Bank Holidays in July 2022: ಅಬ್ಬಬ್ಬಾ ಜುಲೈನಲ್ಲಿ ಬ್ಯಾಂಕ್‌ಗಳಿಗೆ ಇಷ್ಟು ದಿನ ರಜೆ!

ಹಬ್ಬಗಳ ಆಚರಣೆ, ವಿಶೇಷ ದಿನಗಳು ಸೇರಿ ವಾರದ ರಜೆಗಳಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾ ದಿನಗಳ ಕ್ಯಾಲೆಂಡರ್ ಪ್ರಕಾರ, ಜುಲೈ ತಿಂಗಳಲ್ಲಿ ಶನಿವಾರ ಹಾಗೂ ಭಾನುವಾರ ಸೇರಿದಂತೆ ಏಳು ವಾರಾಂತ್ಯದ ರಜಾ ದಿನಗಳಿವೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂಬುದನ್ನು ನೋಡೋಣ. 

Written by - Bhavishya Shetty | Last Updated : Jun 27, 2022, 03:45 PM IST
  • ಜುಲೈ ತಿಂಗಳಲ್ಲಿ ಅನೇಕ ಹಬ್ಬಗಳು ಬರುತ್ತಿದೆ
  • ಆರ್‌ಬಿಐ ರಜಾದಿನಗಳ ಕ್ಯಾಲೆಂಡರ್ ಪಟ್ಟಿ ಬಿಡುಗಡೆ
  • 14 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಸಿಗಲಿವೆ
Bank Holidays in July 2022: ಅಬ್ಬಬ್ಬಾ ಜುಲೈನಲ್ಲಿ ಬ್ಯಾಂಕ್‌ಗಳಿಗೆ ಇಷ್ಟು ದಿನ ರಜೆ!  title=
Bank Holidays

ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ ತಿಂಗಳಲ್ಲಿ ಬರುವ ರಜಾದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಆಯಾ ರಾಜ್ಯಗಳಿಗೆ ಸಂಬಂಧಪಟ್ಟಂತೆ 14 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಸಿಗಲಿವೆ. 

ಇದನ್ನೂ ಓದಿ: ದಕ್ಷಿಣದ ಸಿನೆಮಾಗಳನ್ನು ರಿಮೇಕ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಬಾಲಿವುಡ್ ಚಿತ್ರಗಳಿವು ..!

ಜುಲೈ ತಿಂಗಳಲ್ಲಿ ಅನೇಕ ಹಬ್ಬಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವಾರದ ರಜೆಗಳು ಸೇರಿ ಒಟ್ಟು 14 ದಿನ ಬ್ಯಾಂಕ್‌ ಬಂದ್‌ ಆಗಲಿದೆ. ರಥಯಾತ್ರೆ, ಖರ್ಚಿ ಪೂಜಾ, ಬಕ್ರೀದ್, ಈದ್ ಉಲ್ ಅಳಾ, ಭಾನು ಜಯಂತಿ ಹೀಗೆ ಅನೇಕ ರಜಾದಿನಗಳಿವೆ. ಆದರೆ ಎಲ್ಲಾ ರಾಜ್ಯಗಳಲ್ಲಿ ಈ ಹಬ್ಬಗಳನ್ನು ಆಚರಣೆ ಮಾಡುವುದಿಲ್ಲ. ಹೀಗಾಗಿ ಸೀಮಿತ ರಾಜ್ಯಗಳಿಗೆ ಮಾತ್ರ ರಜೆ ಸಿಗಲಿದೆ. 

ಹಬ್ಬಗಳ ಆಚರಣೆ, ವಿಶೇಷ ದಿನಗಳು ಸೇರಿ ವಾರದ ರಜೆಗಳಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾ ದಿನಗಳ ಕ್ಯಾಲೆಂಡರ್ ಪ್ರಕಾರ, ಜುಲೈ ತಿಂಗಳಲ್ಲಿ ಶನಿವಾರ ಹಾಗೂ ಭಾನುವಾರ ಸೇರಿದಂತೆ ಏಳು ವಾರಾಂತ್ಯದ ರಜಾ ದಿನಗಳಿವೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂಬುದನ್ನು ನೋಡೋಣ. 

ಜುಲೈ 1: ಭುವನೇಶ್ವರ ಹಾಗೂ ಇಂಫಾಲ ಇತರ ಪ್ರದೇಶಗಳಲ್ಲಿ ರಥ್ ಯಾತ್ರೆ ಹಾಗೂ ಕಂಗ್ ಹಬ್ಬದ ಪ್ರಯುಕ್ತ ಬ್ಯಾಂಕ್‌ ರಜೆ
ಜುಲೈ 3: ತಿಂಗಳ ಮೊದಲ ಭಾನುವಾರ 
ಜುಲೈ 7: ಖರ್ಚಿ ಪೂಜೆಯ ಅಂಗವಾಗಿ ಅಗರ್ತಲಾದಲ್ಲಿ ರಜೆ
ಜುಲೈ 9: ಬಕ್ರೀದ್ ಅಂಗವಾಗಿ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್ ಬಂದ್‌ (ಎರಡನೇ ಶನಿವಾರವಾದ್ದರಿಂದ ದೇಶದ ಇತರೆಡೆ ಸಹ ರಜೆ) 
ಜುಲೈ 10: ಎರಡನೇ ಭಾನುವಾರ 
ಜುಲೈ 11: ಈದ್ ಅಲ್ -ಅಳಾ ಅಂಗವಾಗಿ ಶ್ರೀನಗರ ಹಾಗೂ ಜಮ್ಮುವಿನಲ್ಲಿ ರಜೆ
ಜುಲೈ 13: ಭಾನು ಜಯಂತಿ ಅಂಗವಾಗಿ ಗ್ಯಾಂಗ್‌ಟಕ್‌ನಲ್ಲಿ ರಜೆ
ಜುಲೈ 14: ಬೆಹ್ದಿಂಖ್ಲಾಹಂ(Behdienkhlam) ಹಿನ್ನೆಲೆಯಲ್ಲಿ ಶಿಲ್ಲಾಂಗ್ ಪ್ರದೇಶದಲ್ಲಿ ಬ್ಯಾಂಕ್ ರಜೆ
ಜುಲೈ 16: ಹರೆಲಾ ಅಂಗವಾಗಿ ಡೆಹ್ರಾಡೂನ್ ಭಾಗದಲ್ಲಿ ರಜೆ
ಜುಲೈ 17: ಮೂರನೇ ಭಾನುವಾರ 
ಜುಲೈ 23: ನಾಲ್ಕನೇ ಶನಿವಾರ
ಜುಲೈ 24: ನಾಲ್ಕನೇ ಭಾನುವಾರ
ಜುಲೈ 26: ಕೇರ್ ಪೂಜಾ ಅಂಗವಾಗಿ ಅಗರ್ತಲಾದಲ್ಲಿ ರಜೆ
ಜುಲೈ 31: ತಿಂಗಳ ಐದನೇ ಭಾನುವಾರ

ಇದನ್ನೂ ಓದಿ: Vikrant Rona: ʻವಿಕ್ರಾಂತ್‌ ರೋಣʼನ ಬಗ್ಗೆ ಹೀಗಂದ್ರು ಅಮಿತಾಬ್‌ ಬಚ್ಚನ್‌!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News