PM Mandhan Yojana: ದೇಶದಾದ್ಯಂತ ಇರುವ ಅನ್ನದಾತರ ಪಾಲಿಗೆ ಸಂತಸದ ಸುದ್ದಿ ಪ್ರಕಟವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 13 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ರೈತರಿಗೆ ದೊಡ್ಡ ಕೊಡುಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯೊಂದಿಗೆ ಸರ್ಕಾರವು ಪ್ರತಿ ತಿಂಗಳು ರೈತರ ಖಾತೆಗೆ 3,000 ರೂ. ವರ್ಗಾವಣೆ ಮಾಡಲಿದೆ. ಕೇಂದ್ರ ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನು ನಡೆಸುತ್ತಿದೆ, ಅವುಗಳ ಅಡಿಯಲ್ಲಿ ಕೋಟ್ಯಂತರ ರೈತರ ಆದಾಯವು ಹೆಚ್ಚುತ್ತಿದೆ.
ಖಾತೆಗೆ ಹಣ ಬರಲಿದೆ
ಪ್ರಧಾನಮಂತ್ರಿ ಕಿಸಾನ್ ಯೋಜನೆ ಜೊತೆಗೆ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ ಯೋಜನೆ ಸಹ ಪ್ರಾರಂಭಿಸಲಾಗಿದೆ, ಇದರಲ್ಲಿ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಪ್ರಧಾನಮಂತ್ರಿ ಮಾನ್ ಧನ ಯೋಜನೆ ಅಡಿಯಲ್ಲಿ, ಸರ್ಕಾರವು ರೈತರ ಖಾತೆಗೆ ಪ್ರತಿ ತಿಂಗಳು 3000 ರೂ.ವರ್ಗಾಯಿಸುತ್ತದೆ.
ಇದನ್ನೂ ಓದಿ-SBI ನ ಈ ಹೊಸ ಯೋಜನೆಯಲ್ಲಿ ಸಿಗುತ್ತಿದೆ ಶೇ.7.1ರಷ್ಟು ಬಡ್ಡಿಯ ಲಾಭ! ಹೂಡಿಕೆಗೆ ಕೇವಲ ಮಾರ್ಚ್ ವರೆಗೆ ಮಾತ್ರ ಅವಕಾಶ
ರೈತರಿಗೆ ಪ್ರತಿ ತಿಂಗಳು ಪಿಂಚಣಿ ಸಿಗಲಿದೆ
ಈ ಯೋಜನೆಯಲ್ಲಿ ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯ ಪ್ರೀಮಿಯಂ ಅನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ, ಆದರೆ ಇದಕ್ಕಾಗಿ ನೀವು ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ-SBI ಪ್ರಸ್ತುತಪಡಿಸಿದೆ ಒಂದು ಜಬರ್ದಸ್ತ್ ಯೋಜನೆ, ಹೂಡಿಕೆಯ ಮೇಲೆ ಶೇ.7.6 ರಷ್ಟು ಬಡ್ಡಿಯ ಲಾಭ!
ಪ್ರತಿ ತಿಂಗಳು ಎಷ್ಟು ಹಣವನ್ನು ಪಾವತಿಸಬೇಕು?
ಈ ಪಿಂಚಣಿ ಯೋಜನೆಯಲ್ಲಿ ರೈತರು ಮಾಸಿಕ 55 ರಿಂದ 200 ರೂಪಾಯಿಗಳ ಕೊಡುಗೆಯನ್ನು ಪಾವತಿಸಬೇಕು ಮತ್ತು ನೀವು 60 ವರ್ಷ ವಯಸ್ಸನ್ನು ತಲುಪಿದಾಗ, ನಂತರ ನಿಮ್ಮ ಖಾತೆಗೆ ಪ್ರತಿ ತಿಂಗಳು 3000 ರೂಪಾಯಿಗಳ ಪಿಂಚಣಿ ಬರಲು ಪ್ರಾರಂಭಿಸುತ್ತದೆ. 18 ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಯನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ-ಇನ್ಮುಂದೆ ನೀವು ನಿಮ್ಮ ಕೂದಲುಗಳಿಂದಲೂ ಆದಾಯ ಗಳಿಸಬಹುದು, ತಿಂಗಳಿಗೆ ರೂ. 25,000 ಗಳಿಸುವ ಐಡಿಯಾ ಇಲ್ಲಿದೆ!
ಈ ಯೋಜನೆಯ ಪ್ರಯೋಜನಗಳೇನು?
ಭಾರತದ ಹಿರಿಯ ಅನ್ನದಾತರಿಗೆ ಪಿಂಚಣಿ ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ ರೈತರಿಗೆ ವರ್ಷದಲ್ಲಿ 36 ಸಾವಿರ ರೂ. ನೀಡಲಾಗುತ್ತದೆ. 40 ವರ್ಷದೊಳಗಿನ ರೈತರು ಈ ಯೋಜನೆಯ ಲಾಭ ಪಡೆಯಬಹುದು. ಪಿಂಚಣಿ ಪಡೆಯಲು, ಅವರು ತಮ್ಮ ವಯಸ್ಸಿನ ಪ್ರಕಾರ ಈ ಯೋಜನೆಯಲ್ಲಿ ಪ್ರತಿ ತಿಂಗಳು ಹಣವನ್ನು ಠೇವಣಿ ಮಾಡಬೇಕು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.