ಪುಣೆ: ಟಾಸ್ ಗೆದ್ದು ಚೆನ್ನೈ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ತನ್ನ ನಿರ್ಧಾರದ ಅನುಸಾರವಾಗಿಯೇ ಬೌಲಿಂಗ್ ಮಾಡಿದ ಚೆನ್ನೈ ತಂಡವು ಬೆಂಗಳೂರನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು.
All over! Thala @msdhoni goes on a rampage as @ChennaiIPL beat #RCB by 6 wickets in Pune. #CSKvRCB #VIVOIPL
Details - https://t.co/K5c8f0EU80 pic.twitter.com/mold0yYZRU
— IndianPremierLeague (@IPL) May 5, 2018
ಚೆನ್ನೈ ನ ಆಲ್ ರೌಂಡರ್ ರವಿಂದ್ರ ಜಡೇಜಾ ರವರು ನಾಲ್ಕು ಓವರ್ ಗಳಲ್ಲಿ ಕೇವಲ 3 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಬೆಂಗಳೂರು ತಂಡದ ಬ್ಯಾಟಿಂಗ್ ಬೆನ್ನೆಲಬು ಮುರಿದರು.
As @ChennaiIPL climb to the top of the #VIVOIPL points table, yet another fan rushes to meet his idol @msdhoni. #CSKvRCB #VIVOIPL pic.twitter.com/p14RVjGFs9
— IndianPremierLeague (@IPL) May 5, 2018
ಬೆಂಗಳೂರು ತಂಡದ ಪರ ಪೃಥ್ವಿ ಷಾ (53) ಮತ್ತು ಟಿಮ್ ಸೌಥೀ (36) ರನ್ ಗಳ ನೆರವಿಂದ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. 128 ರನ್ ಗಳ ಸುಲಭ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಅಂಬಟಿ ರಾಯಡು(32) ಸುರೇಶ ರೈನಾ ( 25) ಧೋನಿ( 31) ರನ್ ಗಳ ಮೂಲಕ ನಾಲ್ಕು ವಿಕೆಟ್ ಕಳೆದುಕೊಂಡು ಇನ್ನು 2 ಓವರ್ ಗಳು ಬಾಕಿ ಇರುವಂತೆಯ ಗೆಲುವಿನ ದಡ ಸೇರಿತು. ಆ ಮೂಲಕ ಐಪಿಎಲ್ ನಲ್ಲಿ ಚೆನ್ನೈ ತಂಡವು ಈಗ ಅಂಕ ಪಟ್ಟಿಯಲ್ಲಿ ಅಗ್ರಸ್ತಾನಕ್ಕೆ ಲಗ್ಗೆ ಇಟ್ಟಿದೆ.