ಸೈಬರ್ ದಾಳಿಯಿಂದ ಬ್ಯಾಂಕ್‌ಗಳ UPI-IMPS ಸ್ಥಗಿತ!300 ಬ್ಯಾಂಕ್ ಗಳ ಪಟ್ಟಿಯಲ್ಲಿದೆಯೇ ನಿಮ್ಮ ಬ್ಯಾಂಕ್ ? ಇಲ್ಲಿ ಚೆಕ್ ಮಾಡಿ

ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಕೆಲ  ಸಮಯದವರೆಗೆ ಪೇಮೆಂಟ್ ಸಿಸ್ಟಮ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.ಈ ಬಗ್ಗೆ  ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ  ನಿನ್ನೆಯೇ ನೋಟೀಸ್ ಜಾರಿ ಮಾಡಿದೆ.   

Written by - Ranjitha R K | Last Updated : Aug 1, 2024, 12:33 PM IST
  • ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯಿಂದ ನೋಟಿಸ್ ಜಾರಿ
  • ಬ್ಯಾಂಕ್‌ಗಳ UPI, IPMS ಮತ್ತು ಇತರ ಪಾವತಿ ವ್ಯವಸ್ಥೆಗಳು ಸ್ಥಗಿತ
  • 300 ಸಣ್ಣ ಬ್ಯಾಂಕ್‌ಗಳ ವಹಿವಾಟು ಮೇಲೆ ಪರಿಣಾಮ
ಸೈಬರ್ ದಾಳಿಯಿಂದ ಬ್ಯಾಂಕ್‌ಗಳ UPI-IMPS ಸ್ಥಗಿತ!300 ಬ್ಯಾಂಕ್ ಗಳ ಪಟ್ಟಿಯಲ್ಲಿದೆಯೇ ನಿಮ್ಮ ಬ್ಯಾಂಕ್ ? ಇಲ್ಲಿ ಚೆಕ್ ಮಾಡಿ  title=

Retail Payments: ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇದರ ಪ್ರಕಾರ ಕೆಲವು ಬ್ಯಾಂಕ್‌ಗಳ UPI, IPMS ಮತ್ತು ಇತರ ಪಾವತಿ ವ್ಯವಸ್ಥೆಗಳು ಕೆಲವು ಸಮಯದವರೆಗೆ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.ಅನೇಕ ಬ್ಯಾಂಕ್‌ಗಳಿಗೆ ಸೇವೆಗಳನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಸಿಸ್ಟಮ್‌ನ ಮೇಲೆ 'ರಾನ್ಸಮ್‌ವೇರ್' ದಾಳಿಯ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ಮೂಲಗಳ ಪ್ರಕಾರ,ಈ ದಾಳಿಯಿಂದ 300 ಸಣ್ಣ ಬ್ಯಾಂಕ್‌ಗಳ ವಹಿವಾಟು ಮೇಲೆ ಪರಿಣಾಮ ಬೀರಿದೆ.

ನಿನ್ನೆ ಸಂಜೆ ನೋಟಿಸ್ ಜಾರಿ : 
ಪಾವತಿ ವ್ಯವಸ್ಥೆಯಲ್ಲಿ ಹೆಚ್ಚಿನ ದುಷ್ಪರಿಣಾಮವನ್ನು ತಪ್ಪಿಸಲು, NPCI ಕೆಲವು ಸಮಯದವರೆಗೆ C-Edge Technologies ಅನ್ನು ಬಳಸುವುದನ್ನು ನಿಲ್ಲಿಸಿದೆ. ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಈ ಅವಧಿಯಲ್ಲಿ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ NPCI ಜುಲೈ 31, 2024 ರಂದು ಸಂಜೆ 6:39 ಕ್ಕೆ ಸಾಮಾಜಿಕ ಮಾಧ್ಯಮ ಸೂಚನೆಯನ್ನು ನೀಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. 

ಇದನ್ನೂ ಓದಿ: Arecanut Price in Karnataka August 1: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

ಸಹಕಾರ ಮತ್ತು ಗ್ರಾಮೀಣ ಬ್ಯಾಂಕುಗಳಿಗೆ ಸೇವೆ :
C-Edge Technologies Limited ಒಂದು ತಂತ್ರಜ್ಞಾನ ಕಂಪನಿಯಾಗಿದೆ. ಇದು ಸಹಕಾರ ಮತ್ತು ಗ್ರಾಮೀಣ ಬ್ಯಾಂಕುಗಳಿಗೆ ಸೇವೆಗಳನ್ನು ಒದಗಿಸುತ್ತದೆ.ಸೀ-ಎಡ್ಜ್ ಟೆಕ್ನಾಲಜೀಸ್‌ನ ಕೆಲವು ಸಿಸ್ಟಮ್‌ಗಳ ಮೇಲೆ ransomware ದಾಳಿ ನಡೆದಿರುವುದು  ಗಮನಕ್ಕೆ ಬಂದಿದೆ ಎಂದು NPCI ಹೇಳಿದೆ.ಈ ಮೂಲಕ ಬಹುತೇಕ ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳಿಗೆ ಸೇವೆ ಒದಗಿಸಲಾಗುತ್ತದೆ.

ಗುಜರಾತ್‌ನ 17 ಬ್ಯಾಂಕ್‌ಗಳು ಬಾಧಿತ :
ವರದಿಯೊಂದರ ಪ್ರಕಾರ,ಗುಜರಾತ್‌ನ 17 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಇದರಿಂದ ಪ್ರಭಾವಿತವಾಗಿವೆ ಎನ್ನಲಾಗಿದೆ. ಅಮ್ರೇಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿಬಿ) ಕೂಡ ಈ ಪಟ್ಟಿಯಲ್ಲಿ ಸೇರಿದೆ, 'ಸಿ-ಎಡ್ಜ್' ಸಾಫ್ಟ್‌ವೇರ್‌ನಲ್ಲಿನ ಸಮಸ್ಯೆಯಿಂದಾಗಿ ಬ್ಯಾಂಕ್‌ನ ಆನ್‌ಲೈನ್ ವಹಿವಾಟು ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ: ಟೊಮೇಟೊಗಿಂತ ಅಗ್ಗವಾಯಿತು ಬಾದಾಮಿ !ಟೊಮೇಟೊ ಬೆಲೆ ಕೆ.ಜಿಗೆ 85 ಆದರೆ ಬಾದಾಮಿ ಬೆಲೆ 45ರಿಂದ 50ರೂಪಾಯಿ ಅಷ್ಟೇ !

ಸಿ-ಎಡ್ಜ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು ಮತ್ತು ಅಗತ್ಯ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎನ್‌ಪಿಸಿಐ ಹೇಳಿದೆ. ಬಾಧಿತ ಬ್ಯಾಂಕ್‌ಗಳ ಸಂಪರ್ಕವನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುವುದು.ಸೀ-ಎಡ್ಜ್ ಟೆಕ್ನಾಲಜೀಸ್‌ನ ವೆಬ್‌ಸೈಟ್ ಪ್ರಕಾರ, ಇದು TCS ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜಂಟಿ ಉದ್ಯಮವಾಗಿದೆ.

Ransomware ದಾಳಿ ಎಂದರೇನು? : 
Ransomware ದಾಳಿಯು ಒಂದು ರೀತಿಯ ಸೈಬರ್ ದಾಳಿಯಾಗಿದೆ.ಇದರಲ್ಲಿ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್ ಅಥವಾ ನೆಟ್‌ವರ್ಕ್ ಗೆ ಅಕ್ಸೆಸ್ ಪಡೆದು  ಪ್ರಮುಖ ಫೈಲ್‌ಗಳನ್ನು ಎನ್‌ಕ್ರಿಪ್ಟ್ ಮಾಡುತ್ತಾರೆ. ಎನ್‌ಕ್ರಿಪ್ಟ್ ಮಾಡುವುದು ಎಂದರೆ ಆ ಫೈಲ್‌ಗಳು ನಿಷ್ಪ್ರಯೋಜಕವಾಗುತ್ತವೆ, ಮತ್ತೆ ನೀವು ಅವುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ನಂತರ ಹ್ಯಾಕರ್‌ಗಳು ನಿಮ್ಮಿಂದ ಹಣವನ್ನು ಕೇಳುತ್ತಾರೆ, ಅದನ್ನು ರಾನ್ಸಮ್ ಎಂದು ಕರೆಯಲಾಗುತ್ತದೆ. ನೀವು ಹಣ ಪಾವತಿಸಿದರೆ ಮಾತ್ರ ನಿಮ್ಮ ಫೈಲ್‌ಗಳನ್ನು ಡೀಕ್ರಿಪ್ಟ್ ಮಾಡುವುದಾಗಿ ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News