Good News: ದೇಶಾದ್ಯಂತದ ಬ್ಯಾಂಕ್ ನೌಕರರಿಗೊಂದು ಭಾರಿ ಸಂತಸದ ಸುದ್ದಿ!

Bank Working Time Increase: ವಾರದಲ್ಲಿ ಎರಡು ದಿನ ರಜೆ ಬೇಕು ಎನ್ನುವ ಬ್ಯಾಂಕ್ ನೌಕರರ ಮನವಿಗೆ ಕೊನೆಗೂ ಮನ್ನಣೆ ಸಿಕ್ಕಂತಾಗಿದೆ!  

Written by - Nitin Tabib | Last Updated : Oct 27, 2022, 12:53 PM IST
  • ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್‌ಗೆ ಕಳುಹಿಸಿರುವ ಪತ್ರದಲ್ಲಿ ಕೆಲಸದ ಸಮಯವನ್ನು ಹೆಚ್ಚಿಸುವ ಕುರಿತು ಉಲ್ಲೇಖಿಸಲಾಗಿದೆ.
  • ನೌಕರರು ವಾರದಲ್ಲಿ 2 ದಿನ ರಜೆ ಬೇಕೆಂದು ಒತ್ತಾಯಿಸುತ್ತಿದ್ದು, ಅದಕ್ಕಾಗಿ ಅವರು ಪ್ರತಿದಿನ 30 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ಸಿದ್ಧರಿದ್ದಾರೆ (5 ದಿನಗಳು) ಎಂದೂ ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
Good News: ದೇಶಾದ್ಯಂತದ ಬ್ಯಾಂಕ್ ನೌಕರರಿಗೊಂದು ಭಾರಿ ಸಂತಸದ ಸುದ್ದಿ!  title=
Five Day Working In Bank

Five Day Work In Banks: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್‌ಗೆ ಕಳುಹಿಸಿರುವ ಪತ್ರದಲ್ಲಿ ಕೆಲಸದ ಸಮಯವನ್ನು ಹೆಚ್ಚಿಸುವ ಕುರಿತು ಉಲ್ಲೇಖಿಸಲಾಗಿದೆ. ನೌಕರರು ವಾರದಲ್ಲಿ 2 ದಿನ ರಜೆ ಬೇಕೆಂದು ಒತ್ತಾಯಿಸುತ್ತಿದ್ದು, ಅದಕ್ಕಾಗಿ ಅವರು ಪ್ರತಿದಿನ 30 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ಸಿದ್ಧರಿದ್ದಾರೆ (5 ದಿನಗಳು) ಎಂದೂ  ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕಾಗಿ ಬೆಳಗ್ಗೆ ಕೆಲಸ ಆರಂಭಿಸುವ ಸಮಯವನ್ನು 30 ನಿಮಿಷ ಮೊದಲೇ ಮಾಡಿಕೊಳ್ಳಬಹುದು ಎಂದು ನೌಕರರು ಹೇಳಿದ್ದಾರೆ. ಇದಲ್ಲದೆ, ಗ್ರಾಹಕ ಸೇವೆ ಅಥವಾ ನಗದುರಹಿತ ವಹಿವಾಟುಗಳನ್ನು ಪ್ರತಿದಿನ 30 ನಿಮಿಷಗಳಷ್ಟು ಹೆಚ್ಚಿಸಲು ಕೂಡ ಪ್ರಸ್ತಾಪಿಸಲಾಗಿದೆ.

ಪ್ರಸ್ತಾವಿತ ಯೋಜನೆಯ ಪ್ರಕಾರ, ಬ್ಯಾಂಕ್‌ನ ಕಾರ್ಯವೈಖರಿಯು 9.45 ರ ಬದಲಿಗೆ 9.15 ಕ್ಕೆ ಪ್ರಾರಂಭವಾಗಲಿದೆ ಮತ್ತು ಅದರ ನಿಗದಿತ ಸಮಯದಲ್ಲಿ 4.45 ರವರೆಗೆ ಮುಂದುವರಿಯುತ್ತದೆ. ನಗದು ವಹಿವಾಟಿನ ಸಮಯವು 9.30-1.30 ಗಂಟೆಗಳಿಂದ ಮತ್ತು ನಂತರ 2-3.30 ಗಂಟೆಗಳವರೆಗೆ ಇರಲಿದೆ. ಇದೇ ವೇಳೆ, ನಗದುರಹಿತ ವಹಿವಾಟುಗಳು ಮಧ್ಯಾಹ್ನ 3.30 ರಿಂದ ಸಂಜೆ 4.45 ರವರೆಗೆ ಇರಲಿದೆ.

ಇದನ್ನೂ ಓದಿ-7th Pay Commission: ತುಟ್ಟಿ ಭತ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ ಹೇಳಿದ್ದೇನು?

ವಿನಂತಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ
ಈ ಕುರಿತು ಮಾತನಾಡಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರು,  5 ದಿನಗಳ ಕೆಲಸದ ವಾರವನ್ನು ಬಹಳ ಸಮಯದಿಂದ ಓದ್ತ್ತಾಯಿಸಲಾಗುತ್ತಿದೆ. ಆದರೆ ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ಅದನ್ನು ಅಂಗೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಕಳೆದ ವರ್ಷ ಎಲ್‌ಐಸಿ ಮಂಜೂರಾತಿ ಪಡೆದಾಗ ಮತ್ತೊಮ್ಮೆ ಈ ಬೇಡಿಕೆ ಮುಂದಿಟ್ಟಿದ್ದು, ಈ ಬಾರಿ ಎರಡನೇ ಶನಿವಾರದಂದು ಪೂರ್ಣಗೊಳ್ಳದ ಕಡಿಮೆ ಕೆಲಸಕ್ಕೆ ಪರಿಹಾರ ನೀಡುವುದು ಹೇಗೆ ಎಂದು ಐಬಿಎ ಪ್ರಶ್ನಿಸಿದೆ. ‘ಪ್ರತಿದಿನ 30 ನಿಮಿಷಗಳ ಕೆಲಸದ ಸಮಯವನ್ನು ಹೆಚ್ಚಿಸಲು ನಾವು ಒಪ್ಪಿದ್ದೇವೆ, ಇದನ್ನು ಐಬಿಎ, ಸರ್ಕಾರ ಮತ್ತು ಆರ್‌ಬಿಐ ಒಪ್ಪುತ್ತದೆ ಎಂದು ನಾವು ಭಾವಿಸುತ್ತೇವೆ' ಎಂದು ವೆಂಕಟಾಚಲಂ ಹೇಳಿದ್ದಾರೆ.

ಇದನ್ನೂ ಓದಿ-PNB FD Rate Hike: ವಾರದಲ್ಲಿ ಎರಡನೇ ಬಾರಿಗೆ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ ಪಿಎನ್‌ಬಿ

ವೇತನ ಹೆಚ್ಚಳ ಮಾಡಲು ಐಬಿಎ ಮುಂದಾಗಿತ್ತು
ಕೋವಿಡ್ -19 ಸಾಂಕ್ರಾಮಿಕದ ಉತ್ತುಂಗದಲ್ಲಿ ಉದ್ಯೋಗಿಗಳ ಒಕ್ಕೂಟದಿಂದ ಕೆಲಸದ ದಿನಗಳನ್ನು ಕಡಿತಗೊಳಿಸುವ ಬೇಡಿಕೆಯನ್ನು ಇಡಲಾಗಿತ್ತು. ಈ ಬೇಡಿಕೆಯನ್ನು ತಿರಸ್ಕರಿಸಿದ್ದ ಐಬಿಎ, ಉದ್ಯೋಗಿಗಳ ವೇತನವನ್ನು ಶೇ.19ರಷ್ಟು ಹೆಚ್ಚಿಸಬಹುದು ಎಂದು ಹೇಳಿತ್ತು. ಪ್ರಸ್ತುತ, ಬ್ಯಾಂಕ್ ಉದ್ಯೋಗಿಗಳಿಗೆ ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಇದೆ ಎಂಬುದು ಇಲ್ಲಿ ಉಲ್ಲೇಖನೀಯ. ನೌಕರರ ಬೇಡಿಕೆಗೆ ಮನ್ನಣೆ ದೊರೆತರೆ ಬ್ಯಾಂಕ್ ನಲ್ಲಿ ದಿನಕ್ಕೆ 7.30 ಗಂಟೆ ಕೆಲಸ ಮಾಡಬೇಕಾಗುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಅರ್ಧ ಗಂಟೆ ಹೆಚ್ಚುವರಿ ಸಮಯವನ್ನು ಸಹ ಪಡೆಯಲಿದ್ದಾರೆ. ಆದರೆ, ಶನಿವಾರದಂದು ಕೆಲಸ ಮುಗಿಸಲು ಮುಂದಾದವರಿಗೆ ಇದು ಸ್ವಲ್ಪ ಕಷ್ಟವಾಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News