ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್...‌ ದೀಪಾವಳಿಗೆ ವೇತನ ಹೆಚ್ಚಳದ ಜೊತೆ ತುಟ್ಟಿಭತ್ಯೆ ಘೋಷಿಸಿದ ಸರ್ಕಾರ: ಹಬ್ಬಕ್ಕೂ ಮುನ್ನ ಕೈ ಸೇರಲಿದೆ ಇಷ್ಟು ಮೊತ್ತದ ʼಗಿಫ್ಟ್‌ʼ

Hike in DA: ಪ್ರಸ್ತುತ ಡಿಎ ವೇತನದ ಶೇಕಡಾ 50 ರಷ್ಟಿದೆ. ಇನ್ನು ಹೆಚ್ಚಳದ ಅನುಮೋದನೆಯ ನಂತರ ಅದು ಶೇಕಡಾ 53 ರಷ್ಟಾಗುತ್ತದೆ. ಸಂಪುಟ ಸಭೆಯ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ.

Written by - Bhavishya Shetty | Last Updated : Oct 16, 2024, 08:31 PM IST
    • ಕೇಂದ್ರ ಸರ್ಕಾರಿ ನೌಕರರು ಈ ವರ್ಷ ದೀಪಾವಳಿಗೂ ಮುನ್ನವೇ ತಮ್ಮ ತುಟ್ಟಿಭತ್ಯೆ (ಡಿಎ) ಪಡೆಯಲಿದ್ದಾರೆ.
    • ತುಟ್ಟಿಭತ್ಯೆಯಲ್ಲಿ ಶೇ.3 ರಷ್ಟು ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ.
    • ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ
ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್...‌ ದೀಪಾವಳಿಗೆ ವೇತನ ಹೆಚ್ಚಳದ ಜೊತೆ ತುಟ್ಟಿಭತ್ಯೆ ಘೋಷಿಸಿದ ಸರ್ಕಾರ: ಹಬ್ಬಕ್ಕೂ ಮುನ್ನ ಕೈ ಸೇರಲಿದೆ ಇಷ್ಟು ಮೊತ್ತದ ʼಗಿಫ್ಟ್‌ʼ title=
DA hike

DA hike: ಕೇಂದ್ರ ಸರ್ಕಾರಿ ನೌಕರರು ಈ ವರ್ಷ ದೀಪಾವಳಿಗೂ ಮುನ್ನವೇ ತಮ್ಮ ತುಟ್ಟಿಭತ್ಯೆ (ಡಿಎ) ಪಡೆಯಲಿದ್ದಾರೆ. ತುಟ್ಟಿಭತ್ಯೆಯಲ್ಲಿ ಶೇ.3 ರಷ್ಟು ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಅಂದರೆ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿದ ಸಂಬಳದ ಜೊತೆಗೆ ಮೂರು ತಿಂಗಳ ಡಿಎ ಬಾಕಿಯನ್ನು ಸಹ ಪಡೆಯಲಿದ್ದಾರೆ.

ಇದನ್ನೂ ಓದಿ:  ಅಳತೆ ಮೀರಿ ದೊಡ್ಡದಾಗುತ್ತಿರುವ ಹೊಟ್ಟೆಗೆ ಈ ನೀರೇ ಪರಿಹಾರ: ಖಾಲಿ ಹೊಟ್ಟೆಗೆ ಕುಡಿದರೆ ಡೊಳ್ಳುಹೊಟ್ಟೆಯೂ ಚಪ್ಪಟೆಯಾಗುವುದು

ಪ್ರಸ್ತುತ ಡಿಎ ವೇತನದ ಶೇಕಡಾ 50 ರಷ್ಟಿದೆ. ಇನ್ನು ಹೆಚ್ಚಳದ ಅನುಮೋದನೆಯ ನಂತರ ಅದು ಶೇಕಡಾ 53 ರಷ್ಟಾಗುತ್ತದೆ. ಸಂಪುಟ ಸಭೆಯ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಮೇಲೆ ರೂ.9,448 ಕೋಟಿ ಆರ್ಥಿಕ ಹೊರೆ ಹೆಚ್ಚಲಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಸರ್ಕಾರದ ಈ ನಿರ್ಧಾರದಿಂದ 49.18 ಲಕ್ಷ ಕೇಂದ್ರ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ಡಿಎಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡುತ್ತದೆ. ಜನವರಿಯಲ್ಲಿ ಹಾಗೂ ಜುಲೈನಿಂದ ಪೂರ್ವಾನ್ವಯವಾಗುವಂತೆ ನಂತರದ ತಿಂಗಳುಗಳಲ್ಲಿ ಡಿಎ ಪರಿಷ್ಕರಣೆ ನಡೆಸುವುದು ರೂಢಿ. ಈ ಮೂಲಕ ಹಾಲಿ ಕೇಂದ್ರ ಸರ್ಕಾರಿ ನೌಕರರು ಡಿಎ ಪಡೆದರೆ ಪಿಂಚಣಿದಾರರು ಡಿಆರ್‌ (ಡಿಯರ್‌ನೆಸ್‌ ರಿಲೀಫ್‌) ಸ್ವೀಕರಿಸುತ್ತಾರೆ.

ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಬಾರಿ ತನ್ನ ಉದ್ಯೋಗಿಗಳ ಡಿಎಯನ್ನು ಘೋಷಿಸುತ್ತದೆ. ಜನವರಿಯಲ್ಲಿ ಹಾಗೂ ಜುಲೈನಿಂದ ಪೂರ್ವಾನ್ವಯವಾಗುವಂತೆ ನಂತರದ ತಿಂಗಳುಗಳಲ್ಲಿ ಡಿಎ ಪರಿಷ್ಕರಣೆ ನಡೆಸುವುದು ರೂಢಿ. ಈ ಮೂಲಕ ಹಾಲಿ ಕೇಂದ್ರ ಸರ್ಕಾರಿ ನೌಕರರು ಡಿಎ ಪಡೆದರೆ ಪಿಂಚಣಿದಾರರು ಡಿಆರ್‌ (ಡಿಯರ್‌ನೆಸ್‌ ರಿಲೀಫ್‌) ಸ್ವೀಕರಿಸುತ್ತಾರೆ.

ಮತ್ತೊಂದೆಡೆ, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಬುಧವಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಯಲ್ಲಿ 4% ಹೆಚ್ಚಳವನ್ನು ಘೋಷಿಸಿದರು. ರಾಯ್‌ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪ್ರಸ್ತುತ ನಾವು ಎಲ್ಲಾ ರಾಜ್ಯ ನೌಕರರಿಗೆ ಶೇಕಡಾ 46 ರಷ್ಟು ಡಿಎ ನೀಡುತ್ತೇವೆ ಮತ್ತು ಅವರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸುತ್ತೇವೆ ಎಂದು ನಮ್ಮ ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಅವರಿಗೆ ಶೇಕಡಾ 50 ಡಿಎ ಸಿಗಲಿದೆ.

ಇದನ್ನೂ ಓದಿ: ಸೋಂಟದ ಸುತ್ತ ಜೋತು ಬಿದ್ದಿರುವ ಹಠಮಾರಿ ಬೊಜ್ಜನ್ನು ಮಂಜುಗಡ್ಡೆಯಂತೆ ಕರಗಿಸುತ್ತವೆ ಈ ಬೀಜಗಳು! ಹೀಗೆ ಸೇವಿಸಿದ್ರೆ ಬಳುಕುವ ಬಳ್ಳಿಯಂತಾಗುತ್ತೀರಿ!!

ಇದರ ಜೊತೆಯಾಗಿ, ರೈತರಿಗೆ ಪರಿಹಾರ ನೀಡಲು ರಬಿ ಬೆಳೆಗಳ ಮೇಲಿನ ಎಂಎಸ್‌ಪಿಯನ್ನು ಹೆಚ್ಚಿಸಲು ಸರ್ಕಾರ ಘೋಷಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, 2025-26ನೇ ಸಾಲಿಗೆ 6 ರಬಿ ಬೆಳೆಗಳಿಗೆ ಎಂಎಸ್‌ಪಿಗೆ ಸಂಪುಟ ಅನುಮೋದನೆ ನೀಡಿದೆ. ಗೋಧಿಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ರೂ.150 ಹೆಚ್ಚಿಸಲಾಗಿದೆ ಎಂಬ ವರದಿಗಳಿವೆ. ಇನ್ನು ಸಾಸಿವೆ ಮೇಲಿನ ಎಂಎಸ್ಪಿ ಕೂಡ 300 ರೂ.ಗಳಷ್ಟು ಹೆಚ್ಚಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News