Bank Holidays : ಇಂದೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ : ನಾಳೆಯಿಂದ 4 ದಿನ ಬ್ಯಾಂಕ್ ರಜೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಬ್ಯಾಂಕುಗಳು ಈ ತಿಂಗಳ ಕೊನೆಯ ವಾರದಲ್ಲಿ ಆಗಸ್ಟ್ 28 ರಿಂದ ಆಗಸ್ಟ್ 31 ರವರೆಗೆ ರಜೆ ಇರುತ್ತವೆ.ಈ ಸಮಯದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಮತ್ತು ಎಟಿಎಂ ಸೇವೆಗಳು ಕಾರ್ಯನಿರ್ವಹಿಸುತ್ತವೆ.

Written by - Channabasava A Kashinakunti | Last Updated : Aug 27, 2021, 09:11 AM IST
  • ನಿಮಗೆ ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳಿದ್ದರೆ
  • ಇಂದೇ ಮುಗಿಸಿಕೊಳ್ಳಿ ನಾಳೆಯಿಂದ ಸತತ 4 ದಿನಗಳವರೆಗೆ ಬ್ಯಾಂಕ್ ರಜೆ
  • ಈ ತಿಂಗಳ ಕೊನೆಯ ವಾರದಲ್ಲಿ ಆಗಸ್ಟ್ 28 ರಿಂದ ಆಗಸ್ಟ್ 31 ರವರೆಗೆ ರಜೆ
Bank Holidays : ಇಂದೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ : ನಾಳೆಯಿಂದ 4 ದಿನ ಬ್ಯಾಂಕ್ ರಜೆ title=

ನವದೆಹಲಿ : ನಿಮಗೆ ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳಿದ್ದರೆ ಅವುಗಳನ್ನ ಇಂದೇ ಮುಗಿಸಿಕೊಳ್ಳಿ ನಾಳೆಯಿಂದ ಸತತ 4 ದಿನಗಳವರೆಗೆ ಬ್ಯಾಂಕ್ ರಜೆ ಇದೆ. ಹೌದು, ಆಗಸ್ಟ್ 28 ರಿಂದ 31 ರವರೆಗೆ, ಹಲವು ನಗರಗಳ ಬ್ಯಾಂಕುಗಳಲ್ಲಿ ಯಾವುದೇ ವ್ಯವಹಾರ ಇರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಬ್ಯಾಂಕುಗಳು ಈ ತಿಂಗಳ ಕೊನೆಯ ವಾರದಲ್ಲಿ ಆಗಸ್ಟ್ 28 ರಿಂದ ಆಗಸ್ಟ್ 31 ರವರೆಗೆ ರಜೆ ಇರುತ್ತವೆ.ಈ ಸಮಯದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಮತ್ತು ಎಟಿಎಂ ಸೇವೆಗಳು ಕಾರ್ಯನಿರ್ವಹಿಸುತ್ತವೆ.

ಆರ್‌ಬಿಐ ಆಗಸ್ಟ್ 2021 ರ ಬ್ಯಾಂಕ್ ರಜಾದಿನಗಳ(Bank Holidays) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ತಿಂಗಳಲ್ಲಿ ಒಟ್ಟು 15 ರಜಾದಿನಗಳು ಇದ್ದವು. ಹೀಗಾಗಲೇ 10 ರಜಾದಿನಗಳು ಮುಗಿದು ಹೋಗಿವೆ. ಈಗ ಈ ತಿಂಗಳು ಕೇವಲ ನಾಲ್ಕು ರಜೆಗಳು ಉಳಿದಿವೆ.

ಇದನ್ನೂ ಓದಿ : Petrol-Diesel Price : ದೇಶದ 19 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ : ನಿಮ್ಮ ನಗರದ ಬೆಲೆ ಇಲ್ಲಿದೆ

28 ನಾಲ್ಕನೇ ಶನಿವಾರ ಸ್ಥಳೀಯ ಹಬ್ಬಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ವಿವಿಧ ವಲಯಗಳಿಗೆ ಆರ್‌ಬಿಐ(RBI) ಬ್ಯಾಂಕ್ ರಜೆಯ ಪಟ್ಟಿಯನ್ನು ನೀಡುತ್ತದೆ. ಈ ವಾರ ಬ್ಯಾಂಕ್‌ಗಳಿಗೆ ಆರ್‌ಬಿಐ 4 ದಿನಗಳ ಕಾಲ ರಜೆ ನೀಡಿದೆ. ಈ ರಜಾದಿನಗಳು ಪ್ರತಿ ರಾಜ್ಯದ ಬ್ಯಾಂಕುಗಳಿಗೆ ಸಂಭಂದಪಡುವುದಿಲ್ಲ. ಆಗಸ್ಟ್ 28, ಈ ತಿಂಗಳ ನಾಲ್ಕನೇ ಶನಿವಾರವಾಗಿದ್ದು, ಬ್ಯಾಂಕ್ ರಜೆ ಇರುತ್ತದೆ. ಆಗಸ್ಟ್ 29 ಭಾನುವಾರವಾಗಿದ್ದು, ಈ ಕಾರಣದಿಂದಾಗಿ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಬಂದ್ ಇರುತ್ತದೆ.

ಆಗಸ್ಟ್ 30 ರಂದು ಅನೇಕ ನಗರಗಳಲ್ಲಿ ಬ್ಯಾಂಕ್ ರಜೆ 

ಕೃಷ್ಣ ಜನ್ಮಾಷ್ಟಮಿ / ಕೃಷ್ಣ ಜಯಂತಿ(Krishna Janmashtami 2021) 30 ನೇ ಆಗಸ್ಟ್, 2021 ರಂದು. ಅನೇಕ ನಗರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಈ ದಿನ ಅಹಮದಾಬಾದ್, ಚಂಡೀಗಡ್, ಚೆನ್ನೈ, ಡೆಹ್ರಾಡೂನ್, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ಪಾಟ್ನಾ, ರಾಯ್‌ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ಗ್ಯಾಂಗ್ಟಾಕ್‌ನಲ್ಲಿ ಯಾವುದೇ ಬ್ಯಾಂಕ್ ವ್ಯವಹಾರ ಇರುವುದಿಲ್ಲ. ಶ್ರೀ ಕೃಷ್ಣ ಜನ್ಮಾಷ್ಟಮಿಯಿಂದಾಗಿ 31 ಆಗಸ್ಟ್ 2021 ರಂದು ಹೈದರಾಬಾದ್ ನ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ಇದನ್ನೂ ಓದಿ : ಸ್ಮಾರ್ಟ್ ಪೋನ್ ಆಯ್ತು, ಇನ್ಮುಂದೆ ಬರಲಿದೆ Apple Car! ಭವಿಷ್ಯ ನುಡಿದ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ

ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ

1) 28 ಆಗಸ್ಟ್ 2021 - ನಾಲ್ಕನೇ ಶನಿವಾರ
2) 29 ಆಗಸ್ಟ್ 2021 - ಭಾನುವಾರ
3) 30 ಆಗಸ್ಟ್ 2021 - ಜನ್ಮಾಷ್ಟಮಿ / ಕೃಷ್ಣ ಜಯಂತಿ (ಅಹಮದಾಬಾದ್, ಚಂಡೀಗಡ, ಚೆನ್ನೈ, ಡೆಹ್ರಾಡೂನ್, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ಪಾಟ್ನಾ, ರಾಯಪುರ, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ಗ್ಯಾಂಗ್ಟಕ್)
4) 31 ಆಗಸ್ಟ್ 2021 - ಶ್ರೀ ಕೃಷ್ಣ ಜನ್ಮಾಷ್ಟಮಿ (ಹೈದರಾಬಾದ್)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News