7th Pay Commission: ಸರ್ಕಾರಿ ನೌಕರರಿಗೊಂದು ಬಂಬಾಟ್ ಸುದ್ದಿ! ವೇತನದಲ್ಲಿ 49,420 ಹೆಚ್ಚಳ

7th Pay Commission DA Hike: ಮುಂದಿನ ತಿಂಗಳೊಳಗೆ ಸರ್ಕಾರಿ ನೌಕರರ ಡಿಎ ಹೆಚ್ಚಳದ ಜೊತೆಗೆ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ. ಒಂದು ವೇಳೆ ಸರ್ಕಾರಿ ನೌಕರರ ಫಿಟ್ಮೆಂಟ್ ಫ್ಯಾಕ್ಟರ್ ಶೇ.2.57 ರಿಂದ ಶೇ.3.68ಕ್ಕೆ ಏರಿಕೆಯಾದರೆ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ರೂ.8000 ರಷ್ಟು ಹೆಚ್ಚಾಗಲಿದೆ.  

Written by - Nitin Tabib | Last Updated : Oct 28, 2022, 07:28 PM IST
  • ಇತ್ತೀಚೆಗೆ ಸರ್ಕಾರವು ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಹೆಚ್ಚಿಸಿರುವುದು ಇಲ್ಲಿ ಗಮನೀಯ ಅಂಶವಾಗಿದೆ.
  • ಇದರ ನಂತರ, ಜುಲೈನಿಂದ ನೌಕರರು ಹೆಚ್ಚಿದ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರದ ಲಾಭವನ್ನು ಪಡೆಯುತ್ತಿದ್ದಾರೆ.
  • ಇದೀಗ ಫಿಟ್ಮೆಂಟ್ ಅಂಶದಲ್ಲಿ ಬದಲಾವಣೆಯಾದರೆ ನೌಕರರ ಕನಿಷ್ಠ ಮೂಲ ವೇತನ ಹೆಚ್ಚಾಗಲಿದೆ.
7th Pay Commission: ಸರ್ಕಾರಿ ನೌಕರರಿಗೊಂದು ಬಂಬಾಟ್ ಸುದ್ದಿ! ವೇತನದಲ್ಲಿ 49,420 ಹೆಚ್ಚಳ title=
7th Pay Commission Latest Update

7th Pay Commission Fitment Factor Update: ಕೇಂದ್ರ ನೌಕರರಿಗೆ ಶೀಘ್ರದಲ್ಲಿಯೇ ಮತ್ತೊಂದು ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಮುಂದಿನ ತಿಂಗಳು ಫಿಟ್‌ಮೆಂಟ್ ಅಂಶದ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದು ನೌಕರರ ಕನಿಷ್ಠ ಮೂಲ ವೇತನವನ್ನು ಹೆಚ್ಚಿಸಲಿದೆ. ಇದಕ್ಕಾಗಿ ಕರಡು ಪ್ರತಿ ಸಿದ್ಧಪಡಿಸಿ, ಅದನ್ನು ಸರಕಾರದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ನೌಕರರ ಒಕ್ಕೂಟ ಮಹತ್ವದ ಅಪ್ಡೇಟ್ ನೀಡಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ, ಫಿಟ್‌ಮೆಂಟ್ ಅಂಶದಡಿ 52 ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರ ಮೂಲ ವೇತನ ಹೆಚ್ಚಾಗುವ ನಿರೀಕ್ಷೆ ಇದೆ.

ನೌಕರರ ಒಕ್ಕೂಟ ಬದಲಾವಣೆಗೆ ಆಗ್ರಹಿಸುತ್ತಿದೆ
ಇತ್ತೀಚೆಗೆ ಸರ್ಕಾರವು ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಹೆಚ್ಚಿಸಿರುವುದು ಇಲ್ಲಿ ಗಮನೀಯ ಅಂಶವಾಗಿದೆ. ಇದರ ನಂತರ, ಜುಲೈನಿಂದ ನೌಕರರು ಹೆಚ್ಚಿದ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರದ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ಫಿಟ್ಮೆಂಟ್ ಅಂಶದಲ್ಲಿ  ಬದಲಾವಣೆಯಾದರೆ ನೌಕರರ ಕನಿಷ್ಠ ಮೂಲ ವೇತನ ಹೆಚ್ಚಾಗಲಿದೆ. ಫಿಟ್ಮೆಂಟ್ ಅಂಶದಲ್ಲಿ ಬದಲಾವಣೆಯಾದ ತಕ್ಷಣ, ಅದರ ಪರಿಣಾಮವು ನೌಕರರ ಸಂಪೂರ್ಣ ವೇತನದ ಮೇಲೆ ಗೋಚರಿಸಲಿದೆ. ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳೊಳಗೆ ಸಭೆ ನಡೆಯುವ ನಿರೀಕ್ಷೆ ಇದೆ. ಫಿಟ್‌ಮೆಂಟ್ ಅಂಶ ಹೆಚ್ಚಿಸುವಂತೆ ಸರ್ಕಾರಿ ನೌಕರರು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದಾರೆ.

ವೇತನ ಹೆಚ್ಚಳದಲ್ಲಿ ಪ್ರಮುಖ ಪಾತ್ರ
ಪ್ರಸ್ತುತ ಕೇಂದ್ರ ನೌಕರರಿಗೆ ಶೇ.2.57ರ ದರದಲ್ಲಿ ಫಿಟ್‌ಮೆಂಟ್ ಅಂಶ ನೀಡಲಾಗುತ್ತಿದ್ದು, ಇದನ್ನು ಶೇ.3.68 ಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ. ಕೇಂದ್ರ ಉದ್ಯೋಗಿಗಳ ವೇತನವನ್ನು ನಿರ್ಧರಿಸುವಲ್ಲಿ ಫಿಟ್‌ಮೆಂಟ್ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ.ಫಿಟ್‌ಮೆಂಟ್ ಅಂಶದಲ್ಲಿ ಬದಲಾವಣೆ ಎಂದರೆ ಅದು ನಿಮ್ಮ ವೇತನದ ಮೇಲೂ ಪರಿಣಾಮ ಬೀರುತ್ತದೆ. ವಾಸ್ತವದಲ್ಲಿ, ಇದರ ಆಧಾರದ ಮೇಲೆ, ನೌಕರರ ಮೂಲ ವೇತನವನ್ನು ಹೆಚ್ಚಿಸಲಾಗುತ್ತದೆ.

ಇದನ್ನೂ ಓದಿ-Hero Bikes: ಮಾರುಕಟ್ಟೆಯಲ್ಲಿ ಭಾರಿ ಧೂಳೆಬ್ಬಿಸಿವೆ ಹಿರೋ ಕಂಪನಿಯ ಈ ಬೈಕ್ ಗಳು

2017ರಲ್ಲಿ ಮೂಲ ವೇತನ ಹೆಚ್ಚಿಸಲಾಗಿತ್ತು
ಫಿಟ್‌ಮೆಂಟ್ ಅಂಶವನ್ನು ಶೇ.2.57 ರಿಂದ ಶೆ. 3.68 ಕ್ಕೆ ಹೆಚ್ಚಾದರೆ, ಕನಿಷ್ಠ ಮೂಲ ವೇತನವು 18 ಸಾವಿರದಿಂದ 26 ಸಾವಿರ ರೂಪಾಯಿಗಳಿಗೆ ಏರಿಕೆಯಾಗಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕೂ ಮೊದಲು 2017 ರಲ್ಲಿ, ಸರ್ಕಾರವು ಪ್ರವೇಶ ಮಟ್ಟದ ನೌಕರರ ಮೂಲ ವೇತನವನ್ನು ಹೆಚ್ಚಿಸಿತು. ಆದರೆ ನಂತರ ಅದರಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಪ್ರಸ್ತುತ ಕೇಂದ್ರ ನೌಕರರು ಕನಿಷ್ಠ ವೇತನ 18 ಸಾವಿರ ರೂ., ಗರಿಷ್ಠ ವೇತನ 56,900 ರೂ. ಆಗಿದೆ

ಇದನ್ನೂ ಓದಿ-EPFO: PF ಖಾತೆದಾರರಿಗೆ EPFO ವತಿಯಿಂದ ಒಂದು ಮಹತ್ವದ ಮಾಹಿತಿ

ಹೇಗೆ ಲೆಕ್ಕ ಹಾಕಲಾಗುತ್ತದೆ
ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 3 ಬಾರಿ ಹೆಚ್ಚಿಸಿದರೆ, ಭತ್ಯೆಗಳನ್ನು ಹೊರತುಪಡಿಸಿ ನೌಕರರ ವೇತನವು 18,000 X 2.57 = 46,260 ರೂ. ಇದೆ ವೇಳೆ ಉದ್ಯೋಗಿಗಳ ಬೇಡಿಕೆಯನ್ನು ಒಪ್ಪಿಕೊಂಡರೆ, ನಂತರ ವೇತನವು 26000X3.68 = 95,680 ರೂ. ವೇತನವು 21000X3 = 63,000 3 ಪಟ್ಟು ಫಿಟ್‌ಮೆಂಟ್ ಅಂಶದ ಮೇಲೆ ಹೆಚ್ಚಳ ಇರಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News