Maruti Car Discount:Alto, WagonR ಸೇರಿದಂತೆ ಈ ಕಾರುಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ

Cars Discount Offers: ಟಾಪ್-10 ಕಾರುಗಳಲ್ಲಿ 7 ಮಾಡೆಲ್‌ಗಳು ಮಾರುತಿ ಸುಜುಕಿ ಕಂಪನಿಗೆ ಸೇರಿವೆ. ಈಗ ಕಂಪನಿಯು ತನ್ನ ಕೆಲವು ಮಾದರಿಯ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.  

Written by - Ranjitha R K | Last Updated : Aug 8, 2022, 12:22 PM IST
  • ದೇಶದಲ್ಲಿ ಮಾರುತಿ ಸುಜುಕಿ ವಾಹನಗಳಿಗೆ ಸಾಕಷ್ಟು ಬೇಡಿಕೆಯಿದೆ.
  • ಮಾರುತಿ ಸುಜುಕಿ ಅತಿ ಹೆಚ್ಚು ಮಾರಾಟವಾಗುವ ಕಾರು ತಯಾರಕ ಸಂಸ್ಥೆಯಾಗಿದೆ.
  • ಈಗ ಕಂಪನಿಯ ಕಾರುಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ
Maruti Car Discount:Alto, WagonR ಸೇರಿದಂತೆ ಈ ಕಾರುಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ  title=
Cars Discount Offers (file photo)

Cars Discount Offers : ದೇಶದಲ್ಲಿ ಮಾರುತಿ ಸುಜುಕಿ ವಾಹನಗಳಿಗೆ ಸಾಕಷ್ಟು ಬೇಡಿಕೆಯಿದೆ. ಮಾರುತಿ ಸುಜುಕಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ತಯಾರಕ ಸಂಸ್ಥೆಯಾಗಿದೆ. ಜುಲೈ ತಿಂಗಳಿನಲ್ಲಿಯೂ ಸಹ, ದೇಶದಲ್ಲಿ ಮಾರಾಟವಾದ ಟಾಪ್ 3 ಕಾರುಗಳು ಮಾರುತಿ ಸುಜುಕಿಯದ್ದೇ ಆಗಿದೆ. ಇದಲ್ಲದೇ ಟಾಪ್-10 ಕಾರುಗಳಲ್ಲಿ 7 ಮಾಡೆಲ್‌ಗಳು ಮಾರುತಿ ಸುಜುಕಿ ಕಂಪನಿಗೆ ಸೇರಿವೆ. ಈಗ ಕಂಪನಿಯು ತನ್ನ ಕೆಲವು ಮಾದರಿಯ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.

ಕಂಪನಿಯು ಮಾರುತಿ ಸುಜುಕಿ ಆಲ್ಟೊ ಮೇಲೆ  8000 ರೂ. ವರೆಗೆ ನಗದು ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೇ 10,000 ರೂ. ಎಕ್ಸ್ ಚೇಂಜ್ ಬೋನಸ್ ಹಾಗೂ 4000 ರೂ. ಐಎಸ್ ಎಲ್ ಆಫರ್ ಕೂಡ ನೀಡಲಾಗುತ್ತಿದೆ. ಆದರೆ ಈ ಕಾರಿನ CNG ರೂಪಾಂತರದ ಮೇಲೆ ಯಾವುದೇ ರಿಯಾಯಿತಿ ಇಲ್ಲ.

ಇದನ್ನೂ ಓದಿ : ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ

ಕಂಪನಿಯು ಮಾರುತಿ ಸುಜುಕಿ ಸೆಲೆರಿಯೊ ಮೇಲೆ ರಿಯಾಯಿತಿ  ಮತ್ತು ಆಫರ್ ಗಳನ್ನೂ ನೀಡುತ್ತಿದೆ. ಸೆಲೆರಿಯೊದಲ್ಲಿ 10,000 ರೂಪಾಯಿಗಳವರೆಗೆ ನಗದು ರಿಯಾಯಿತಿ ಮತ್ತು 15,000 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ಈಲಿ ಕೂಡಾ CNG ರೂಪಾಂತರದಲ್ಲಿ ಯಾವುದೇ  ಆಫರ್ ಇಲ್ಲ. 

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮೇಲೆ 35,000 ರೂ. ವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. 15,000 ರೂ. ಎಕ್ಸ್ಚೇಂಜ್ ಬೋನಸ್ ಮತ್ತು  4000 ರೂ. ವರೆಗೆ  ಐಎಸ್ಎಲ್  ಆಫರ್ ನೀಡಲಾಗುತ್ತಿದೆ. ಈ ರಿಯಾಯಿತಿಯು  ಕಾರಿನ ಮಾಡೆಲ್ ಗಳ ಮೇಲೆ ಅವಲಂಬಿತವಾಗಿದೆ. ಕಾರಿನ  ಮಾದರಿಗೆ ಅನುಗುಣವಾಗಿ  ಈ ಆಫರ್ ಕೂಡಾ ಬದಲಾಗಬಹುದು. 

ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು 10,000 ರೂ.  ನಗದು ರಿಯಾಯಿತಿಯಲ್ಲಿ ಖರೀದಿಸಬಹುದು. ಅಲ್ಲದೆ ಇದರ ಮೇಲೆ 15,000 ರೂ. ವಿನಿಮಯ ಬೋನಸ್ ಮತ್ತು 5000 ರೂ. ಐಎಸ್ಎಲ್ ರಿಯಾಯಿತಿ ಕೂಡಾ ನೀಡಲಾಗುತ್ತದೆ.  ಈ ಕಾರಿನ CNG ರೂಪಾಂತರದಲ್ಲಿ ಕೇವಲ 10,000 ರೂ ನಗದು ರಿಯಾಯಿತಿಯನ್ನು ನೀಡಲಾಗುತ್ತದೆ. 

ಇದನ್ನೂ ಓದಿ : Vegetable Price: ಮತ್ತೆ ಹೆಚ್ಚಳವಾಯ್ತು ಟೊಮ್ಯಾಟೋ ಬೆಲೆ: ಹೀಗಿದೆ ನೋಡಿ ತರಕಾರಿಗಳ ದರ

ಮಾರುತಿ ಸ್ವಿಫ್ಟ್ ಮೇಲೆ 20,000 ರೂ ನಗದು ರಿಯಾಯಿತಿ ಇದೆ . ಮತ್ತೊಂದೆಡೆ, ಮಾರುತಿ ಡಿಜೈರ್ ಮೇಲೆ ಕೇವಲ 5000 ರೂಪಾಯಿಗಳ ನಗದು ರಿಯಾಯಿತಿ ನೀಡಲಾಗಿದೆ. 10,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 3000 ರೂಪಾಯಿಗಳ ISL ಕೊಡುಗೆಯೊಂದಿಗೆ ಈಕಾರು ಖರೀದಿಗೆ ಲಭ್ಯವಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News