Airtel Payments Bank: ಹಳ್ಳಿಗಳಿಗೆ ಬರಲಿವೆ 1.5 ಲಕ್ಷ ಮೈಕ್ರೋ ಎಟಿಎಂಗಳು!

ಏರ್‌ಟೆಲ್ ಕಂಪನಿಯು ಆರಂಭದಲ್ಲಿ ಶ್ರೇಣಿ-II ವರ್ಗದ ನಗರಗಳು & ಅರೆ-ನಗರ ಪ್ರದೇಶಗಳಲ್ಲಿ 1.5 ಲಕ್ಷ ಎಟಿಎಂ ಘಟಕಗಳನ್ನು ಪ್ರಾರಂಭಿಸಲಿದೆ ಎಂದು ತಿಳಿಸಲಾಗಿದೆ.

Written by - Puttaraj K Alur | Last Updated : Sep 29, 2022, 12:25 PM IST
  • ಗ್ರಾಮೀಣ ಪ್ರದೇಶದಲ್ಲಿ ಇನ್ಮುಂದೆ ಹಣದ ಕೊರತೆಯೇ ಇರುವುದಿಲ್ಲ
  • ಹಳ್ಳಿಗಳಲ್ಲಿ ಮೈಕ್ರೋ ಎಟಿಎಂ ಸ್ಥಾಪಿಸಲಿರುವ ಏರ್‍ಟೇಲ್ ಪೇಮೆಂಟ್ಸ್ ಬ್ಯಾಂಕ್
  • ಕೇವಲ 6 ತಿಂಗಳಿನಲ್ಲಿ 1.5 ಲಕ್ಷ ಮೈಕ್ರೋ ಎಟಿಎಂ ಸ್ಥಾಪಿಸಲಿರುವ ಏರ್‍ಟೇಲ್
Airtel Payments Bank: ಹಳ್ಳಿಗಳಿಗೆ ಬರಲಿವೆ 1.5 ಲಕ್ಷ ಮೈಕ್ರೋ ಎಟಿಎಂಗಳು!  title=
Airtel Payments Bank

ನವದೆಹಲಿ: ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ಮೈಕ್ರೋ ಎಟಿಎಂಗಳನ್ನು ತ್ವರಿತವಾಗಿ ಸ್ಥಾಪಿಸಲಾಗುತ್ತಿದೆ. ನಗದು ಹಿಂಪಡೆಯುವಿಕೆಗೆ ಅನುಕೂಲವಾಗುವಂತೆ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ 1.5 ಲಕ್ಷ ಮೈಕ್ರೋ ಎಟಿಎಂಗಳನ್ನು ಶ್ರೇಣಿ-II ವರ್ಗದ ನಗರಗಳು ಮತ್ತು ಅರೆ-ನಗರ ಪ್ರದೇಶಗಳಲ್ಲಿ ಸ್ಥಾಪಿಸಲು ಪ್ಲಾನ್ ಮಾಡಿದೆ. ವ್ಯವಸ್ಥಿತವಾಗಿ ಎಟಿಎಂ ಸೇವೆಯನ್ನು ಆರಂಭಿಸಲಾಗುವುದು ಅಂತಾ ಸಂಸ್ಥೆ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

ಶ್ರೇಣಿ-II ವರ್ಗದ ನಗರಗಳಲ್ಲಿ ಸೇವೆ

ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ತನ್ನ ಸೇವೆಯನ್ನು ಕ್ರಮೇಣವಾಗಿ ವಿಸ್ತರಿಸಲಿದೆ. ಇದು ಹೆಚ್ಚಿನ ಬ್ಯಾಂಕಿಂಗ್ ಪ್ರದೇಶಗಳನ್ನು ವ್ಯವಸ್ಥಿತ ರೀತಿಯಲ್ಲಿ ಒಳಗೊಂಡಿರುತ್ತದೆ. ಕಂಪನಿಯು ಆರಂಭದಲ್ಲಿ ಶ್ರೇಣಿ-II ವರ್ಗದ ನಗರಗಳು ಮತ್ತು ಅರೆ-ನಗರ ಪ್ರದೇಶಗಳಲ್ಲಿ 1.5 ಲಕ್ಷ ಎಟಿಎಂ ಘಟಕಗಳನ್ನು ಪ್ರಾರಂಭಿಸಲಿದೆ ಎಂದು ತಿಳಿಸಲಾಗಿದೆ. ಈ ಪ್ರದೇಶಗಳು ಸಾಮಾನ್ಯವಾಗಿ ನಗದು ಹಿಂಪಡೆಯುವ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಹೊಂದಿರುತ್ತವೆ. ಆದರೆ ATMಗಳಿಗೆ ಸೀಮಿತ ಪ್ರವೇಶವನ್ನು ಹೊಂದಿರುತ್ತವೆ.

ಇದನ್ನೂ ಓದಿ: Citroen C3 EV: ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರ್

ಮಾರ್ಚ್ ವೇಳೆಗೆ 1.5 ಲಕ್ಷ ಮೈಕ್ರೋ ಎಟಿಎಂಗಳು

ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ 1.5 ಲಕ್ಷ ಮೈಕ್ರೋ ಎಟಿಎಂಗಳನ್ನು ಸ್ಥಾಪಿಸಲು ಕಂಪನಿ ಯೋಜಿಸಿದೆ. ಅಂದರೆ ಮಾರ್ಚ್‍ವರೆಗಿನ 6 ತಿಂಗಳಲ್ಲಿ 1.5 ಲಕ್ಷ ಎಟಿಎಂಗಳನ್ನು ಅತ್ಯಂತ ವೇಗವಾಗಿ ಸ್ಥಾಪಿಸಲಾಗುವುದು ಎಂದು ಕಂಪನಿ ತಿಳಿಸಿದೆ. 

ಮೈಕ್ರೋ ಎಟಿಎಂ ವಹಿವಾಟುಗಳನ್ನು ಸುಗಮಗೊಳಿಸಲು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಈಗ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ರಾಷ್ಟ್ರೀಯ ಹಣಕಾಸು ಸ್ವಿಚ್ (NFS)ನೊಂದಿಗೆ ಕೈಜೋಡಿಸಿದೆ. ಎಲ್ಲರಿಗೂ ಬ್ಯಾಂಕಿಂಗ್ ಸೇವೆ ನೀಡುವ ಮೂಲಕ ಆರ್ಥಿಕವಾಗಿ ಒಳಗೊಂಡಿರುವ ಭಾರತವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಅಂತಾ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ: Samsung Diwali Offers: ಸ್ಮಾರ್ಟ್‌ಫೋನ್‌ಗಳ ಮೇಲೆ 57ಶೇ. ರಿಯಾಯಿತಿ, ಟಿವಿಯೊಂದಿಗೆ ಫೋನ್ ಫ್ರೀ

ಮೈಕ್ರೋ ಎಟಿಎಂಗಳು ಯಾವುವು?

ಮೈಕ್ರೋ ಎಟಿಎಂ ಒಂದು ಸಣ್ಣ ಯಂತ್ರವಾಗಿದ್ದು, ಇದು ಕಾರ್ಡ್ ಸ್ವೈಪ್ ಯಂತ್ರದಂತೆ ಇರುತ್ತದೆ. ಈ ಯಂತ್ರವು ಅಗತ್ಯ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಂತಹ ಎಟಿಎಂಗಳು ತುಂಬಾ ಪ್ರಯೋಜನಕಾರಿ, ಇಲ್ಲಿ ಸಾಮಾನ್ಯ ಎಟಿಎಂ ಸೇವೆ ಪಡೆಯಲು ಸಾಧ್ಯವಾಗದಂತಹ ಜನರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News