DA Hike: ಡಿಎ ಹೆಚ್ಚಳ ಘೋಷಣೆಗೆ ಕ್ಷಣಗಣನೆ ಆರಂಭ, ಈಗಾಗಲೇ ಮುದ್ರೆಯೋತ್ತಿದೆ ಮೋದಿ ಸರ್ಕಾರ! ಎಷ್ಟು ಲಾಭ ಇಲ್ಲಿ ತಿಳಿಯಿರಿ

7th Pay Commission: ಶುಕ್ರವಾರ ಸಂಜೆ 6.30ಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆ ನಡೆಯಲಿದೆ. ಈ ಬಾರಿ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.  

Written by - Nitin Tabib | Last Updated : Mar 24, 2023, 04:29 PM IST
  • ಪ್ರಸ್ತುತ, ಕೇಂದ್ರ ನೌಕರರು ಶೇ. 38ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.
  • ಈ ಬಾರಿ ಅದರಲ್ಲಿ ಶೇ.4 ರಷ್ಟು ಏರಿಕೆಯಾಗಲಿದೆ.
  • ಈ ಹೆಚ್ಚಳದ ನಂತರ ಅದು 42% ಕ್ಕೆ ತಲುಪಲಿದೆ.
DA Hike: ಡಿಎ ಹೆಚ್ಚಳ ಘೋಷಣೆಗೆ ಕ್ಷಣಗಣನೆ ಆರಂಭ, ಈಗಾಗಲೇ ಮುದ್ರೆಯೋತ್ತಿದೆ ಮೋದಿ ಸರ್ಕಾರ! ಎಷ್ಟು ಲಾಭ ಇಲ್ಲಿ ತಿಳಿಯಿರಿ title=
ತುಟ್ಟಿಭತ್ಯೆ ಹೆಚ್ಚಳ ಘೋಷಣೆ!

DA Hike Latest Update: ಕೇಂದ್ರ ನೌಕರರ ತುಟ್ಟಿಭತ್ಯೆ ನಿರೀಕ್ಷೆಗೆ ಇಂದು ತೆರೆ ಬೀಳಲಿದೆ. ಈ ಬಾರಿ ಕೇಂದ್ರ ನೌಕರರು ತುಟ್ಟಿಭತ್ಯೆಗಾಗಿ ದೀರ್ಘ ಕಾಲದಿಂದ ಕಾಯುತ್ತಿದ್ದಾರೆ. ಇಂದು ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಶುಕ್ರವಾರ ಸಂಜೆ 6.30ಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆ ನಡೆಯಲಿದೆ. ಈ ಬಾರಿ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಪ್ರಸ್ತುತ ಶೇ.38 ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ
ಪ್ರಸ್ತುತ, ಕೇಂದ್ರ ನೌಕರರು ಶೇ. 38ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಈ ಬಾರಿ ಅದರಲ್ಲಿ ಶೇ.4 ರಷ್ಟು ಏರಿಕೆಯಾಗಲಿದೆ. ಈ ಹೆಚ್ಚಳದ ನಂತರ ಅದು 42% ಕ್ಕೆ ತಲುಪಲಿದೆ. ಇದು 1 ಜನವರಿ 2023 ರಿಂದ ಜಾರಿಗೆ ಬರಲಿದೆ. ಹೆಚ್ಚಿಸಿದ ಡಿಎ ಮತ್ತು ಬಾಕಿಯನ್ನು ಮಾರ್ಚ್ ತಿಂಗಳ ಸಂಬಳದಲ್ಲಿ ನೀಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಾರ್ಚ್ ನಿಂದ ಸರ್ಕಾರ ಹೆಚ್ಚಿದ ಡಿಎ ನೀಡಲಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. 

ತುಟ್ಟಿಭತ್ಯೆಯಲ್ಲಿ 4.40% ಹೆಚ್ಚಳ
ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಅಂಕಿ-ಅಂಶಗಳನ್ನು ಪರಿಶೀಲಿಸಲಾಗುವುದು. ಇದಾದ ಬಳಿಕ ಸಂಜೆ ತುಟ್ಟಿಭತ್ಯೆ ಹೆಚ್ಚಳವನ್ನು ಔಪಚಾರಿಕವಾಗಿ ಪ್ರಕಟಿಸಲಾಗುವುದು. ಸಂಪುಟದ ಅನುಮೋದನೆಯ ನಂತರ, ಹೆಚ್ಚಿದ ತುಟ್ಟಿಭತ್ಯೆಯ ಆದೇಶವನ್ನು ಹಣಕಾಸು ಸಚಿವಾಲಯವು ತಿಳಿಸುತ್ತದೆ. ನೀವು ಹಣದುಬ್ಬರ ಚಾರ್ಟ್ ಅನ್ನು ನೋಡಿದರೆ, ಜುಲೈ 2022 ರಿಂದ ಡಿಸೆಂಬರ್ 2022 ರವರೆಗೆ, ಎಐಸಿಪಿಐ ಸೂಚ್ಯಂಕದಲ್ಲಿ 2.6 ಅಂಕಗಳ ಹೆಚ್ಚಳವಾಗಿದೆ. ಇದರಲ್ಲಿ ಒಟ್ಟು ತುಟ್ಟಿ ಭತ್ಯೆಯಲ್ಲಿ ಶೇ.4.40ರಷ್ಟು ಹೆಚ್ಚಳವಾಗಿದೆ.

4 ರಷ್ಟು ತುಟ್ಟಿಭತ್ಯೆ ನಿಗದಿಪಡಿಸಲಾಗಿದೆ
ಡಿಸೆಂಬರ್ 2022 ರ AICPI ಸೂಚ್ಯಂಕದ ಡೇಟಾವನ್ನು ಆಧರಿಸಿ, 4 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ ಅನುಮೋದನೆ ದೊರೆತಾಗ ಮಾತ್ರ ಅದರ ಪ್ರಭಾವ ಪ್ರಯೋಜನಕಾರಿಯಾಗಲಿದೆ. 4 ರಷ್ಟು ಜಿಗಿತದೊಂದಿಗೆ, ಕೇಂದ್ರ ನೌಕರರ ವೇತನವು ತಿಂಗಳಿಗೆ 720 ರೂ. ಹೆಚ್ಚಳವಾಗಲಿದೆ. ಈ ಹೆಚ್ಚಳವು ಗರಿಷ್ಠ ವೇತನ ಶ್ರೇಣಿಗೆ ತಿಂಗಳಿಗೆ 2276 ರೂ.ಗಳಷ್ಟು ಇರಲಿದೆ ಲೆವೆಲ್-3ರ ಕನಿಷ್ಠ ಮೂಲ ವೇತನ ಶ್ರೇಣಿಯನ್ನು 18,000 ರೂ.ಗೆ ಲೆಕ್ಕ ಹಾಕಲಾಗುತ್ತದೆ.

ಲೆಕ್ಕಾಚಾರ ಈ ರೀತಿ ಇರಲಿದೆ
ಲೆವೆಲ್-3ರ ಕನಿಷ್ಠ ಮೂಲ ವೇತನ ಶ್ರೇಣಿಯನ್ನು 18,000 ರೂ.ಗೆ ಲೆಕ್ಕ ಹಾಕಲಾಗುತ್ತದೆ

1. ಉದ್ಯೋಗಿಯ ಮೂಲ ವೇತನ 18,000 ರೂ
2. ಹೊಸ ತುಟ್ಟಿಭತ್ಯೆ (42%) ರೂ.7560/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (38%) ರೂ.6840/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಾಗಿದೆ 7560-6840 = ರೂ 720/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 720X12 = 8640 ರೂ

ಇದನ್ನೂ ಓದಿ-ಆದಾಯ ತೆರಿಗೆ ಪಾವತಿದಾರರಿಗೆ ಆಡಿಟ್ ಬಳಿಕ ಸಿಗಲಿವೆ 41104 ರೂ.ಗಳು! ಸರ್ಕಾರ ನೀಡಿದೆ ಈ ಮಹತ್ವದ ಮಾಹಿತಿ

42% ತುಟ್ಟಿಭತ್ಯೆಯೊಂದಿಗೆ, ಹಂತ-3 ರ ಗರಿಷ್ಠ ಮೂಲ ವೇತನವನ್ನು ರೂ 56,900 ಎಂದು ಲೆಕ್ಕಹಾಕಲಾಗುತ್ತದೆ.
1. ಉದ್ಯೋಗಿಯ ಮೂಲ ವೇತನ ರೂ 56900
2. ಹೊಸ ತುಟ್ಟಿಭತ್ಯೆ (42%) ರೂ 23898/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (38%) ರೂ 21622/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಿದೆ 23898-21622 = ರೂ 2276/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 2276X12 = 27312 ರೂ

ಇದನ್ನೂ ಓದಿ-Big Update: ಪ್ರಯಾಣಿಕರಿಗಾಗಿ ಬಂಪರ್ ಘೋಷಣೆ ಮೊಳಗಿಸಿದ ನಿತೀನ್ ಗಡ್ಕರಿ, ಕೇಳಿ ಕುಣಿದು ಕುಪ್ಪಳಿಸುವಿರಿ!

ಗಮನಿಸಿ: ತುಟ್ಟಿಭತ್ಯೆಯ ಈ ಅಂಕಿ ಅಂಶವು 7 ನೇ ವೇತನ ಆಯೋಗದ ಆಧಾರದ ಮೇಲೆ ತಾತ್ಕಾಲಿಕವಾಗಿರುತ್ತದೆ. ಡಿಎ ಹೆಚ್ಚಳದ ನಂತರ, ಅಂತಿಮ ಲೆಕ್ಕಾಚಾರವು ಹೆಚ್ಚಾಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News