Bank Holidays: ಮಾರ್ಚ್‌ನಲ್ಲಿ 13 ದಿನ ಬ್ಯಾಂಕ್‌ಗಳು ಬಂದ್!

Bank Holidays March 2022: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಮಾರ್ಚ್ 2022 ರಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸಂಪೂರ್ಣ ಪಟ್ಟಿಯನ್ನು ನೋಡೋಣ.

Written by - Yashaswini V | Last Updated : Feb 28, 2022, 10:05 AM IST
  • ಮಾರ್ಚ್ 2022 ರಲ್ಲಿ 13 ದಿನಗಳ ಬ್ಯಾಂಕ್ ರಜೆ ಇರುತ್ತದೆ
  • ಆರ್‌ಬಿಐ ರಜೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ
  • ಶಾಖೆಗೆ ಹೋಗುವ ಮೊದಲು ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ
Bank Holidays: ಮಾರ್ಚ್‌ನಲ್ಲಿ 13 ದಿನ ಬ್ಯಾಂಕ್‌ಗಳು ಬಂದ್! title=
Bank Holidays in March

Bank Holidays March 2022: ನಾಳೆಯಿಂದ ಮಾರ್ಚ್ ತಿಂಗಳು ಪ್ರಾರಂಭವಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವೂ ಸಹ ಮಾರ್ಚ್ ತಿಂಗಳಿನಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಬಯಸಿದರೆ, ನಂತರ ಶಾಖೆಗೆ ಹೋಗುವ ಮೊದಲು, ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಖಂಡಿತವಾಗಿ ಪರಿಶೀಲಿಸಿ. ಆರ್‌ಬಿಐ ಬಿಡುಗಡೆ ಮಾಡಿರುವ ಈ ಪಟ್ಟಿಯ ಪ್ರಕಾರ, ಮಾರ್ಚ್ 2022 ರಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು (Bank Holidays in March)  ಮುಚ್ಚಲ್ಪಡುತ್ತವೆ. 
 
ಆರ್‌ಬಿಐ ಮಾಹಿತಿ ನೀಡಿದೆ:
ಮಾರ್ಚ್ ತಿಂಗಳಲ್ಲಿ, ಬ್ಯಾಂಕ್‌ಗಳಿಗೆ ಒಟ್ಟು 13 ದಿನಗಳು (Bank Holidays March 2022) ರಜೆ ಇರಲಿವೆ. ಇವುಗಳಲ್ಲಿ 4 ಭಾನುವಾರದ ರಜಾದಿನಗಳು ಸೇರಿವೆ. ಇದಲ್ಲದೆ, ಹಲವು ಹಬ್ಬಗಳ ರಜಾದಿನಗಳು ಇವೆ. ಆದರೆ, ಎಲ್ಲಾ ರಾಜ್ಯಗಳಿಗೆ ಇದು ಒಂದೇ ರೀತಿ ಆಗಿರುವುದಿಲ್ಲ. ಇಡೀ ದೇಶದಲ್ಲಿ ಏಕಕಾಲದಲ್ಲಿ 13 ದಿನಗಳವರೆಗೆ ಬ್ಯಾಂಕುಗಳನ್ನು ಮುಚ್ಚಲಾಗುವುದಿಲ್ಲ. 

ಇದನ್ನೂ ಓದಿ- Honda Activa: ಕೇವಲ 3,999 ರೂಗಳಲ್ಲಿ ಹೊಸ ಆಕ್ಟಿವಾವನ್ನು ಮನೆಗೆ ತನ್ನಿ, ರೂ. 5,000 ಕ್ಯಾಶ್‌ಬ್ಯಾಕ್ ಕೂಡ ಲಭ್ಯ

ಆರ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ  (Bank Holidays List)  ಪ್ರಕಾರ, ಈ ರಜಾದಿನಗಳು ವಿವಿಧ ರಾಜ್ಯಗಳಲ್ಲಿವೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಭಾನುವಾರ ಹೊರತುಪಡಿಸಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇದಲ್ಲದೆ ಈ ತಿಂಗಳು ಕೆಲವು ಹಬ್ಬಗಳು ಇರುವುದರಿಂದ ಆ ದಿನಗಳಂದು ಬ್ಯಾಂಕುಗಳಿಗೆ ರಜೆ ಇರಲಿದೆ.

ಇದನ್ನೂ ಓದಿ- Good News: ಅಗ್ಗದ ದರದಲ್ಲಿ ನಾಳೆಯಿಂದ ಚಿನ್ನ ಖರೀದಿಸಲು ಸರ್ಕಾರ ನೀಡುತ್ತದೆ ಈ ಸುವರ್ಣಾವಕಾಶ, ಬೆಲೆ ಇಲ್ಲಿ ತಿಳಿದುಕೊಳ್ಳಿ

ರಜಾದಿನಗಳ ಪಟ್ಟಿಯನ್ನು ನೋಡಿ  (Bank Holidays List)  :
ಮಾರ್ಚ್ 1 - ಮಹಾಶಿವರಾತ್ರಿ ಅಗರ್ತಲಾ, ಐಜ್ವಾಲ್, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತ್ತಾ, ನವದೆಹಲಿ, ಪಣಜಿ, ಪಾಟ್ನಾ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳಿಗೆ ರಜೆ.
ಮಾರ್ಚ್ 3- ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕ್ ರಜೆ
ಮಾರ್ಚ್ 4 - ಚಾಪ್ಚಾರ್ ಕುಟ್ ಐಜ್ವಾಲ್ ಪ್ರದೇಶಗಳಲ್ಲಿ ಬ್ಯಾಂಕ್ ಮುಚ್ಚಲ್ಪಡುತ್ತದೆ
6 ಮಾರ್ಚ್ - ಭಾನುವಾರ ಸಾಪ್ತಾಹಿಕ ರಜೆ
12 ಮಾರ್ಚ್ - ತಿಂಗಳ ಎರಡನೇ ಶನಿವಾರ
13 ಮಾರ್ಚ್ - ಭಾನುವಾರ ಸಾಪ್ತಾಹಿಕ ರಜೆ
17 ಮಾರ್ಚ್ - ಹೋಳಿಕಾ ದಹನ್ ಡೆಹ್ರಾಡೂನ್, ಕಾನ್ಪುರ, ಲಕ್ನೋ ಮತ್ತು ರಾಂಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಮಾರ್ಚ್ 18- ಬೆಂಗಳೂರು, ಭುವನೇಶ್ವರ್, ಚೆನ್ನೈ, ಇಂಫಾಲ್, ಕೊಚ್ಚಿ, ಕೋಲ್ಕತ್ತಾ ಮತ್ತು ತಿರುವನಂತಪುರಂ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಹೋಳಿ/ಧೂಲೇಟಿ/ಡೋಲ್ ಜಾತ್ರಾ ಬ್ಯಾಂಕ್ ಗಳಿಗೆ ರಜೆ.
19 ಮಾರ್ಚ್- ಹೋಳಿ/ಯೋಸಾಂಗ್ ಬ್ಯಾಂಕ್ ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ರಜೆ ಇರಲಿದೆ.
20 ಮಾರ್ಚ್- ಭಾನುವಾರ ಸಾಪ್ತಾಹಿಕ ರಜೆ
22 ಮಾರ್ಚ್- ಬಿಹಾರ ಡೇ ಬ್ಯಾಂಕ್ ಪಾಟ್ನಾದಲ್ಲಿ ಬ್ಯಾಂಕ್ಗಳಿಗೆ ರಜೆ. 
26 ಮಾರ್ಚ್- ತಿಂಗಳ ನಾಲ್ಕನೇ ಶನಿವಾರ
27 ಮಾರ್ಚ್- ಭಾನುವಾರ ವಾರದ ರಜೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News