧ್ಯತೆ ಶೇ.170 ರಷ್ಟು ಕಮ್ಮಿ ಇರಲಿದೆ.
>> ವಾರ್ನಿಶ್ ಬಳಸಲಾದ ಕಾರಣ ಇವುಗಳನ್ನು ಪದೇ ಪದೇ ಮಡಿಕೆ ಹಾಕಲು ಸಾಧ್ಯವಾಗುವುದಿಲ್ಲ. ಇದರಿಂದ ನೋಟು ತುಂಡಾಗುವ ಸಾಧ್ಯತೆ ಕೂಡ ಶೇ.20 ರಷ್ಟು ಕಡಿಮೆ ಇರಲಿದೆ.

ಇದನ್ನೂ ಓದಿ-GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ

ನೋಟುಗಳ ಡಿಸೈನ್ ಬದಲಾಗಲಿದೆ
ದೃಷ್ಟಿಮಾಂದ್ಯರೂ ಕೂಡ ಈ ನೋಟುಗಳನ್ನು ಕೈಯಲ್ಲಿ ಹಿಡಿದು ಗುರಿತಿಸಲು ಅನಕೂಲವಾಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇವುಗಳನ್ನು ಡಿಸೈನ್ ಮಾಡಲು ಬಯಸುತಿದೆ. ವರದಿಗಳ ಪ್ರಕಾರ, ಭಾರತೀಯ ಕರೆನ್ಸಿ (Indian Currency) ನೋಟುಗಳಲ್ಲಿ ದೃಷ್ಟಿಹೀನರಿಗೆ ಅನುಕೂಲವಾಗುವ ಹಲವು ಸಂಗತಿಗಳನ್ನು ಅಳವಡಿಸಲಾಗಿದೆ. ಉದಾಹರಣೆಗೆ ಇಂಟೆಗ್ಲಿಯೋ ಪ್ರಿಂಟಿಂಗ್, ಟೆಕ್ಟಾಯಿಲ್ ಮಾರ್ಕ್, ನೋಟುಗಳ ವಿವಿಧ ಸೈಜ್, ನೋಟುಗಳ ಮೇಲೆ ದಪ್ಪಕ್ಷರಗಳಲ್ಲಿ ಬರೆಯುವುದು, ನೋಟುಗಳ ವಿವಿಧ ಬಣ್ಣ, ಮೊನೊಕ್ರೋಮೆಟಿಕ್ ಕಲರ್ ಹಾಗೂ ನೋಟುಗಳ ಪ್ಯಾಟರ್ನ್ ಇವುಗಳಲ್ಲಿ ಶಾಮೀಲಾಗಿವೆ.

ಇದನ್ನೂ ಓದಿ-RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News