ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ: ಶ್ರೀರಾಮುಲು ವಿಶ್ವಾಸ

ಬಿಜೆಪಿ ಜತೆ ಪಕ್ಷೇತರ ಶಾಸಕರೂ ಇದ್ದಾರೆ.

Last Updated : May 17, 2018, 01:00 PM IST
ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ: ಶ್ರೀರಾಮುಲು ವಿಶ್ವಾಸ title=
Pic: Twitter@ANI

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆಗಳನ್ನು ತಿಳಿಸಿದ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು, ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ನಾವು ಬಹುಮತ ಸಾಬೀತು ಪಡಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಜೊತೆ ಬಹಳಷ್ಟು ಪಕ್ಷೇತರರು ಇದ್ದಾರೆ. ಕಾಂಗ್ರೆಸ್​-ಜೆಡಿಎಸ್ ನಲ್ಲಿ ದೊಡ್ಡ ಸಂಖ್ಯೆಯ ಅಸಮಾಧಾನಿತರಿದ್ದಾರೆ. ಅವರೆಲ್ಲರೂ ನಮ್ಮ ಜೊತೆ ಬಂದೇ ಬರ್ತಾರೆ. ಯಾರೂ ಊಹಿಸಲಾರದಷ್ಟು ಸಂಖ್ಯೆಯಲ್ಲಿ ನಮ್ಮ ಜೊತೆ ಶಾಸಕರು ಬರುತ್ತಾರೆ. ನಾವು ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

Trending News