Kisan Credit Card: ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರದಿಂದ ಭಾರೀ ಉಡುಗೊರೆಯ ನಿರೀಕ್ಷೆಯಲ್ಲಿರುವ ರೈತರಿಗಾಗಿ ಬಜೆಟ್‌ಗೂ ಮೊದಲೇ ಕೇಂದ್ರ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ರಾಷ್ಟ್ರದ ಬೆನ್ನೆಲುಬಾಗಿರುವ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸರ್ಕಾರ ಸೂಚನೆ ನೀಡಿದೆ.
ನಿನ್ನೆ (20 ಜನವರಿ) ಬ್ಯಾಂಕಿಂಗ್ ಕಾರ್ಯದರ್ಶಿ ವಿವೇಕ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕಿಂಗ್ ವಲಯದ ಒಂದು ದಿನದ ಪರಿಶೀಲನಾ ಸಭೆಯಲ್ಲಿ, ಕೃಷಿ ಮೂಲಸೌಕರ್ಯಗಳ ಪ್ರಗತಿ ಸಭೆಯಲ್ಲಿ ನಿಧಿ (ಎಐಎಫ್) ಯೋಜನೆಯನ್ನು ಸಹ ಪರಿಶೀಲಿಸಲಾಯಿತು. ಈ ವೇಳೆ ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳ ಸಂಪೂರ್ಣ ಮಾಹಿತಿಯನ್ನು ಕಾಲಮಿತಿಯಲ್ಲಿ ಡಿಜಿಟಲೀಕರಣಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಲಹೆ ನೀಡಲಾಯಿತು. ಜೊತೆಗೆ ಪಿಎಂ ಕಿಸಾನ್ ಡೇಟಾಬೇಸ್‌ನ ಸಹಾಯದಿಂದ ದೇಶದ ಪ್ರತಿ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆಯೂ ನಿರ್ದೇಶಿಸಲಾಯಿತು.
ಇದನ್ನೂ ಓದಿ- SBI ಗ್ರಾಹಕರಿಗೆ ಬಿಗ್ ಶಾಕ್ : ಬ್ಯಾಂಕ್ ಈ ನಿಯಮದಲ್ಲಿ ಭಾರಿ ಬದಲಾವಣೆ!
ಈ ಸಭೆಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY), ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಅಟಲ್ ಪಿಂಚಣಿ ಯೋಜನೆ (APY), ಪ್ರಧಾನ ಮಂತ್ರಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಮುದ್ರಾ ಮತ್ತು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PMSVANidhi), ಮತ್ತು ಕೃಷಿ ಸಾಲ ಇತ್ಯಾದಿಗಳನ್ನು ಸಹ ಪರಿಶೀಲಿಸಲಾಯಿತು.
ಇದನ್ನೂ ಓದಿ- ನೌಕರ ವರ್ಗದವರಿಗೊಂದು ಕಹಿ ಸುದ್ದಿ, 2023 ರಲ್ಲಿ ಭಾರಿ ಪ್ರಮಾಣದಲ್ಲಿ ನೌಕರಿ ಕಡಿತಕ್ಕೆ ಮುಂದಾಗಲಿವೆ ಟೆಕ್ ಕಂಪನಿಗಳು
ಸುಸ್ಥಿರ ಬ್ಯಾಂಕಿಂಗ್ ಸಂಬಂಧಕ್ಕಾಗಿ ಗ್ರಾಹಕರ ಅನುಭವವನ್ನು ಹೆಚ್ಚು ಉತ್ಕೃಷ್ಟಗೊಳಿಸಲು ಮತ್ತು ಆನಂದದಾಯಕವಾಗಿಸಲು ಬ್ಯಾಂಕುಗಳು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ ಬ್ಯಾಂಕಿಂಗ್ ಕಾರ್ಯದರ್ಶಿ ವಿವೇಕ್ ಜೋಶಿ, ಗ್ರಾಹಕರ ನಿರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳಿಗೆ ಗ್ರಾಹಕ ಸೇವಾ ರೇಟಿಂಗ್ ಅನ್ನು ತ್ವರಿತಗೊಳಿಸಲು ಭಾರತೀಯ ಬ್ಯಾಂಕ್‌ಗಳ ಸಂಘವನ್ನು ಈಗಾಗಲೇ ವಿನಂತಿಸಲಾಗಿದೆ. ಇದಲ್ಲದೆ, ತಮ್ಮೆಲ್ಲಾ ಗ್ರಾಹಕರಿಗೂ ಗುಣಮಟ್ಟದ ಸೇವೆಯನ್ನು ಹೆಚ್ಚಿಸಲು ಕೂಡ ಸೂಚಿಸಲಾಗಿದೆ ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.