ಎಚ್ಚರ ..! 'ಗ್ರಾಹಕರ ತಪ್ಪಿನಿಂದ ಹಣ ಕಳೆದುಕೊಂಡರೆ ಬ್ಯಾಂಕ್ ಹೊಣೆಯಲ್ಲ '

ಬ್ಯಾಂಕ್ ಫ್ರಾಡ್ ಆದಾಗ ತಕ್ಷಣ ಬ್ಯಾಂಕ್ ಗೆ  ದೂರು ನೀಡಿದರೆ ಹಣದ ಮರುಪಾವತಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಆದರೆ ಇದು ಎಲ್ಲ ಪ್ರಕರಣಗಳಿಗೂ ಅನ್ವಯಿಸುವುದಿಲ್ಲ. ಗ್ರಾಹಕರ ತಪ್ಪಿನಿಂದ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್  ಹೊಣೆಯಾಗುವುದಿಲ್ಲ.   

Written by - Ranjitha R K | Last Updated : Mar 18, 2021, 03:26 PM IST
  • ಗುಜರಾತ್‌ನ ಅಮ್ರೆಲಿ ಜಿಲ್ಲೆಯಲ್ಲಿ ಘಟನೆ
  • ತನ್ನದೇ ತಪ್ಪಿನಿಂದಾಗಿ ಹಣ ಕಳೆದುಕೊಂಡ ಶಿಕ್ಷಕ
  • ಗ್ರಾಹಕರ ತಪ್ಪಿಗೆ ಬ್ಯಾಂಕ್ ಹೊಣೆ ಅಲ್ಲ ಎಂದ CDRC
ಎಚ್ಚರ ..! 'ಗ್ರಾಹಕರ ತಪ್ಪಿನಿಂದ ಹಣ ಕಳೆದುಕೊಂಡರೆ ಬ್ಯಾಂಕ್ ಹೊಣೆಯಲ್ಲ '  title=
ಗ್ರಾಹಕರ ತಪ್ಪಿಗೆ ಬ್ಯಾಂಕ್ ಹೊಣೆ ಅಲ್ಲ ಎಂದ CDRC (file photo)

ಅಹಮದಾಬಾದ್:  ಈಗ ಬಹುತೇಕ ಪ್ರತಿಯೊಬ್ಬ ವ್ಯಕ್ತಿಯು ಬ್ಯಾಂಕ್ (Bank) ಖಾತೆಯನ್ನು ಹೊಂದಿರುತ್ತಾನೆ. ಇತ್ತೀಚೀನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ ನಲ್ಲಿ ಮೋಸ ಆಯಿತು. ಆನ್ ಲೈನ್ ಮೋಸ ಆಯಿತು ಎನ್ನುವ ಮಾತನ್ನು ನಾವು ದಿನ ಬೆಳಗಾದರೆ ನೋಡ್ತಾನೆ ಇರುತ್ತೇವೆ. ಅಲ್ಲದೆ ಬ್ಯಾಂಕ್ ಫ್ರಾಡ್ (Bank fraud) ಆದಾಗ ತಕ್ಷಣ ಬ್ಯಾಂಕ್ ಗೆ  ದೂರು ನೀಡಿದರೆ ಹಣದ ಮರುಪಾವತಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಆದರೆ ಇದು ಎಲ್ಲ ಪ್ರಕರಣಗಳಿಗೂ ಅನ್ವಯಿಸುವುದಿಲ್ಲ. ಗ್ರಾಹಕರ ತಪ್ಪಿನಿಂದ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್  ಹೊಣೆಯಾಗುವುದಿಲ್ಲ.   

3 ವರ್ಷ ಹಿಂದಿನ ಪ್ರಕರಣ : 
ಏಪ್ರಿಲ್ 2, 2018 ರಂದು, ಗುಜರಾತ್‌ನ ಅಮ್ರೆಲಿ ಜಿಲ್ಲೆಯ ನಿವೃತ್ತ ಶಿಕ್ಷಕ ಕುರ್ಜಿ ಜಾವಿಯಾ (Kurji Javia)  ಬ್ಯಾಂಕ್ ಫ್ರಾಡ್ ಆಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ಯಾರೋ ಒಬ್ಬ ವ್ಯಕ್ತಿ  ಎಸ್‌ಬಿಐ (SBI) ಮ್ಯಾನೇಜರ್ ಎಂದು ಹೇಳಿ ತನ್ನ ಎಟಿಎಂ (ATM) ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನಂತರ  ತಮ್ಮ ಖಾತೆಯಿಂದ 41,500 ರೂಗಳನ್ನು ತೆಗೆಯಾಗಿದೆ ಎಂದು ಸಂತ್ರಸ್ತೆ ಬ್ಯಾಂಕಿಗೆ ದೂರು ನೀಡಿದ್ದರು. ಇದೀಗ ಈ  ಪ್ರಕರಣ ಇತ್ಯರ್ಥವಾಗಿದ್ದು, ಈ ತಪ್ಪಿಗೆ ಗ್ರಾಹಕರೇ ಹೊಣೆ ಎಂದು  CDRC  ಹೇಳಿದೆ. 

ಇದನ್ನೂ ಓದಿ : Gold-Silver Price: ಆಭರಣ ಪ್ರಿಯರಿಗೆ 'ಬಿಗ್ ಶಾಕ್' : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ!

ಸಿಡಿಆರ್‌ಸಿ ಯಿಂದ ಸಿಗದ ಪರಿಹಾರ : 
ಪ್ರರಣದ ವಿಚಾರಣೆ ನಡೆಸಿದ  Consumer Dispute Redressal Commission ಕೇಸ್ ಅನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿತು. ನಂತರ  ಇಡೀ ಪ್ರಕರಣದಲ್ಲಿ ಬ್ಯಾಂಕಿನ ಯಾವುದೇ ದೋಷವಿಲ್ಲ ಎಂದು ಆಯೋಗ ಹೇಳಿದೆ.  ಈ ಕೇಸ್ ನಲ್ಲಿ  ಖಾತೆದಾರರ ತಪ್ಪಿನಿಂದಾಗಿ  ಎಟಿಎಂ ಪಿನ್ ಸೋರಿಕೆಯಾಗಿದೆ. ಹಾಗಾಗಿ ಅಕೌಂಟ್ ನಿಂದ (Account) ಹಣ ತೆಗೆಯುವುದು ಸಾಧ್ಯವಾಗಿದೆ ಎಂದು ಆಯೋಗ ಹೇಳಿದೆ.  ಈ ಪ್ರಕರಣದಲ್ಲಿ CDRC ಎಸ್‌ಬಿಐಗೆ ಕ್ಲೀನ್ ಚಿಟ್ ನೀಡಿದೆ. ಗ್ರಾಹಕರ ತಪ್ಪಿನಿಂದ ಪಿನ್ ಸೋರಿಕೆಯಾಗಿದ್ದು, ಈ ನಷ್ಟಕ್ಕೆ ಬ್ಯಾಂಕ್ ಹೊಣೆ ಯಾಗುವುದಿಲ್ಲ  ಎಂದು ಹೇಳಿದೆ. 

ಮೋಸಗಾರರಿದ್ದಾರೆ ಎಚ್ಚರಿಕೆ : 
ತಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಆರ್‌ಬಿಐ (RBI) ಪದೇ ಪದೇ ಮನವಿ ಮಾಡುತ್ತಲೇ ಇದೆ. ಯಾವುದೇ ಸಂದರ್ಭದಲ್ಲಿ, ಎಟಿಎಂ ಪಿನ್, ಸಿವಿವಿ (CVV) ಮತ್ತು ಸಿಕ್ರೆಟ್  ಕೋಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಆರ್ ಬಿ ಐ ಹೇಳಿದೆ. ಅಲ್ಲದೆ ಗ್ರಾಹಕರಿಂದ ಯಾವುದೇ ಮಾಹಿತಿಯನ್ನು ಫೋನ್ ಮೂಲಕ ಪಡೆಯದಂತೆ ಎಲ್ಲಾ ಬ್ಯಾಂಕ್ ಗಳಿಗೂ ಸೂಚನೆ ನೀಡಿದೆ.  

ಇದನ್ನೂ ಓದಿ : PM-KISAN ಯೋಜನೆಯ ಪ್ರಮಾಣ ಹೆಚ್ಚಾಗುವುದೇ? ಸರ್ಕಾರ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News