ಭಾಷಣದ ವೇಳೆ ಸುಳ್ಳು ಇತಿಹಾಸ ಹೇಳಿ ಮುಜುಗರಕ್ಕಿಡಾದ ಪ್ರಧಾನಿ ನರೇಂದ್ರ ಮೋದಿ!

    

Last Updated : May 4, 2018, 12:05 AM IST
 ಭಾಷಣದ ವೇಳೆ ಸುಳ್ಳು ಇತಿಹಾಸ ಹೇಳಿ ಮುಜುಗರಕ್ಕಿಡಾದ ಪ್ರಧಾನಿ ನರೇಂದ್ರ ಮೋದಿ!  title=

ಬೆಂಗಳೂರು: ಕರ್ನಾಟಕದ ಚುನಾವಣಾ ಪ್ರಚಾರದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಇತಿಹಾಸವನ್ನು ಹೇಳಿ ಭಾರಿ ಮುಜುಗರಕ್ಕೆ ಒಳಗಾಗಿದ್ದಾರೆ.

ಮೋದಿ ಭಾಷಣದ ವೇಳೆ ಪ್ರಸ್ತಾಪಿಸುತ್ತಾ  "ಕರ್ನಾಟಕವು ಶೌರ್ಯಕ್ಕೆ ಸರಿ ಸಮಾನವಾದ ಹೆಸರಾಗಿದೆ. ಆದರೆ, ಕಾಂಗ್ರೆಸ್ ಸರಕಾರಗಳು ಫೀಲ್ಡ್ ಮಾರ್ಷಲ್ ಕರಿಯಪ್ಪ ಮತ್ತು ಜನರಲ್ ತಿಮ್ಮಯ್ಯರನ್ನು ಹೇಗೆ ನೋಡಿಕೊಂಡರು ಎನ್ನುವುದಕ್ಕೆ ಇತಿಹಾಸದಲ್ಲಿ ಪುರಾವೆಗಳಿವೆ. 1948 ರಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ, ಜನರಲ್ ತಿಮ್ಮಯ್ಯ ಅವರನ್ನು ಪ್ರಧಾನಿ ನೆಹರು ಮತ್ತು ರಕ್ಷಣಾ ಸಚಿವ ಕೃಷ್ಣ ಮೆನನ್ ಅವಮಾನಿಸಿದರು " ಎಂದು ಅವರು ಭಾಷಣದಲ್ಲಿ ಹೇಳಿದ್ದಾರೆ.

ಪ್ರಧಾನಿ ಪ್ರಸ್ತಾಪಿಸಿದ ತಪ್ಪಿಗೆ ತಕ್ಷಣ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್  ಅವರು "ನೋ ಸರ್, ಕೃಷ್ಣ ಮೆನನ್ ಏಪ್ರಿಲ್ 1957 ರಿಂದ ಅಕ್ಟೋಬರ್ 1962 ರವರೆಗೆ ರಕ್ಷಣಾ ಸಚಿವರಾಗಿದ್ದರು. ಜನರಲ್ ತಿಮ್ಮಯ್ಯ ಅವರು  ಮೇ 1957 ರಿಂದ ಮೇ 1961 ರವರೆಗೂ ಸೇನಾ ಮುಖ್ಯಸ್ಥರಾಗಿದ್ದರು. ಸರ್ ಪ್ರಧಾನಿ ಮಂತ್ರಿ ಕಾರ್ಯಾಲಯಕ್ಕೆ ಸತ್ಯವನ್ನು ಪರೀಕ್ಷಿಸಲು ಸಾಧ್ಯವಿಲ್ಲವೇ ? ಇದು ನಿಜಕ್ಕೂ ಮುಜುಗರದ ವಿಷಯ! " ಎಂದು ಟ್ವೀಟ್ ಮಾಡಿದ್ದಾರೆ.

Trending News