ಪೋಸ್ಟ್ ಆಫೀಸ್‌ನ ಅತ್ಯುತ್ತಮ ಜೀವ ವಿಮಾ ಪಾಲಿಸಿ: ತೆರಿಗೆ ವಿನಾಯಿತಿ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ!

Post Office Insurance: ಸುರಕ್ಷಿತ ಹಾಗೂ ಭವಿಷ್ಯದ ದೃಷ್ಟಿಯಿಂದ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್‌ನ ಅತ್ಯುತ್ತಮ ಜೀವ ವಿಮಾ ಯೋಜನೆ ಕೂಡ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. 

Written by - Yashaswini V | Last Updated : Aug 19, 2024, 10:53 AM IST
  • ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಪೋಸ್ಟ್ ಆಫೀಸ್‌ನಲ್ಲಿ ಆರು ವಿಮಾ ಯೋಜನೆಗಳನ್ನು ನಡೆಸಲಾಗುತ್ತಿದೆ.
  • ಅವುಗಳಲ್ಲಿ ಒಂದು ಹೋಲ್ ಲೈಫ್ ಅಶ್ಯೂರೆನ್ಸ್-ಸುರಕ್ಷಾ ಪಾಲಿಸಿ.
  • ಇದರಲ್ಲಿ, 50 ಲಕ್ಷ ರೂ.ವರೆಗಿನ ವಿಮಾ ಮೊತ್ತದೊಂದಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತದೆ.
ಪೋಸ್ಟ್ ಆಫೀಸ್‌ನ ಅತ್ಯುತ್ತಮ ಜೀವ ವಿಮಾ ಪಾಲಿಸಿ: ತೆರಿಗೆ ವಿನಾಯಿತಿ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ!  title=

Post Office Insurance Scheme: ಎಲ್‌ಐ‌ಸಿ ಮಾತ್ರವಲ್ಲ, ಅಂಚೆಕಚೇರಿಗಳಲ್ಲೂ ಕೂಡ "ಜೀವ ವಿಮಾ ಯೋಜನೆ"ಯನ್ನು ತೆಗೆದುಕೊಳ್ಳಬಹುದು. ಪೋಸ್ಟ್ ಆಫೀಸ್‌ನಲ್ಲಿ ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ಎಂಬ ಯೋಜನೆ ಜಾರಿಯಲ್ಲಿದೆ. ಇದು ಪಾಲಿಸಿದಾರರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 

ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಗಿರುವ ಯೋಜನೆ: 
ವಾಸ್ತವವಾಗಿ, ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ಯೋಜನೆಯನ್ನು 1 ಫೆಬ್ರವರಿ 1884 ರಂದು ಬ್ರಿಟಿಷರ ಕಾಲದಲ್ಲಿ ಪ್ರಾರಂಭಿಸಲಾಯಿತು. ಆದಾಗ್ಯೂ, ಇಂದಿಗೂ ಸಹ ಈ ಪಾಲಿಸಿ ಹೆಚ್ಚು ಜನಪ್ರಿಯವಾಗಿಲ್ಲ. ಪೋಸ್ಟಲ್ ಲೈಫ್ ಇನ್ಶುರೆನ್ಸ್ ಅಡಿಯಲ್ಲಿ  6 ಯೋಜನೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ಸಂಪೂರ್ಣ ಜೀವ ವಿಮೆ. ಈ ಯೋಜನೆಯು ರೂ. 50 ಲಕ್ಷದವರೆಗೆ ವಿಮಾ ಮೊತ್ತವನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಕೂಡ ಲಭ್ಯವಿರುತ್ತದೆ. 

ಪೋಸ್ಟಲ್ ಲೈಫ್ ಇನ್ಶೂರೆನ್ಸ್  ಪ್ರಯೋಜನಗಳು: 
ಪೋಸ್ಟ್ ಆಫೀಸ್‌ನಲ್ಲಿ (Post Office) ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ನಲ್ಲಿ ಪಾವತಿಸಿದ ಪ್ರೀಮಿಯಂಗೆ ಪಾಲಿಸಿದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. 

ಇದನ್ನೂ ಓದಿ- Ten Rupee Coins: ನಿಮ್ಮ ಬಳಿಯೂ 10 ರೂ. ನಾಣ್ಯ ಇದ್ಯಾ? ಚಿಂತಿಸುವ ಅಗತ್ಯವೇ ಇಲ್ಲ ಆರ್‌ಬಿ‌ಐನ ಈ ನಿಯಮ ತಿಳಿಯಿರಿ

ಪ್ರೀಮಿಯಂ ಪಾವತಿ: 
ಪೋಸ್ಟಲ್ ಲೈಫ್ ಇನ್ಶೂರೆನ್ಸ್ ನಲ್ಲಿ ಪಾಲಿಸಿದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಪಾವತಿ ಆಯ್ಕೆಯನ್ನು ಪಡೆಯುತ್ತಾರೆ. ಇಷ್ಟೇ ಅಲ್ಲ, ನೀವು ಬಯಸಿದರೆ, ನೀವು ಈ ಪಾಲಿಸಿಯನ್ನು 59 ವರ್ಷಗಳವರೆಗೆ ಎಂಡೋಮೆಂಟ್ ಅಶ್ಯೂರೆನ್ಸ್ ಪಾಲಿಸಿಯಾಗಿ ಪರಿವರ್ತಿಸಬಹುದು. ಆದಾಗ್ಯೂ, ಪ್ರೀಮಿಯಂ ಪಾವತಿಯ ದಿನಾಂಕ ಅಥವಾ ಮುಕ್ತಾಯದ ದಿನಾಂಕದ ಒಂದು ವರ್ಷದೊಳಗೆ ಆಗಬಾರದು ಎಂಬುದು ಗಮನಾರ್ಹ. 

ಈ ಪಾಲಿಸಿಯನ್ನು ಯಾರು ಖರೀದಿಸಬಹುದು?
19 ವರ್ಷದಿಂದ 55 ವರ್ಷಗಳ ನಡುವಿನ ಯಾವುದೇ ವ್ಯಕ್ತಿ ಸಂಪೂರ್ಣ ಜೀವ ವಿಮೆ-ಸುರಕ್ಷಾ ಪಾಲಿಸಿಯನ್ನು (Whole Life Insurance-Security Policy)ಖರೀದಿಸಬಹುದು. ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಬೋನಸ್‌ನೊಂದಿಗೆ ಕನಿಷ್ಠ ರೂ. 20,000 ಮತ್ತು ಗರಿಷ್ಠ ರೂ. 50 ಲಕ್ಷದ ವಿಮಾ ಮೊತ್ತವನ್ನು ಪಡೆಯುತ್ತಾರೆ. ಪಾಲಿಸಿ ಅವಧಿಗೂ ಮೊದಲೇ ಪಾಲಿಸಿದಾರರು ಮೃತಪಟ್ಟರೆ ಪಾಲಿಸಿದಾರರ ಉತ್ತರಾಧಿಕಾರಿ ಅಥವಾ ನಾಮಿನಿಗೆ ಈ ಮೊತ್ತ ದೊರೆಯಲಿದೆ. 

ಸಾಲ ಸೌಲಭ್ಯ: 
ಸಂಪೂರ್ಣ ಜೀವ ವಿಮೆ-ಸುರಕ್ಷಾ ಪಾಲಿಸಿಯನ್ನು ಖರೀದಿಸಿ ನಿರಂತರವಾಗಿ ನಾಲ್ಕು ವರ್ಷಗಳ ಪಾಲಿಸಿ ಹಣವನ್ನು ತುಂಬಿದ ಪಾಲಿಸಿದಾರರು ನಾಲ್ಕು ವರ್ಷಗಳ ಬಳಿಕ ತಮ್ಮ ಪಾಲಿಸಿಯ ಆಧಾರದ ಮೇಲೆ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು. 

ಇದನ್ನೂ ಓದಿ- ಪ್ರತಿನಿತ್ಯ ರೂ.400 ಠೇವಣಿ ಮಾಡಿ ಸಾಕು..ಇದರಿಂದು ನೀವು 71 ಲಕ್ಷ ಗಳಿಸಬಹುದು..!

ಪಾಲಿಸಿ ಸರೆಂಡರ್: 
ಪ್ರಮುಖ ವಿಷಯವೆಂದರೆ, ನೀವು ಈ ಪಾಲಿಸಿಯನ್ನು ದೀರ್ಘ ಸಮಯದವರೆಗೆ ಮುಂದುವರೆಸಲು ಸಾಧ್ಯವಾಗದಿದ್ದಲ್ಲಿ ಮೂರು ವರ್ಷಗಳು ಪೂರ್ಣಗೊಂಡ ನಂತರ ನೀವು ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಬಹುದು.  5 ವರ್ಷಗಳ ನಂತರ ನಿಮ್ಮ ಪಾಲಿಸಿಯನ್ನು ಸರೆಂಡರ್  ಮಾಡಿದರೆ  ವಿಮಾ ಮೊತ್ತದ ಮೇಲೆ ಅನುಪಾತದ ಬೋನಸ್ ಅನ್ನು ಪಾವತಿಸಲಾಗುತ್ತದೆ. 5 ವರ್ಷಗಳ ಮೊದಲು ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಿದಲ್ಲಿ ಅದರ ಮೇಲೆ ಬೋನಸ್‌ನ ಪ್ರಯೋಜನಗಳು ಲಭ್ಯವಿರುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News