ದೇಶದಾದ್ಯಂತ ಹೂಡಿಕೆ ಮಾಡಲು ಆಪಲ್ ಬದ್ಧ- ಪ್ರಧಾನಿ ಮೋದಿಗೆ ಟೀಮ್ ಕುಕ್ ಭರವಸೆ

ಆ್ಯಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ಭಾರತಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿಯಾದರು.

Written by - Zee Kannada News Desk | Last Updated : Apr 19, 2023, 11:17 PM IST
  • ಅವರು ಮುಂಬೈನಲ್ಲಿ ನಟಿ ಮಾಧುರಿ ದೀಕ್ಷಿತ್ ಅವರನ್ನು ಭೇಟಿಯಾಗಿ ಅವರ ಜೊತೆ ಮಹಾರಾಷ್ಟ್ರದ ಜನಪ್ರಿಯ ಖಾದ್ಯ ವಡಾ ಪಾವ್ ಅನ್ನು ಸವಿದರು.
  • ನಂತರ ಅವರು ಸೈನಾ ನೆಹ್ವಾಲ್, ಶ್ರೀಕಾಂತ್ ಕಿಡಂಬಿ ಮುಂತಾದ ಭಾರತೀಯ ಬ್ಯಾಡ್ಮಿಂಟನ್ ಆಟಗಾರರನ್ನು ಭೇಟಿಯಾದರು.
ದೇಶದಾದ್ಯಂತ ಹೂಡಿಕೆ ಮಾಡಲು ಆಪಲ್ ಬದ್ಧ- ಪ್ರಧಾನಿ ಮೋದಿಗೆ ಟೀಮ್ ಕುಕ್ ಭರವಸೆ title=

ನವದೆಹಲಿ: ಆ್ಯಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ಭಾರತಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿಯಾದರು.

ತದನಂತರ ಕುಕ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರೊಂದಿಗಿನ ಭೇಟಿಯನ್ನು ಹಂಚಿಕೊಂಡಿದ್ದಾರೆ ಮತ್ತು ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಶಿಕ್ಷಣ ಮತ್ತು ಡೆವಲಪರ್‌ಗಳಿಂದ ಹಿಡಿದು ಉತ್ಪಾದನೆ ಮತ್ತು ಪರಿಸರದವರೆಗೆ ದೇಶದಾದ್ಯಂತ ಬೆಳೆಯಲು ಮತ್ತು ಹೂಡಿಕೆ ಮಾಡಲು ಅವರು ಬದ್ಧರಾಗಿದ್ದಾರೆ.ಭಾರತದ ಭವಿಷ್ಯದ ಮೇಲೆ ತಂತ್ರಜ್ಞಾನವು ಮಾಡಬಹುದಾದ ಧನಾತ್ಮಕ ಪರಿಣಾಮದ ಬಗ್ಗೆ ಅವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ ಎಂದು ಅವರು ಬರೆದಿದ್ದಾರೆ.

ಭಾರತದಲ್ಲಿ ಆಪಲ್ ಚಿಲ್ಲರೆ ಮಳಿಗೆಗಳನ್ನು ತೆರೆಯುವ ಸಂದರ್ಭದಲ್ಲಿ ಟಿಮ್ ಕುಕ್ ಅವರು ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಕ್ಷೇತ್ರಗಳ ಗಣ್ಯರನ್ನು ಭೇಟಿಯಾಗಿದ್ದಾರೆ.ಇದಕ್ಕೂ ಮುನ್ನ ಅವರು ಮುಂಬೈನಲ್ಲಿ ನಟಿ ಮಾಧುರಿ ದೀಕ್ಷಿತ್ ಅವರನ್ನು ಭೇಟಿಯಾಗಿ ಅವರ ಜೊತೆ ಮಹಾರಾಷ್ಟ್ರದ ಜನಪ್ರಿಯ ಖಾದ್ಯ ವಡಾ ಪಾವ್ ಅನ್ನು ಸವಿದರು. ನಂತರ ಅವರು ಸೈನಾ ನೆಹ್ವಾಲ್, ಶ್ರೀಕಾಂತ್ ಕಿಡಂಬಿ ಮುಂತಾದ ಭಾರತೀಯ ಬ್ಯಾಡ್ಮಿಂಟನ್ ಆಟಗಾರರನ್ನು ಭೇಟಿಯಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News