ನವದೆಹಲಿ: ಆಧಾರ್ ಕಾರ್ಡ್(Aadhaar Card) ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ. ಏಕೆಂದರೆ ಪ್ರಾಯೋಗಿಕವಾಗಿ ಎಲ್ಲಾ ಅಧಿಕೃತ ಮತ್ತು ಬ್ಯಾಂಕ್-ಸಂಬಂಧಿತ ವಹಿವಾಟುಗಳಿಗೆ ಇದು ಅತ್ಯವಶ್ಯಕ. ಜನರು ಈಗ ಕಾಗದದಿಂದ ದೂರ ಸರಿದು ಡಿಜಿಟಲ್ಗೆ ಅಪ್ ಡೇಟ್ ಆಗುತ್ತಿದ್ದಾರೆ. ಹೀಗಾಗಿ ನೀವು ಆಧಾರ್ ಕಾರ್ಡ್ನ ಡಿಜಿಟಲ್ ಪ್ರತಿ ಹೊಂದುವುದು ಉತ್ತಮ. ವಿಶೇಷವಾಗಿ ಆನ್ಲೈನ್ ಪಾವತಿ(Online Payments) ಸೇರಿದಂತೆ ಕೆಲವು ಮಹತ್ವದ ಕಾರ್ಯಗಳಿಗೆ ಇದು ಅಗತ್ಯವಾಗಿರುತ್ತದೆ. ಆಧಾರ್ ಅನ್ನು ಡಿಜಿಟಲ್ ಆಗಿ ಬಳಸುವಾಗ ನಿಮ್ಮ ಆಧಾರ್ eSign ಅನ್ನು ದೃಢೀಕರಿಸುವುದು ಬಹಳ ಮುಖ್ಯ.
NSDL e-Govನ ಪ್ರಕಾರ eSign ಎನ್ನುವುದು ಆನ್ಲೈನ್ ಎಲೆಕ್ಟ್ರಾನಿಕ್ ಸಿಗ್ನೇಚರ್(Electronic Signature) ಸೇವೆಯಾಗಿದ್ದು, ಇದು ಆಧಾರ್ ಹೊಂದಿರುವವರು ಡಾಕ್ಯುಮೆಂಟ್ಗೆ ಡಿಜಿಟಲ್ ಸಹಿ ಮಾಡುವುದಕ್ಕೆ ಅನುಮತಿಸುತ್ತದೆ. ಇದರರ್ಥ ಬಯೋಮೆಟ್ರಿಕ್/ಒನ್-ಟೈಮ್-ಪಾಸ್ವರ್ಡ್ ದೃಢೀಕರಣದ ನಂತರ ಆಧಾರ್ ಹೊಂದಿರುವವರು ಈಗ ಡಾಕ್ಯುಮೆಂಟ್ಗೆ ಸಹಿ ಮಾಡಬಹುದು. ಇದಕ್ಕೆ ಕಾಗದ ಆಧಾರಿತ ಅರ್ಜಿ ನಮೂನೆ ಅಥವಾ ಪೇಪರ್ಗಳ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: 7th pay commission: Family Pension ನಿಯಮದಲ್ಲಿ ಭಾರಿ ಬದಲಾವಣೆ, ಇದೀಗ 2.5 ಲಕ್ಷ ರೂ.ಗಳವರೆಗೆ ಸಿಗಲಿದೆ ಲಾಭ
ಆಧಾರ್ನಲ್ಲಿ eSign ಪ್ರಯೋಜನಗಳು
ಎಲೆಕ್ಟ್ರಾನಿಕ್ ಸಹಿ(Electronic Signature)ಯಿಂದ ಆಡಳಿತದ ಕೆಲಸಗಳು ಮತ್ತಷ್ಟು ಸುಲಭಗೊಳ್ಳುತ್ತದೆ ಮತ್ತು ಇದರಿಂದ ಪ್ರತಿಯೊಬ್ಬರಿಗೂ ಹೆಚ್ಚು ಅನುಕೂಲಕರವಾಗಿರುತ್ತದೆ. ಆನ್ಲೈನ್ ಸೇವೆಯು ತುಂಬಾ ಸುರಕ್ಷಿತವಾಗಿರುತ್ತದೆ, ಏಕೆಂದರೆ ಬಳಸಿದ ತಕ್ಷಣ ಕೀಗಳನ್ನು ಅಳಿಸಲಾಗುತ್ತದೆ. ಇದಷ್ಟೇ ಅಲ್ಲದೆ ಇನ್ನು ಹಲವಾರು ಪ್ರಯೋಜನಗಳು eSignನ ಮೂಲಕ ಸಿಗಲಿವೆ. ಇವುಗಳಲ್ಲಿ ಪ್ರಮುಖವಾಗಿ A) ಸಮಯದ ಉಳಿತಾಯ, B) ವೆಚ್ಚದ ಉಳಿತಾಯ, C) ರಿಮೋಟ್ ಪ್ರದೇಶಗಳಲ್ಲಿಯೂ ಈ ಸೌಲಭ್ಯ ದೊರೆಯಲಿದ್ದು, ಬಳಕೆದಾರರಿಗೆ ಸುಧಾರಿತ ಅನುಕೂಲತೆ ಲಭ್ಯವಾಗಲಿದೆ, D) ಕಾನೂನು ಮಾನ್ಯತೆ (Legal Recognition), E) ಪರಿಶೀಲಿಸಬಹುದಾದ ಸಹಿ (Verifiable Signature) F) ಸಹಿ, ಬಳಕೆದಾರರ ಗೌಪ್ಯತೆಯ ಕಾಳಜಿ ಮತ್ತು G) ಇದರಿಂದ ಯಾವುದೇ ಕಾಗದವು ವ್ಯರ್ಥವಾಗುವುದಿಲ್ಲ, ಹೀಗಾಗಿ eSign ಪರಿಸರ ಸ್ನೇಹಿ ಪ್ರಯೋಜನಗಳನ್ನು ಹೊಂದಿದೆ.
ಆನ್ಲೈನ್ನಲ್ಲಿ ಆಧಾರ್ಗೆ eSign ಮಾಡುವುದು ಹೇಗೆ?
ಹಂತ 1: ಯಾವುದೇ ವೆಬ್ ಬ್ರೌಸರ್ ತೆರೆಯಿರಿ ಮತ್ತು ವಿಳಾಸ ಪಟ್ಟಿಯಲ್ಲಿ https://uidai.gov.in/ ಅಥವಾ https://eaadhaar.uidai.gov.in ಎಂದು ಟೈಪ್ ಮಾಡಿ.
ಹಂತ 2: ನೀವು ವೆಬ್ಸೈಟ್ನ ಮುಖಪುಟದಲ್ಲಿರುವಾಗ ‘Validity Unknown’ ಆಪ್ಶನ್ ಮೇಲೆ ಬಲಕ್ಕೆ ಕ್ಲಿಕ್ ಮಾಡಿ
ಹಂತ 3: ಸಿಗ್ನೇಚರ್ ವೆರಿಫಿಕೇಶನ್ ಸ್ಟೇಟಸ್ ವಿಂಡೋ ಈಗ ಪರದೆಯ ಮೇಲೆ ಕಾಣಿಸುತ್ತದೆ.
ಹಂತ 4: ಡ್ರಾಪ್-ಡೌನ್ ಮೆನುವಿನಿಂದ ‘Signature properties’ ಆಯ್ಕೆ ಮಾಡಿ.
ಹಂತ 5: ನಂತರ ‘Show certificate’ ಆಯ್ಕೆಯು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಅದನ್ನು ಆಯ್ಕೆ ಮಾಡಿ.
ಹಂತ 6: ಡ್ರಾಪ್-ಡೌನ್ ಮೆನುವಿನಿಂದ ‘NIC Sub-CA for NIC 2011, National Informatics Centre’ ಆಯ್ಕೆ ಮಾಡಿ.
ಹಂತ 7: ಬಳಿಕ ‘Trust’ ಮೆನುವಿನಿಂದ ‘Add to Trusted Identity’ ಆಪ್ಶನ್ ಆಯ್ಕೆ ಮಾಡಿ.
ಹಂತ 8: ಈಗ ಮುಂದಿನ ಹಂತಕ್ಕೆ ಮುಂದುವರಿಯುವ ಮೂಲಕ ‘Validate signature’ ಆಯ್ಕೆಯನ್ನು ಆರಿಸಿ.
ಇದನ್ನೂ ಓದಿ: Petrol Diesel Price Today: ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ, ಜನಸಾಮಾನ್ಯರ ಪರದಾಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ