ಐದು ವರ್ಷ ಸುಭದ್ರ ಸರ್ಕಾರ ನಮ್ಮ ಆದ್ಯತೆ: ಎಚ್.ಡಿ. ಕುಮಾರಸ್ವಾಮಿ

'ಮಂತ್ರಿ ಮಂಡಲದ ಗೊಂದಲ ಒಂದು ಕಟ್ಟು ಕಥೆ. ನಾನು ಕಾಂಗ್ರೆಸ್‌ ನಾಯಕರ ವಿಶ್ವಾಸ ಪಡೆದೇ ಕೆಲಸ ಮಾಡುತ್ತೇನೆ' - ಎಚ್ ಡಿಕೆ

Last Updated : May 22, 2018, 02:36 PM IST
ಐದು ವರ್ಷ ಸುಭದ್ರ ಸರ್ಕಾರ ನಮ್ಮ ಆದ್ಯತೆ: ಎಚ್.ಡಿ. ಕುಮಾರಸ್ವಾಮಿ title=
Pic: ANI

ಮಂಗಳೂರು: ಪ್ರಮಾಣವಚನಕ್ಕೂ ಮುನ್ನ ಧರ್ಮಸ್ಥಳ ಭೇಟಿ ನೀಡಿದ ನಿಯೋಜಿತ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ  ಜೊತೆ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜೊತೆ ಚರ್ಚೆ ನಡೆಸಿದ ಎಚ್ ಡಿಕೆ, ವೀರೇಂದ್ರ ಹೆಗ್ಗಡೆ ಅವರಿಗೆ ಹೂ ಹಾರ ಹಾಕಿ ಫಲಪುಷ್ಪ ನೀಡಿ ಗೌರವಿಸಿದರು. ನಂತರ ಸುದ್ದಿಗೋಷ್ಠಿ  ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಐದು ವರ್ಷ ಸುಭದ್ರ ಸರ್ಕಾರ ನಮ್ಮ ಆದ್ಯತೆ ಎಂದು ಹೇಳಿದರು.

ಐದು ವರ್ಷ ಸುಭದ್ರ ಸರ್ಕಾರ ನಮ್ಮ ಆದ್ಯತೆ. ಮಂತ್ರಿ ಮಂಡಲದ ಗೊಂದಲ ಒಂದು ಕಟ್ಟು ಕಥೆ. ನಾನು ಕಾಂಗ್ರೆಸ್‌ ನಾಯಕರ ವಿಶ್ವಾಸ ಪಡೆದೇ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. 

ಕರಾವಳಿಯ ಯಲ್ಲಿ ಘರ್ಷಣೆ ಗೆ ಅವಕಾಶವಿಲ್ಲ
ಕರಾವಳಿಯ ಯಲ್ಲಿ ಘರ್ಷಣೆ ಗೆ ಅವಕಾಶ ನೀಡೋದಿಲ್ಲ. ಅದಕ್ಕಾಗಿ ಕರಾವಳಿಯ ಯುವಕರ ಸಹಕಾರ ಬೇಕು. ಸಮಸ್ಯೆಗಳಿದ್ದರೆ ನನಗೆ ನೇರವಾಗಿ ಕರೆ ಮಾಡಿ ಎಂದು ಕರಾವಳಿಯ ಯುವಕರಿಗೆ ಕುಮಾರಸ್ವಾಮಿ ಮನವಿ ಮಾಡಿದರು.

ಪವಿತ್ರ-ಅಪವಿತ್ರದ ಮಾತು ಬರೋದಿಲ್ಲ
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತಿರುವುದನ್ನು ಹಲವರು ಅಪವಿತ್ರ ಮೈತ್ರಿ ಅಂದಿದ್ದಾರೆ. ಆದರೆ, ಇಲ್ಲಿ ಪವಿತ್ರ-ಅಪವಿತ್ರ ಎಂಬ ಮಾತು ಬರೋದಿಲ್ಲ. ಶಾಸಕರ ಸಂಖ್ಯಾಬಲ ಇದ್ದರೆ ಸರ್ಕಾರ ಉಳಿಯುತ್ತದೆ ಎಂದು ಧರ್ಮಸ್ಥಳ ದಲ್ಲಿ‌ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದರು.

ನನ್ನ ರೈತ ಉಳಿಯಬೇಕು
ನನ್ನ ರೈತ ಉಳಿಯಬೇಕು. ಅದಕ್ಕಾಗಿ ಸಮ್ಮಿಶ್ರ ಸರ್ಕಾರವಿದ್ದರೂ ವಿಶ್ವಾಸಮತ ಯಾಚನೆಯಾದ ಬಳಿಕ ನಾನು ಪ್ರಣಾಳಿಕೆಯಲ್ಲಿ ಹೇಳಿದಂತಹ ಎಲ್ಲಾ ರೈತ ಪರ ಯೋಜನೆಗಳನ್ನು ಪ್ರಕಟ ಮಾಡುತ್ತೇನೆ ಎಂದು ಎಚ್ ಡಿಕೆ ತಿಳಿಸಿದರು.

ಕರಾವಳಿ ಪ್ರಾಕೃತಿಕ ಸಂಪತ್ತಿಗೆ ಧಕ್ಕೆಯಾಗದಂತೆ ಎತ್ತಿನಹೊಳೆ ಯೋಜನೆ
ಎತ್ತಿನ ಹೊಳೆ ತಡೆಯುತ್ತೇನೆ ಎಂದು ನಾನು ಹೇಳಿಲ್ಲ. ಪ್ರಕೃತಿಯ ವಿನಾಶ ಮಾಡಲು ನಾನು ಬಿಡುವುದಿಲ್ಲ. ಯೋಜನೆಯಿಂದ ಪ್ರಕೃತಿಯ ವಿನಾಶವಾಗದಂತೆ ನೋಡಿಕೊಳ್ಳುತ್ತೇವೆ. ರೈತರಿಗೆ ಅನುಕೂಲವಾಗುವಂತೆ ಈ ಯೋಜನೆ ಮಾಡುತ್ತೇವೆ. ಕರಾವಳಿ ಭಾಗದ ಜನರ ವಿಶ್ವಾಸ ಪಡೆದೇ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

Trending News