Airtel Cheapest Plan: ಜಿಯೋಗೆ ಟಕ್ಕರ್ ನೀಡಲು ಬಂದಿದೆ ಏರ್‌ಟೆಲ್ ಅಗ್ಗದ ಯೋಜನೆ!

ಏರ್‌ಟೆಲ್ ತನ್ನ ಗ್ರಾಹಕರಿಗೆ ಅಂತಹ ಉತ್ತಮ ಯೋಜನೆಯನ್ನು ನೀಡುತ್ತಿದೆ. ಇದರಲ್ಲಿ ನಿಮಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೇಗದ ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯು ಜಿಯೋದ ಯೋಜನೆಗೆ ಟಕ್ಕರ್ ನೀಡುತ್ತಿದೆ.

Written by - Puttaraj K Alur | Last Updated : Apr 22, 2022, 05:50 PM IST
  • ಗ್ರಾಹಕರಿಗಾಗಿ ಏರ್‌ಟೆಲ್‌ ಪರಿಚಯಿಸಿದೆ ಅಗ್ಗದ ಡೇಟಾ ಪ್ಲಾನ್
  • ಜಿಯೋ ಯೋಜನೆಗೆ ಟಕ್ಕರ್ ನೀಡುತ್ತಿರುವ ಏರ್‌ಟೆಲ್‌ ಯೋಜನೆ
  • ಈ ಯೋಜನೆಯಲ್ಲಿ ನೀವು ಅತಿವೇಗದ ಇಂಟರ್ನೆಟ್ ಬಳಸಬಹುದು
Airtel Cheapest Plan: ಜಿಯೋಗೆ ಟಕ್ಕರ್ ನೀಡಲು ಬಂದಿದೆ ಏರ್‌ಟೆಲ್ ಅಗ್ಗದ ಯೋಜನೆ! title=
ಏರ್‌ಟೆಲ್‌ ಅಗ್ಗದ ಡೇಟಾ ಪ್ಲಾನ್

ನವದೆಹಲಿ: ಇಂದಿನ ದಿನಗಳಲ್ಲಿ ನಮ್ಮ ಹೆಚ್ಚಿನ ಕೆಲಸಗಳಿಗೆ ಇಂಟರ್ನೆಟ್ ಅಗತ್ಯವಿದೆ. ದೇಶದ ಪ್ರತಿಯೊಂದು ಟೆಲಿಕಾಂ ಕಂಪನಿಯು ಹೆಚ್ಚಿನ ವೇಗದ ಡೇಟಾದೊಂದಿಗೆ ಬರುವ ಅನೇಕ ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ರಿಲಯನ್ಸ್ ಜಿಯೋ ಯೋಜನೆಗೆ ಟಕ್ಕರ್ ನೀಡಲು ಏರ್‌ಟೆಲ್‌ ಅಗ್ಗದ ಯೋಜನೆ ಪರಿಚಯಿಸಿದೆ. ಈ ಯೋಜನೆಗಳು ಮತ್ತು ದರಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಏರ್‌ಟೆಲ್ 118 ರೂ. ಯೋಜನೆ

ಏರ್‌ಟೆಲ್ ಹಲವಾರು ರೀಚಾರ್ಜ್ ಯೋಜನೆ ನೀಡುತ್ತಿದ್ದರೂ ಇದರ 118 ರೂ. ಡೇಟಾ ಯೋಜನೆಯ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದರಲ್ಲಿ ನಿಮಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೇಗದ ಡೇಟಾವನ್ನು ನೀಡಲಾಗುತ್ತಿದೆ. 118 ರೂ. ಬೆಲೆಯ ಈ ಯೋಜನೆಯು 12GB ಇಂಟರ್ನೆಟ್ ಸೌಲಭ್ಯದೊಂದಿಗೆ ಬರುತ್ತದೆ. ಇದು ಡೇಟಾ ಪ್ಲಾನ್ ಆಗಿರುವುದರಿಂದ ನಿಮಗೆ ಇದರಲ್ಲಿ ಯಾವುದೇ ಇತರ ಪ್ರಯೋಜನಗಳನ್ನು ನೀಡಲಾಗುವುದಿಲ್ಲ.

ಇದನ್ನೂ ಓದಿ: LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ₹75 ಸಾವಿರ ಪಿಂಚಣಿ ಪಡೆಯಿರಿ

ಜಿಯೋಗೆ ಟಕ್ಕರ್ ನೀಡಿದ ಏರ್‌ಟೆಲ್‌ನ ಯೋಜನೆ

ರಿಲಯನ್ಸ್ ಜಿಯೋ ಈ ಬೆಲೆ ಶ್ರೇಣಿಯಲ್ಲಿ ಡೇಟಾ ಯೋಜನೆಯನ್ನು ಸಹ ನೀಡುತ್ತಿದೆ. ಆದರೆ, ಈ ಯೋಜನೆಯು ಏರ್‌ಟೆಲ್‌ಗಿಂತ ದುಬಾರಿಯಾಗಿದೆ. ಏರ್‌ಟೆಲ್‌ನ ಯೋಜನೆಯಲ್ಲಿ ನಿಮಗೆ 118 ರೂ.ಗೆ 12 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಆದರೆ. ಜಿಯೋ 121 ರೂ.ಗೆ 12 ಜಿಬಿ ಡೇಟಾವನ್ನು ನೀಡುತ್ತಿದೆ. ಏರ್‌ಟೆಲ್‌ನ ಯೋಜನೆಯಂತೆ ಈ ಯೋಜನೆಯು ಯಾವುದೇ ಇತರ ಪ್ರಯೋಜನಗಳನ್ನು ಒಳಗೊಂಡಿರುವುದಿಲ್ಲ.

ಮತ್ತೊಂದು ಏರ್‌ಟೆಲ್ ಯೋಜನೆ

ನಿಮಗೆ 12GB ಡೇಟಾ ಯೋಜನೆ ಬೇಡವೆಂದಾದರೆ ಏರ್‌ಟೆಲ್ ಮತ್ತೊಂದು ಯೋಜನೆಯನ್ನೂ ಬಳಕೆದಾರರಿಗೆ ನೀಡಿದೆ. 10 ರೂ. ಅಗ್ಗದ 108 ರೂ. ಯೋಜನೆಯಲ್ಲಿ ನಿಮಗೆ 12GB ಬದಲಿಗೆ 6 GB ಹೈ-ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯು Amazon Primeನ ಮೊಬೈಲ್ ಆವೃತ್ತಿಯ 30 ದಿನದ ವ್ಯಾಲಿಡಿಟಿ, ಉಚಿತ Hello Tunes ಮತ್ತು Wynk Musicಗೆ ಉಚಿತ ಚಂದಾದಾರಿಕೆ ಒಳಗೊಂಡಿದೆ.

ಇದನ್ನೂ ಓದಿ: Post Office ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಗ್ಯಾರಂಟಿಯೊಂದಿಗೆ ಡಬಲ್ ಆಗಲಿದೆ ನಿಮ್ಮ ಹಣ!

ಈ ಡೇಟಾ ಯೋಜನೆಗಳು ತಮ್ಮದೇ ಆದ ವ್ಯಾಲಿಟಿಡಿಯೊಂದಿಗೆ ಬರುವುದಿಲ್ಲ. ಇವುಗಳ ಸಿಂಧುತ್ವವು ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯಂತೆಯೇ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News