Aadhaar-PAN Link: ಯಾರಿಗೆ ಆಧಾರ್-ಪ್ಯಾನ್ ಲಿಂಕ್ ಮಾಡುವ ಅಗತ್ಯವಿಲ್ಲ!

Aadhaar-PAN Link: ಆಧಾರ್-ಪ್ಯಾನ್ ಲಿಂಕ್‌ಗೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಆದ್ದರಿಂದ, ಇನ್ನೂ ಕೂಡ ಯಾರು ಆಧಾರ್-ಪ್ಯಾನ್ ಲಿಂಕ್ ಮಾಡಿಲ್ಲವೋ ಅವರು ತಡಮಾಡದೇ ಈ ಕೆಲಸವನ್ನು ಮಾಡಿ. ಇಲ್ಲದಿದ್ದರೆ ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. 

Written by - Yashaswini V | Last Updated : Mar 29, 2022, 01:06 PM IST
  • ಆಧಾರ್ ಮತ್ತು ಪ್ಯಾನ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು 31 ಮಾರ್ಚ್ 2022 ರ ಮೊದಲು ತನ್ನ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.
  • ಇಲ್ಲದಿದ್ದರೆ, ನಾಗರಿಕರು ಹಣಕಾಸಿನ ವಹಿವಾಟುಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
  • ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ಯಾರಿಗೆ ಆಧಾರ್-ಪ್ಯಾನ್ ಲಿಂಕ್ ಮಾಡುವ ಅಗತ್ಯವಿಲ್ಲ ತಿಳಿಯಿರಿ.
Aadhaar-PAN Link: ಯಾರಿಗೆ ಆಧಾರ್-ಪ್ಯಾನ್ ಲಿಂಕ್ ಮಾಡುವ ಅಗತ್ಯವಿಲ್ಲ! title=
Aadhaar PAN Link

Aadhaar-PAN Link: ಹಣಕಾಸು ವರ್ಷ 2020-21 ಕೊನೆಗೊಳ್ಳಲು ಇನ್ನೆರಡು ದಿನಗಳಷ್ಟೇ ಬಾಕಿಯಿದೆ. ಅಂತಹ ಪರಿಸ್ಥಿತಿಯಲ್ಲಿ, ಹಣ, ಖಾತೆ, ಆಧಾರ್-ಪ್ಯಾನ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾರ್ಚ್ 31 ರ ಮೊದಲು ಇತ್ಯರ್ಥಗೊಳಿಸಬೇಕು. ಅದೇ ಸಮಯದಲ್ಲಿ, ಸರ್ಕಾರವು ತನ್ನ ಗ್ರಾಹಕರಿಗೆ ಆಧಾರ್-ಪ್ಯಾನ್ ಕಾರ್ಡ್ ಅನ್ನು ಲಿಂಕ್ (Aadhaar-PAN Link)  ಮಾಡಲು ಪದೇ ಪದೇ ಸಲಹೆ ನೀಡುತ್ತಿದೆ. ಆದ್ದರಿಂದ, ಇನ್ನೂ ಕೂಡ ಯಾರು ಆಧಾರ್-ಪ್ಯಾನ್ ಲಿಂಕ್ ಮಾಡಿಲ್ಲವೋ ಅವರು ತಡಮಾಡದೇ ಈ ಕೆಲಸವನ್ನು ಮಾಡಿ. ಇಲ್ಲದಿದ್ದರೆ ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. 

ಹಣಕಾಸಿನ ವ್ಯವಹಾರದಲ್ಲಿ ಸಮಸ್ಯೆ:
ಆದಾಯ ತೆರಿಗೆ ಕಾಯಿದೆ 1961 (Income Tax Act 1961) ರ ಸೆಕ್ಷನ್ 139AA ಪ್ರಕಾರ, ಆಧಾರ್ ಮತ್ತು ಪ್ಯಾನ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು 31 ಮಾರ್ಚ್ 2022 ರ ಮೊದಲು ತನ್ನ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ನಾಗರಿಕರು ಹಣಕಾಸಿನ ವಹಿವಾಟುಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ- UIDAI ಹೊಸ ನಿಯಮ : ವಿಳಾಸ ಪುರಾವೆ ಇಲ್ಲದೆಯೂ Aadhaar Card ಪಡೆಯಬಹುದು! 

ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು:
>> ರೂ. 50 ಸಾವಿರಕ್ಕಿಂತ ಹೆಚ್ಚು ಎಫ್‌ಡಿ ಇಡಲು ಸಾಧ್ಯವಾಗುವುದಿಲ್ಲ.
>> ರೂ. 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ.
>> ಹೊಸ ಡೆಬಿಟ್-ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
>> ಮ್ಯೂಚುವಲ್ ಫಂಡ್‌ಗಳಲ್ಲಿ (Mutual Funds) ಹೂಡಿಕೆ ಮಾಡಲು ಅಥವಾ ರಿಡೀಮ್ ಮಾಡಲು ಸಾಧ್ಯವಾಗುವುದಿಲ್ಲ.
>> ಯಾವುದೇ ವಿದೇಶಿ ಕರೆನ್ಸಿ ಮೇಲೆ 50 ಸಾವಿರ ರೂಪಾಯಿಗಿಂತ ಹೆಚ್ಚು ಖರ್ಚು ಮಾಡಲು ಸಾಧ್ಯವಾಗುವುದಿಲ್ಲ.

ಯಾರಿಗೆ ಪ್ಯಾನ್-ಆಧಾರ್ ಲಿಂಕ್ ಅಗತ್ಯವಿಲ್ಲ?
* ಆಧಾರ್ ಸಂಖ್ಯೆ (Aadhaar Number) ಅಥವಾ ದಾಖಲಾತಿ ID ಹೊಂದಿರದವರಿಗೆ ಆಧಾರ್-ಪ್ಯಾನ್ ಲಿಂಕ್ ಅಗತ್ಯವಿಲ್ಲ.
* ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯದ ನಿವಾಸಿಗಳಿಗೆ  
* ಆದಾಯ ತೆರಿಗೆ ಕಾಯಿದೆ 1961 ರ ಪ್ರಕಾರ, ಅನಿವಾಸಿಗಳಿಗೆ 
* 80 ವರ್ಷಕ್ಕಿಂತ ಮೇಲ್ಪಟ್ಟ ಅಥವಾ 80 ವರ್ಷಕ್ಕಿಂತ ಮೇಲ್ಪಟ್ಟ ಅನಿವಾಸಿಗಳಿಗೆ (ಕಳೆದ ವರ್ಷದವರೆಗೆ ಭಾರತದ ಪ್ರಜೆಯಲ್ಲ) ಪ್ಯಾನ್-ಆಧಾರ್ ಲಿಂಕ್ ಅಗತ್ಯವಿಲ್ಲ.

ಇದನ್ನೂ ಓದಿ- Aadhaar Card: ಮಿಸ್ ಆಗಿ ಕೂಡ ನಿಮ್ಮ ಆಧಾರ್-ಪ್ಯಾನ್ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಆಧಾರ್-ಪ್ಯಾನ್ ಲಿಂಕ್ ಮಾಡಿದ ನಂತರ ಈ ರೀತಿ ಪರಿಶೀಲಿಸಿ:
>> ಪ್ಯಾನ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
>> ಕ್ಯಾಪ್ಚಾ ನಮೂದಿಸಿ ಮತ್ತು ಸಬ್ಮಿಟ್ ಲಿಂಕ್ ಅನ್ನು ಕ್ಲಿಕ್ ಮಾಡಿ
>> ಆಧಾರ್-ಪ್ಯಾನ್ ಲಿಂಕ್ ಸ್ಟೇಟಸ್ ಏನು ಎಂಬುದು ಪರದೆಯಲ್ಲಿ ಕಾಣಿಸುತ್ತದೆ.

ಆಧಾರ್-ಪ್ಯಾನ್ ಲಿಂಕ್ ಮಾಡಲು ಬೇಕಾಗುವ ದಾಖಲೆಗಳು :
ಆಧಾರ್-ಪ್ಯಾನ್ ಲಿಂಕ್‌ಗಾಗಿ ನಿಮಗೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಪ್ಯಾನ್ ಮಾತ್ರ ಅಗತ್ಯವಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News