ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡ್ತೀನಿ: ಕುಮಾರಸ್ವಾಮಿ

ರೈತರ ಸಾಲ ಮನ್ನಾ ವಿಚಾರವಾಗಿ ಯಡಿಯೂರಪ್ಪ ಅವರ ತರ ನಾನು ಆತುರದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ, ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ಬಂದಿದ್ರೆ ತಕ್ಷಣವೇ ನಾನು ಸಾಲಮನ್ನಾ ಪ್ರಕಟಿಸುತ್ತಿದ್ದೆ- ಎಚ್.ಡಿ. ಕುಮಾರಸ್ವಾಮಿ

Last Updated : May 25, 2018, 10:07 AM IST
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡ್ತೀನಿ: ಕುಮಾರಸ್ವಾಮಿ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈತರ ಸಾಲ ಮನ್ನಾ ವಿಚಾರವಾಗಿ ಯಡಿಯೂರಪ್ಪ ಅವರ ತರ ನಾನು ಆತುರದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ಬಂದಿದ್ದರೆ ತಕ್ಷಣವೇ ನಾನು ಸಾಲಮನ್ನಾ ಪ್ರಕಟಿಸುತ್ತಿದ್ದೆ. ನಮ್ಮದು ಸಮ್ಮಿಶ್ರ ಸರ್ಕಾರ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಯೂ ಚರ್ಚೆ ನಡೆಸಬೇಕು. ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ. ಹಣಕಾಸಿನ ಕುರಿತಾಗಿ ಸಾಧಕ ಭಾದಕ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ. ರೈತರ ವಿಚಾರದಲ್ಲಿ ನಾನು ಯಾರಿಂದಲ್ಲೂ ಹೇಳಿಸಿ ಕೊಳ್ಳಲು ಸಿದ್ದನಿಲ್ಲ, ಅವರ ಕಷ್ಟ ಏನು ಎಂಬುದನ್ನು ನಾನು ಅರಿತ್ತಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ 54 ಗಂಟೆನೇನೋ ಅಧಿಕಾರ ವಹಿಸಿಕೊಂಡರು. ಅವರು ಏನ್ ಮಾಡಿದ್ರು ಅಧಿಕಾರಿಗಳ ವರ್ಗಾವಣೆ ಮಾಡಿದ್ರು ಅಷ್ಟೇ. ಎಲ್ಲವನ್ನೂ ನೋಡಿದ್ದೀರಿ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗದು ಕೊಂಡು ಜನಪರ ಕೆಲಸ ಮಾಡ್ತೀನಿ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ
ಇಲ್ಲಿಗೆ ರಾಜಕೀಯ ಸಾಕು, ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಹರಿಸೋಣ, ಎರಡು ಪಕ್ಷಗಳ ಪ್ರಣಾಳಿಕೆಯಲ್ಲಿ ಏನಿದೆ ಅದನ್ನ ಗಮನದಲ್ಲಿ ಇಟ್ಟುಕೊಂಡು ಸಾಕಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಗೃಹ ಕಚೇರಿಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದರು.

ನನ್ನ ತಾಯಿಯ ಹೆಸರನ್ನು ರಾಜಕೀಯದಲ್ಲಿ ತರಬೇಡಿ
ನಾನು ಯಾವುದೋ ಪತ್ರಿಕೆ ನೋಡಿದೆ, ಅದರಲ್ಲಿ  ನನ್ನ ತಾಯಿ ಚೆನ್ನಮ್ನ  ಅವರು, ಸಿದ್ದರಾಮಯ್ಯನವರನ್ನ ಯಾವತ್ತು ಕ್ಷಮಿಸಲ್ಲ ಅಂತಾ ಬರೆದಿದ್ದಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನನ್ನ ತಾಯಿ ನನಗೆ ಜನ್ಮ ಕೊಟ್ಟು ಸಾಕಿದ್ದಾರೆ. ಅವರಿಗೆ ಗೌರವ ಕೊಡೋದು ಮಕ್ಕಳ ಕರ್ತವ್ಯ, ದಯವಿಟ್ಟು ರಾಜಕೀಯ ವಿಚಾರದಲ್ಲಿ ನನ್ನ ತಾಯಿಯ ಹೆಸರು ತರಬೇಡಿ. ನನ್ನ ತಾಯಿ ಎಂದೂ ಪ್ರಚಾರ ಬಯಸಿಲ್ಲ ಅವರು ಆ ರೀತಿ ಹೇಳಿಕೆ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರನ್ನು ಕ್ಷಮಿಸಲು ನಾನ್ಯಾರು ಎಂದು ಹೇಳಿದ್ದಾರೆ ಅಷ್ಟೆ. ಆದರೆ ಕೆಲ ಮಾಧ್ಯಮದಲ್ಲಿ ಸಿದ್ದರಾಮಯ್ಯ ಅವರನ್ನ ಕ್ಷಮಿಸಲ್ಲ ಎಂದು ವರದಿ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಬಂದ ಇಂಥ ವರದಿಯಿಂದ ನನ್ನ ತಾಯಿ ನೊಂದುಕೊಂಡಿದ್ದಾರೆ, ನನ್ನ ಬಳಿಯೇ ನೋವನ್ನು ತೋಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜರಾಜೇಶ್ವರಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರ ಅತ್ಯಂತ ಮಹತ್ವದ್ದು
ನಾವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸ್ತಾ ಇದ್ದೇವೆ. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಕ್ಕೆ ಸಂಬಂಧ ಪಟ್ಟಂತೆ ಚರ್ಚೆ ಎರಡು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಅಭ್ಯರ್ಥಿಗಳ ಅಭಿಪ್ರಯಾ ಸಂಗ್ರಹ ಮಾಡಿದ್ದೇವೆ, ಶೀಘ್ರದಲ್ಲೇ ನಿರ್ಧಾರ ತಿಳಿಸುತ್ತೇವೆ. ಆರ್.ಆರ್.ನಗರ ಮತ್ತು ಜಯನಗರ ಚುನಾವಣೆ ಅತ್ಯಂತ ಮಹತ್ವದ್ದು ಇಲ್ಲಿ ಅಭ್ಯರ್ಥಿ ಮುಖ್ಯ ಅಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು. ಎರಡೂ ಕ್ಷೇತ್ರಗಳಲ್ಲಿ ಜನತೆ ನಮ್ಮ ಕೈ ಹಿಡಿಯಿರಿ. ನಾವು ನಿಮ್ಮ‌ ಜತೆಗೆ ಇರುತ್ತೇವೆ ಎಂದರು.

Trending News