Bank Holidays : ಬ್ಯಾಂಕ್ ಗ್ರಾಹಕರ ಗಮನಕ್ಕೆ : ನಾಳೆಯಿಂದ 3 ದಿನ ಬ್ಯಾಂಕ್‌ಗಳು ಬಂದ್!

ನೀವು ಬ್ಯಾಂಕಿಗೆ ಹೋಗುವುದು ವ್ಯರ್ಥವಾಗಬಹುದು. ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ರಜೆ ಇದೆ.

Written by - Channabasava A Kashinakunti | Last Updated : May 13, 2022, 05:49 PM IST
  • ನಾಳೆಯಿಂದ 3 ದಿನ ಬ್ಯಾಂಕ್‌ಗಳು ರಜೆ ಇವೆ.
  • ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ರಜೆ ಇದೆ.
  • ನೀವು ಮೇ 17 ಮಂಗಳವಾರ ಬ್ಯಾಂಕ್‌ಗೆ ಹೋಗಬಹುದು.
Bank Holidays : ಬ್ಯಾಂಕ್ ಗ್ರಾಹಕರ ಗಮನಕ್ಕೆ : ನಾಳೆಯಿಂದ 3 ದಿನ ಬ್ಯಾಂಕ್‌ಗಳು ಬಂದ್! title=

Bank Holidays In May 2022 : ನೀವು ಬ್ಯಾಂಕ್ ಸಂಬಂಧಿತ ಕೆಲಸವನ್ನು ಮಾಡಲು ಶಾಖೆಗೆ ಹೋಗುತ್ತಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದಾಗಿದೆ. ನಾಳೆಯಿಂದ 3 ದಿನ ಬ್ಯಾಂಕ್‌ಗಳು ರಜೆ ಇವೆ. ಹೀಗಾಗಿ, ನೀವು ಬ್ಯಾಂಕಿಗೆ ಹೋಗುವುದು ವ್ಯರ್ಥವಾಗಬಹುದು. ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ರಜೆ ಇದೆ.

3 ದಿನಗಳ ಕಾಲ ಬ್ಯಾಂಕ್‌ಗಳು ಬಂದ್

ಆರ್‌ಬಿಐ ಮೇ ತಿಂಗಳ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಬುದ್ಧ ಪೂರ್ಣಿಮೆಯ ಕಾರಣ ದೇಶದ ಹಲವು ರಾಜ್ಯಗಳಲ್ಲಿ ಮೇ 16 ರಂದು ಬ್ಯಾಂಕ್‌ಗಳು ರಜೆ ಇದೆ. ಅದಕ್ಕೂ ಮುನ್ನ ಮೇ 15 ಭಾನುವಾರದ ರಜೆ. ಮತ್ತು ನಾಳೆ ಅಂದರೆ ಮೇ 14, ಎರಡನೇ ಶನಿವಾರದಂದು ಬ್ಯಾಂಕ್‌ಗಳು ಬಂದ್. ಅಂದರೆ, ಒಟ್ಟಾರೆಯಾಗಿ ನಾಳೆಯಿಂದ ಸತತ 3 ದಿನಗಳವರೆಗೆ ಬ್ಯಾಂಕುಗಳು ರಜೆ ಇರಲಿವೆ. ನೀವು ಬ್ಯಾಂಕ್‌ಗೆ ಸಂಬಂಧಿಸಿದ ನಿಮ್ಮದು ಯಾವುದೇ ಕೆಲಸ ಇದ್ದಾರೆ, ನೀವು ಮೇ 17 ಮಂಗಳವಾರ ಬ್ಯಾಂಕ್‌ಗೆ ಹೋಗಬಹುದು.

ಇದನ್ನೂ ಓದಿ : Arecanut Today Price: ವಾಣಿಜ್ಯ ಬೆಳೆ ಅಡಿಕೆಯ ಇಂದಿನ ಪೇಟೆ ಧಾರಣೆ

ಮೇ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ

1 ಮೇ 2022: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ. ದೇಶಾದ್ಯಂತ ಬ್ಯಾಂಕ್‌ಗಳು ರಜೆ. ಈ ದಿನ ಭಾನುವಾರವೂ ರಜೆ ಇರುತ್ತದೆ.
2 ಮೇ 2022: ಮಹರ್ಷಿ ಪರಶುರಾಮ ಜಯಂತಿ - ಹಲವು ರಾಜ್ಯಗಳಲ್ಲಿ ರಜೆ
ಮೇ 3, 2022: ಈದ್-ಉಲ್-ಫಿತರ್, ಬಸವ ಜಯಂತಿ (ಕರ್ನಾಟಕ)
4ನೇ ಮೇ 2022: ಈದ್-ಉಲ್-ಫಿತರ್, (ತೆಲಂಗಾಣ)
8 ಮೇ 2022: ಭಾನುವಾರ
9 ಮೇ 2022: ಗುರು ರವೀಂದ್ರನಾಥ ಜಯಂತಿ - ಪಶ್ಚಿಮ ಬಂಗಾಳ ಮತ್ತು ತ್ರಿಪುರ
14 ಮೇ 2022: ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ
15 ಮೇ 2022: ಭಾನುವಾರ
16 ಮೇ 2022: ಬುಧ ಹುಣ್ಣಿಮೆ
22 ಮೇ 2022: ಭಾನುವಾರ
24 ಮೇ 2022: ಕಾಜಿ ನಜ್ರುಲ್ ಇಸ್ಮಲ್ ಜನ್ಮದಿನ - ಸಿಕ್ಕಿಂ
28 ಮೇ 2022: 4ನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ
29 ಮೇ 2022: ಭಾನುವಾರ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News