ತೆನೆ ಹೊರಲಿರುವ ಮತ್ತೊಬ್ಬ ಸ್ಟಾರ್ ಕ್ಯಾಂಪೇನರ್

ಮತ್ತೊಮ್ಮೆ ಜೆಡಿಎಸ್ ನತ್ತ ಚಿತ್ತ ಹರಿಸಿದ ನಟಿ ಪೂಜಾ ಗಾಂಧಿ.

Last Updated : Apr 21, 2018, 07:57 AM IST
ತೆನೆ ಹೊರಲಿರುವ ಮತ್ತೊಬ್ಬ ಸ್ಟಾರ್ ಕ್ಯಾಂಪೇನರ್ title=

ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ಕ್ಯಾಂಪೇನರ್ ತೆನೆ ಹೊರಲು ಸಿದ್ದರಾಗಿದ್ದಾರೆ. ಖ್ಯಾತ ನಟಿ ಪೂಜಾ ಗಾಂಧಿ ಮತ್ತೊಮ್ಮೆ ಜೆಡಿಎಸ್ ನತ್ತ ತಮ್ಮ ಚಿತ್ತ ಹರಿಸಿದ್ದಾರೆ. ಇಂದು ಮಧ್ಯಾಹ್ನ 12:30ಕ್ಕೆ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಪೂಜಾ ಗಾಂಧಿ ಸೇರ್ಪಡೆಯಾಗಲಿದ್ದಾರೆ.

2012ರಲ್ಲೇ ಜೆಡಿಎಸ್ ಸೇರಿದ್ದ ಪೂಜಾ ಗಾಂಧಿ ನಂತರ ಕೆಜೆಪಿ ಸೇರಿ ಅಂತಿಮವಾಗಿ 2013ರಲ್ಲಿ ಬಿ ಎಸ್ ಆರ್ ಕಾಂಗ್ರೆಸ್ ನಿಂದ ರಾಯಚೂರಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಪೂಜಾ ಇದೀಗ ಇಂದು ಮತ್ತೆ ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ. ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುವ ಆಸೆ ಹೊಂದಿರುವ ಪೂಜಾ ಈ ಬಾರಿ ಪೂಜಾ ಕೇವಲ ಪ್ರಚಾರ ಮಾಡ್ತಾರಾ ಅಥವಾ ಸ್ಪರ್ಧೆ ಮಾಡ್ತಾರಾ ಅನ್ನೋ ವಿಷಯ ಮಾತ್ರ ಇನ್ನೂ ಅಂತಿಮವಾಗಿಲ್ಲ.

Trending News