ಯುಪಿಯ ಈ 10 ಐಎಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕರ್ನಾಟಕ ಚುನಾವಣೆ

ಒಂದೆಡೆ ರಾಜಕೀಯ ಪಕ್ಷಗಳು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಿಡಿತವನ್ನು ಹೆಚ್ಚಿಸುತ್ತಿವೆ ಮತ್ತು ಮತ್ತೊಂದೆಡೆ ಚುನಾವಣಾ ಆಯೋಗವು ಸಿದ್ಧತೆಗಳನ್ನು ಬಲಪಡಿಸುತ್ತಿದೆ.

Last Updated : Apr 20, 2018, 01:51 PM IST
ಯುಪಿಯ ಈ 10 ಐಎಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕರ್ನಾಟಕ ಚುನಾವಣೆ  title=

ಲಕ್ನೋ: ಒಂದೆಡೆ ರಾಜಕೀಯ ಪಕ್ಷಗಳು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಿಡಿತವನ್ನು ಹೆಚ್ಚಿಸುತ್ತಿವೆ ಮತ್ತು ಮತ್ತೊಂದೆಡೆ ಚುನಾವಣಾ ಆಯೋಗವು ಸಿದ್ಧತೆಗಳನ್ನು ಬಲಪಡಿಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೇಲ್ವಿಚಾರಣೆ ಮಾಡಲು 10 ಐಎಎಸ್ ಅಧಿಕಾರಿಗಳನ್ನು ಚುನಾವಣಾ ಆಯೋಗ ನೇಮಿಸಿದೆ. ಆಯೋಗದ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿದ್ದಾರೆ.

ಕರ್ನಾಟಕ ಚುನಾವಣೆ ವೀಕ್ಷಕರಾಗಿ ಉತ್ತರ ಪ್ರದೇಶದ(ಯುಪಿ) ಅಧಿಕಾರಿಗಳನ್ನು ಆಯೋಗ ನೇಮಿಸಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ ವಿಶೇಷ ಕಾರ್ಯದರ್ಶಿ ಡಾ. ಸರೋಜ್ ಕುಮಾರ್, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆ ವಿಶೇಷ ಕಾರ್ಯದರ್ಶಿ ಅಭಯ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅನಿಲ್ ಕುಮಾರ್ ಸಾಗರ್ ಸೇರಿದಂತೆ ಹಲವರು ಇದರಲ್ಲಿದ್ದಾರೆ.

ಈ ಅಧಿಕಾರಿಗಳಿಗೆ ಚುನಾವಣೆಯ ಜವಾಬ್ದಾರಿ
ಇದಲ್ಲದೆ, ಭೂ ಕಂದಾಯ ಆದಾಯದ ಹೆಚ್ಚುವರಿ ಕಮೀಷನರ್ ರಾಜೇಶ್ ಕುಮಾರ್ ದ್ವಿತೀಯ, ಅಲಿಗಢದ ಹೆಚ್ಚುವರಿ ಕಮೀಷನರ್ ಫೈಸಲ್ ಅಫ್ತಾಬ್, ಸಾಮಾನ್ಯ ಆಡಳಿತ ಇಲಾಖೆ ವಿಶೇಷ ಕಾರ್ಯದರ್ಶಿ ಪವನ್ ಕುಮಾರ್, ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಹರಿಯಮ್, ವೈಭವ್ ಶ್ರೀವಾಸ್ತವ, ಪ್ರವಾಸೋದ್ಯಮ ಇಲಾಖೆ ವಿಶೇಷ ಕಾರ್ಯದರ್ಶಿ ಅಖಂಡ್ ಪ್ರತಾಪ್ ಸಿಂಗ್ ಮತ್ತು ಸಮಾಜ ಕಲ್ಯಾಣ ನಿರ್ದೇಶಕ ಜಗದಾಶ್ ಪ್ರಸಾದ್ ಹೆಗಲಿಗೆ ಚುನಾವಣಾ ಜವಾಬ್ದಾರಿ ಹೊರಿಸಲಾಗಿದೆ.

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ಮತದಾನ ನಡೆಯಲಿದೆ ಮತ್ತು ಚುನಾವಣಾ ಫಲಿತಾಂಶಗಳನ್ನು ಮೇ 15 ರಂದು ಘೋಷಿಸಲಾಗುವುದು.

Trending News