7th Pay Commission: ಈ ತಿಂಗಳಿನಲ್ಲಿ ಸರ್ಕಾರಿ ನೌಕರರ ಖಾತೆ ಸೇರಲಿವೆ 2.59 ಲಕ್ಷ ರೂ. ಇಲ್ಲಿದೆ ಲೆಕ್ಕಾಚಾರ

7th Pay Commission DA Hike Latest News: ಕೇಂದ್ರ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಮತ್ತೊಮ್ಮೆ ಹೆಚ್ಚಳವಾಗಿದೆ. ಈ ಬಾರಿ ಸರ್ಕಾರ ನೌಕರರ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದೆ. ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Aug 9, 2022, 08:12 PM IST
  • ಕೊನೆಗೂ ಕೇಂದ್ರ ನೌಕರರ ನಿರೀಕ್ಷೆಗೆ ತೆರೆಬಿದ್ದಂತಾಗಿದೆ.
  • ರಕ್ಷಾ ಬಂಧನಕ್ಕೂ ಮುನ್ನ ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡಲಾಗಿದೆ.
  • ಬನ್ನಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
7th Pay Commission: ಈ ತಿಂಗಳಿನಲ್ಲಿ ಸರ್ಕಾರಿ ನೌಕರರ ಖಾತೆ ಸೇರಲಿವೆ 2.59 ಲಕ್ಷ ರೂ. ಇಲ್ಲಿದೆ ಲೆಕ್ಕಾಚಾರ title=
7th Pay Commission Latest News (File Photo)

7th Pay Commission Latest Update: ಕೊನೆಗೂ ಕೇಂದ್ರ ನೌಕರರ ನಿರೀಕ್ಷೆಗೆ ತೆರೆಬಿದ್ದಂತಾಗಿದೆ. ರಕ್ಷಾ ಬಂಧನಕ್ಕೂ ಮುನ್ನ ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡಲಾಗಿದೆ.  ಜೂನ್ ತಿಂಗಳ ಅಖಿಲ ಭಾರತ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಇಂಡಸ್ಟ್ರಿಯಲ್ ವರ್ಕರ್ಸ್ (ಎಐಸಿಪಿಐ) ಅಂಕಿಅಂಶಗಳು ಹೊರಬಂದ ನಂತರ, ತುಟ್ಟಿ ಭತ್ಯೆಯಲ್ಲಿ ಉತ್ತಮ ಏರಿಕೆಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ, ಇದೀಗ ಅದನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಬನ್ನಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆ
ನಮ್ಮ ಅಂಗಸಂಸ್ಥೆ ವೆಬ್‌ಸೈಟ್ Zee ಬ್ಯುಸಿನೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೇಂದ್ರ ಉದ್ಯೋಗಿಗಳ ಡಿಎಯಲ್ಲಿ ಶೇ. 4ರಷ್ಟು ಏರಿಕೆ ಮಾಡಲಾಗಿದೆ. ಈ ಕುರಿತು ಸರ್ಕಾರ ಘೋಷಣೆ ಮಾಡಿದೆ. ಡಿಎ ಹೆಚ್ಚಳವು ಎಐಸಿಪಿಐನ ಅಂಕಿ-ಅಂಶಗಳನ್ನು ಅವಲಂಬಿಸಿರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. ಪೇ-ಗ್ರೇಡ್ ಲೆವೆಲ್ 3 ರ ಗರಿಷ್ಠ ಸ್ಕೇಲ್‌ನಲ್ಲಿ ರೂ 56,900 ರ ಮೂಲ ವೇತನದ ಮೇಲಿನ ಒಟ್ಟು ವಾರ್ಷಿಕ ತುಟ್ಟಿ ಭತ್ಯೆ ರೂ 259,464 ಆಗಲಿದೆ. ಆದರೆ, ಪ್ರಸ್ತುತ ತುಟ್ಟಿಭತ್ಯೆಗಿಂತ ವ್ಯತ್ಯಾಸದ ಬಗ್ಗೆ ಹೇಳುವುದಾದರೆ, ವೇತನದಲ್ಲಿ ವಾರ್ಷಿಕ ಹೆಚ್ಚಳ 27,312 ರೂ.ಗಳಷ್ಟು ಇರಲಿದೆ

ಶೇ. 38ರಷ್ಟು ಡಿಎ ಹಣ ಯಾವಾಗ ಬರಲಿದೆ?
ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದ ನಂತರ, ಕೇಂದ್ರ ನೌಕರರ ಒಟ್ಟು ತುಟ್ಟಿ ಭತ್ಯೆ 38% ಕ್ಕೆ ಏರಿಕೆಯಾಗಿದೆ, ಇದಕ್ಕೂ ಮೊದಲು ಸರ್ಕಾರಿ ನೌಕರರ ತುಟ್ಟಿ ಭತ್ಯೆ 34% ಆಗಿತ್ತು ಎಂಬುದು ಇಲ್ಲಿ ಗಮನಾರ್ಹ. ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ 2022 ರ ವೇತನದಲ್ಲಿ ಪಾವತಿಯಾಗಲಿದೆ, ಹೆಚ್ಚಿಸಿದ ಡಿಎ ಜುಲೈನಿಂದ ಜಾರಿಗೆ ಬಂದಿದೆ. ಅಂದರೆ ಜುಲೈ ಮತ್ತು ಆಗಸ್ಟ್ ಎರಡು ತಿಂಗಳ ಬಾಕಿ ಹಣವೂ ನೌಕರರ ಖಾತೆಗೆ ಸೇರಲಿದೆ. ಒಟ್ಟಿನಲ್ಲಿ ಹಬ್ಬ ಹರಿದಿನಗಳಲ್ಲಿ ನೌಕರರ ಖಾತೆಗೆ ಡಿಎ ಬಾಕಿ ಜತೆಗೆ ದೊಡ್ಡ ಹಣವೂ ಬರಲಿದೆ. ಉದ್ಯೋಗಿಗಳ ಖಾತೆಗೆ ಎಷ್ಟು ಸಂಬಳ ಬರಲಿದೆ ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ. 

ಇದನ್ನೂ ಓದಿ-Post Office ನಲ್ಲಿ ಹಣ ಹೂಡಿಕೆ ಮಾಡುವವರೇ ಎಚ್ಚರ! 95.62 ಕೋಟಿ ರೂ. ಹಣ ಕಣ್ಮರೆ

ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ - 56,900 ರೂ
2. ಹೊಸ ತುಟ್ಟಿಭತ್ಯೆ (38%) - ರೂ 21,622/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) - ರೂ.19,346/ತಿಂಗಳು
4. ಅಂದರೆ, 21,622-19,346 = ರೂ 2260/ತಿಂಗಳಿಗೆ ತುಟ್ಟಿಭತ್ಯೆ ಏರಿಕೆಯಾಗಲಿದೆ.
5. ವಾರ್ಷಿಕ ವೇತನದಲ್ಲಿ ಹೆಚ್ಚಳ - 2260 X12 = 27,120 ರೂ

ಇದನ್ನೂ ಓದಿ-Nitin Gadkari: ವಾಹನ ಸವಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ಕನಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ - ರೂ 18,000
2. ಹೊಸ ತುಟ್ಟಿಭತ್ಯೆ (38%) - ರೂ.6840/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) - ರೂ.6120/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಾಗಿದೆ - 6840-6120 = ರೂ.1080/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ - 720 X12 = 8640 ರೂ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News