Best Selling Bike: 70 ಸಾವಿರದ ಈ ಬೈಕ್ ಖರೀದಿಲು ಮುಗಿಬಿದ್ದ ಜನರು, ಬಿಸಿದೋಸೆಯಂತೆ ಬಿಕರಿ!

ಇಂದು ಹೆಚ್ಚಿನ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ಕಾರ್ಯಕ್ಷಮತೆ ನೀಡುವ ಬೈಕ್‌ಗಾಗಿ ಹುಡುಕುತ್ತಿದ್ದಾರೆ. Hero MotoCorp ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಯಾಗಿದೆ. ಇದೇ ಕಂಪನಿಯ ಸ್ಪ್ಲೆಂಡರ್ ಹೆಚ್ಚು ಮಾರಾಟವಾದ ಬೈಕ್ ಅನ್ನೋ ಹೆಗ್ಗಳಿಕೆ ಹೊಂದಿದೆ.

Written by - Puttaraj K Alur | Last Updated : Sep 19, 2022, 09:11 PM IST
  • ಹೀರೋ ಮೋಟೋಕಾರ್ಪ್ ಆಗಸ್ಟ್‍ನಲ್ಲಿ 2,86,007 ಯುನಿಟ್‌ ಬೈಕ್ ಮಾರಿದೆ
  • ಹೀರೋ ಸ್ಪ್ಲೆಂಡರ್ ವಾರ್ಷಿಕ ಮಾರಾಟದಲ್ಲಿ ಶೇ.18.3ರಷ್ಟು ಬೆಳವಣಿಗೆ ದಾಖಲಿಸಿದೆ
  • ಹೋಂಡಾ ಸಿಬಿ ಶೈನ್ ಕಳೆದ ತಿಂಗಳು 1,20,139 ಯುನಿಟ್‌ ಬೈಕ್ ಮಾರಾಟ ಮಾಡಿದೆ
Best Selling Bike: 70 ಸಾವಿರದ ಈ ಬೈಕ್ ಖರೀದಿಲು ಮುಗಿಬಿದ್ದ ಜನರು, ಬಿಸಿದೋಸೆಯಂತೆ ಬಿಕರಿ! title=
Best Selling Bikes

ನವದೆಹಲಿ: ದೇಶದಲ್ಲಿ ಕಾರುಗಳಿಗಿಂತ ದ್ವಿಚಕ್ರ ವಾಹನಗಳೇ ಹೆಚ್ಚು ಮಾರಾಟವಾಗುತ್ತಿವೆ. ಹೆಚ್ಚಿನ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ಕಾರ್ಯಕ್ಷಮತೆ ನೀಡುವ ಬೈಕ್‍ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಏಕೆಂದರೆ ಇಂದು ಪೆಟ್ರೋಲ್ ದರ ಗಗನಮುಖಿಯಾಗಿದೆ. ಹೀಗಾಗಿ ಹೆಚ್ಚು ಮೈಲೇಜ್ ನೀಡುವ ಬೈಕ್‍ಗಳ ಖರೀದಿಗೆ ಜನರು ಮನಸ್ಸು ಮಾಡುತ್ತಾರೆ.  

Hero MotoCorp ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಯಾಗಿದೆ. ಇದೇ ಕಂಪನಿಯ ಸ್ಪ್ಲೆಂಡರ್ ಹೆಚ್ಚು ಮಾರಾಟವಾಗುವ ಬೈಕ್ ಆಗಿ ಮುಂದುವರಿದಿದೆ. ಟಾಪ್ 10 ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಈ ಒಂದೇ ಬೈಕಿನ ಪಾಲು ಶೇ.26ರಷ್ಟಿದೆ.

ಇದನ್ನೂ ಓದಿ: Hunter 350: ಇವೇ ನೋಡಿ ಬೆಸ್ಟ್ ಸೆಲ್ಲಿಂಗ್ ರಾಯಲ್ ಎನ್‌ಫೀಲ್ಡ್ 350CC ಬೈಕ್‌ಗಳು

ಲಕ್ಷಾಂತರ ಜನರು ಈ ಬೈಕ್ ಖರೀದಿಸಿದ್ದಾರೆ

ಹೀರೋ ಮೋಟೋಕಾರ್ಪ್ ಆಗಸ್ಟ್ 2022ರಲ್ಲಿ ಹೆಚ್ಚು ಮಾರಾಟವಾದ ಬೈಕು ಕೂಡ ಆಗಿದೆ. ಕಳೆದ ತಿಂಗಳಲ್ಲಿ ಒಟ್ಟು 2,86,007 ಯುನಿಟ್‌ಗಳು ಮಾರಾಟವಾಗಿವೆ. 2021ರಲ್ಲಿ ಇದೇ ಅವಧಿಯಲ್ಲಿ 2,41,703 ಬೈಕ್‌ಗಳು ಮಾರಾಟವಾಗಿದ್ದವು. ಈ ರೀತಿ ಹೀರೋ ಸ್ಪ್ಲೆಂಡರ್ ವಾರ್ಷಿಕ ಮಾರಾಟದಲ್ಲಿ ಶೇ.18.3ರಷ್ಟು ಬೆಳವಣಿಗೆ ದಾಖಲಿಸಿದೆ. ಹೋಂಡಾ ಸಿಬಿ ಶೈನ್ ಕಳೆದ ತಿಂಗಳು 1,20,139 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ 2ನೇ ಅತಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಿದೆ.

ಬಜಾಜ್ ಪ್ಲಾಟಿನಾ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಬೈಕ್ ಇದಾಗಿದೆ. ಬಜಾಜ್ ಪ್ಲಾಟಿನಾ ಆಗಸ್ಟ್ 2022ರಲ್ಲಿ 99,987 ಯುನಿಟ್‌ಗಳ ಮಾರಾಟ ಕಂಡಿದೆ. ಅದೇ ರೀತಿ ಬಜಾಜ್ ಪಲ್ಸರ್ 4ನೇ ಸ್ಥಾನದಲ್ಲಿದೆ ಮತ್ತು ಹೀರೋ ಹೆಚ್ಎಫ್ ಡಿಲಕ್ಸ್ 5ನೇ ಸ್ಥಾನದಲ್ಲಿದೆ. ಈ ಬೈಕ್‌ಗಳು ಆಗಸ್ಟ್ 2022ರಲ್ಲಿ ಕ್ರಮವಾಗಿ 97,135 ಯುನಿಟ್ ಮತ್ತು 72,224 ಯುನಿಟ್‌ಗಳನ್ನು ಮಾರಾಟ ಮಾಡಿವೆ.

ಇದನ್ನೂ ಓದಿ: Land Rover Defender: ಲ್ಯಾಂಡ್ ರೋವರ್ ಡಿಫೆಂಡರ್ SUVಯ 75ನೇ ಲಿಮಿಟೆಡ್ ಎಡಿಷನ್ ಅನಾವರಣ

ಕಂಪನಿಯು ವಿಭಿನ್ನ ಎಂಜಿನ್ ಆಯ್ಕೆಗಳೊಂದಿಗೆ ಹೀರೋ ಸ್ಪ್ಲೆಂಡರ್ ಅನ್ನು ಮಾರಾಟ ಮಾಡುತ್ತಿದೆ. ಇದರ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಮಾದರಿಯೆಂದರೆ ಹೀರೋ ಸ್ಪ್ಲೆಂಡರ್ ಪ್ಲಸ್. ಇದರ ಬೆಲೆ 70,658 ರೂ.ನಿಂದ ಪ್ರಾರಂಭವಾಗುತ್ತದೆ (ದೆಹಲಿ ಎಕ್ಸ್ ಶೋ ರೂಂ ದರ). ಇದಲ್ಲದೆ ಸೂಪರ್ ಸ್ಪ್ಲೆಂಡರ್, ಸ್ಪ್ಲೆಂಡರ್ iSmart, ಸ್ಪ್ಲೆಂಡರ್ + ಎಕ್ಸ್‌ಟೆಕ್‌ನಂತಹ ಮಾದರಿಗಳು ಸಹ ಕಂಪನಿಯಲ್ಲಿ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News