ATM New Rule: ATMಗಳಿಂದ ಕ್ಯಾಶ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ನೀವೂ ತಿಳಿದುಕೊಳ್ಳಿ

SBI New Rule:  ATM ನಿಂದ ನಗದು ಹಿಂಪಡೆಯುವ ನಿಯಮಗಳು ಬದಲಾಗಿವೆ. ಕ್ಯಾಶ್ ವಿಥ್ ಡ್ರಾ (Cash Withdrawal New Rule) ಮಾಡಲು ಗ್ರಾಹಕರ ಅಧಿಕೃತ ಮೊಬೈಲ್ ಫೋನ್ ಗೆ OTP ಬರಲಿದ್ದು, ಈ OTP ನಮೂದಿಸಿದ ಬಳಿಕವಷ್ಟೇ ನೀವು ಹಣವನ್ನು ಪಡೆಯಬಹುದು.

Written by - Nitin Tabib | Last Updated : Nov 29, 2021, 02:22 PM IST
  • SBI ಗ್ರಾಹಕರಿಗೊಂದು ಮಹತ್ವದ ಸುದ್ದಿ.
  • ರೂ.10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಈ ನಿಯಮ ಅನ್ವಯಿಸಲಿದೆ.
  • ಇನ್ಮುಂದೆ OTP ಇಲ್ಲದೆ ಹಣ ಬರುವುದಿಲ್ಲ.
ATM New Rule: ATMಗಳಿಂದ ಕ್ಯಾಶ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ನೀವೂ ತಿಳಿದುಕೊಳ್ಳಿ title=
SBI Latest Rule (File Photo)

ನವದೆಹಲಿ: SBI New Rule - ಎಟಿಎಂಗಳಿಂದ ನಗದು ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಎಟಿಎಂ ವಹಿವಾಟುಗಳನ್ನು (SBI Transaction) ಹೆಚ್ಚು ಸುರಕ್ಷಿತಗೊಳಿಸಲು ಎಸ್‌ಬಿಐ ಹೊಸ ಕ್ರಮವನ್ನು ಕೈಗೊಂಡಿದೆ. ಈಗ ನೀವು SBI ATM ನಿಂದ ಹಣವನ್ನು ಹಿಂಪಡೆಯಲು OTP (SBI Offers OTP) ಅನ್ನು ನಮೂದಿಸಬೇಕಾಗಲಿದೆ. ಈ ಹೊಸ ನಿಯಮದಲ್ಲಿ ಗ್ರಾಹಕರು ಒಟಿಪಿ ಇಲ್ಲದೆ ನಗದು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ನಗದು ಹಿಂಪಡೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ಫೋನ್‌ನಲ್ಲಿ OTP ಅನ್ನು ಪಡೆಯಲಿದ್ದಾರೆ. ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ತನ್ನ ಟ್ವೀಟ್ ನಲ್ಲಿ SBI ಹೇಳಿದ್ದೇನು?
ಈ ಬಗ್ಗೆ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಟ್ವೀಟ್‌ನಲ್ಲಿ ಬ್ಯಾಂಕ್, 'ನಮ್ಮ OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಎಸ್‌ಬಿಐ ಎಟಿಎಂಗಳಲ್ಲಿನ ವಹಿವಾಟುಗಳಿಗೆ ವಂಚಕರ ವಿರುದ್ಧ ವ್ಯಾಕ್ಸಿನೇಷನ್ ಆಗಿದೆ. ನಿಮ್ಮನ್ನು ವಂಚನೆಯಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ. OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು SBI ಗ್ರಾಹಕರು ತಿಳಿದಿರಬೇಕು' ಎಂದಿದೆ 

ನಿಯಮ ಏನು ಗೊತ್ತಾ? (SBI Transaction Rule)
10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಾಗ  ಈ  ನಿಯಮ ಅನ್ವಯಿಸಲಿದೆ ಎಂಬುದು ಇಲ್ಲಿ ಗಮನಾರ್ಹ. SBI ಗ್ರಾಹಕರಿಗೆ ಅವರ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಅವರ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಹಾಗೂ ಅವರ ಡೆಬಿಟ್ ಕಾರ್ಡ್ ಪಿನ್ ನಮೂದಿಸಿದ ಬಳಿಕವೇ ಅವರು ATM ನಿಂದ ರೂ.10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅನುಮತಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ಓದಿ- PMGKY Extended: ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ ಮಾರ್ಚ್ 2022 ರವರೆಗೆ ವಿಸ್ತರಣೆ

ಇಲ್ಲಿದೆ ಪ್ರಕ್ರಿಯೆ
>> SBI ATM ನಿಂದ ಹಣವನ್ನು ಹಿಂಪಡೆಯಲು ನಿಮಗೆ OTP ಅಗತ್ಯವಿರುತ್ತದೆ.
>> ಇದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
>> ಈ OTP ನಾಲ್ಕು ಅಂಕಿಗಳ ಸಂಖ್ಯೆಯಾಗಿದ್ದು, ಇದನ್ನು ಗ್ರಾಹಕರಿಗೆ ಸಿಂಗಲ್ ವಹಿವಾಟಿಗೆ ನೀಡಲಾಗುವುದು.
>> ಒಂದೊಮ್ಮೆ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿದ ನಂತರ, ATM ಪರದೆಯಲ್ಲಿ OTP ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುವುದು.
>> ನಗದು ಹಿಂಪಡೆಯಲು ಈ ಪರದೆಯಲ್ಲಿ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ನೀವು ಸ್ವೀಕರಿಸಿದ OTP ಅನ್ನು ನಮೂದಿಸಬೇಕು.

ಇದನ್ನೂ ಓದಿ-ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್!: ಸರ್ಕಾರ ಮೊದಲ ಬಾರಿಗೆ ಈ ಸೌಲಭ್ಯಗಳನ್ನು ನೀಡುತ್ತಿದ್ದು, ಎಲ್ಲರಿಗೂ ಪ್ರಯೋಜನವಾಗಲಿದೆ

ಇದರ ಅವಶ್ಯಕತೆ ಏನು?
ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಭಾರತದಲ್ಲಿ 71,705 BC ಔಟ್‌ಲೆಟ್‌ಗಳೊಂದಿಗೆ 22,224 ಶಾಖೆಗಳು ಮತ್ತು 63,906 ATM/CDMಗಳ ದೊಡ್ಡ ಜಾಲವನ್ನು ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರ ಸಂಖ್ಯೆ ಕ್ರಮೇಣವಾಗಿ ಸರಿಸುಮಾರು 9.1 ಕೋಟಿ  ಮತ್ತು 2 ಕೋಟಿಗಳಷ್ಟಾಗಿದೆ. 

ಇದನ್ನೂ ಓದಿ-EPF Alert! ಶೀಘ್ರದಲ್ಲಿಯೇ ಈ ಅಪ್ಡೇಟ್ ಮಾಡಿಕೊಳ್ಳಿ, ಇಲ್ದಿದ್ರೆ ಮುಂದಿನ ತಿಂಗಳಿಂದ ನಿಂತುಹೋಗಲಿದೆ ನಿಮ್ಮ EPF ಕೊಡುಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News