Beer Price Hike : ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ :ರಾಜ್ಯ ಬಜೆಟ್ ಹೊಸ್ತಿಲಲ್ಲೇ ದರ ಏರಿಕೆ

Beer Price Hike in Karnataka :ಬಿಯರ್ ಬೆಲೆ ಏರಿಕೆಯಲ್ಲಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ.   

Written by - Ranjitha R K | Last Updated : Feb 1, 2024, 02:53 PM IST
  • ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್
  • ಬಿಯರ್ ಬೆಲೆಯಲ್ಲಿ 10 ರಿಂದ 15 ರೂಪಾಯಿವರೆಗೆ ಹೆಚ್ಚಳ
  • ಹೊಸ ದರ ಇಂದಿನಿಂದಲೇ ಜಾರಿ
 Beer Price Hike : ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ :ರಾಜ್ಯ ಬಜೆಟ್ ಹೊಸ್ತಿಲಲ್ಲೇ ದರ ಏರಿಕೆ  title=

ಬೆಂಗಳೂರು : Beer Price Hike in Karnataka : ರಾಜ್ಯ ಬಜೆಟ್ ಹೊಸ್ತಿಲಲ್ಲೇ ಎಣ್ಣೆ ಪ್ರಿಯರಿಗೆ  ರಾಜ್ಯ ಸರ್ಕಾರ ಶಾಕ್ ನೀಡಿದೆ. ಬಿಯರ್ ಬೆಲೆ ಏರಿಕೆಯಲ್ಲಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಬಿಯರ್ ಬೆಲೆಯಲ್ಲಿ 10 ರಿಂದ 15 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ. ಬಿಯರ್ ಬೆಲೆ ಹೆಚ್ಚಳ ಮಾಡಿ ರಾಜ್ಯ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. 

ಬಿಯರ್ ದರ ಏರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಬಿಯರ್ ಅಬಕಾರಿ ಸುಂಕ ಹೆಚ್ಚಳಕ್ಕೆ ಜನವರಿ 20ರಂದು  ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈ ಪ್ರಕಾರ ಬಿಯರ್ ಬೆಲೆಯಲ್ಲಿ 10 ರಿಂದ 15 ರೂ ಹೆಚ್ಚಳವಾಗಿದೆ. ರಾಜ್ಯ ಸರ್ಕಾರದ ಆದೇಶದ ಅನ್ವಯ ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ. 

 ಇದನ್ನೂ ಓದಿ : Budget 2024: 40000 ರೈಲ್ವೆ ಕೋಚ್‌ಗಳು ವಂದೇ ಭಾರತ್ ರೂಪಕ್ಕೆ ಪರಿವರ್ತನೆ : ಮಧ್ಯಂತರ ಬಜೆಟ್ ನಲ್ಲಿ ರೈಲ್ವೆ ಝಲಕ್

ಎಷ್ಟು ದರ ಹೆಚ್ಚಳ : 

ಬ್ರ್ಯಾಂಡ್  -  ಹಳೆ ದರ  - ಹೊಸ ದರ

1. KF ಪ್ರಿಮಿಯಂ :  175: ₹185

2. ಟ್ಯೂಬರ್ಗ್  : ₹ 175: ₹185

3. ಬುಡ್ ವೈಸರ್ : ₹230 : ₹240

4. ಕಾರ್ಲ್ಸ್ ಬರ್ಗ್ : ₹230 : ₹240

5. UB ಸ್ಟ್ರಾಂಗ್ : ₹140 : ₹150

6. KF ಸ್ಟಾರ್ಮ್ : ₹175 : ₹195

7. ಹೆನಿಕೇನ್ : ₹225 : ₹240

8. ಹೆನಿಕೇನ್ ಸಿಲ್ವರ್ : ₹225 : ₹240

9. KF ಟಿನ್ (500ml) : ₹140 : ₹145

10. ಆ್ಯಮ್‌ಸ್ಟೆಲ್ : ₹225 : ₹240

 ಇದನ್ನೂ ಓದಿ : Budget 2024: ಈ ಬಾರಿಯ ಬಜೆಟ್ ನಲ್ಲಿ ಯಾವುದೂ ಅಗ್ಗವೂ ಅಲ್ಲ, ಯಾವುದೂ ದುಬಾರಿಯಲ್ಲ ! ಕಾರಣ ಇದೇ

ಕಾಂಗ್ರೆಸ್‌ನ ಐದು ಭರವಸೆಗಳನ್ನು ಈಡೇರಿಸಲು ಈ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ. ಒಟ್ಟಿನಲ್ಲಿ ಬಜೆಟ್ ಗೂ ಮುನ್ನವೇ ರಾಜ್ಯ ಕಾಂಗ್ರೆಸ್ ಸರ್ಕಾರ ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ ಹಾಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News