ಬೆಂಗಳೂರು: ಕರ್ನಾಟಕದ ಹೊಸ ಸರ್ಕಾರದಲ್ಲಿ 7 ಬಾರಿ ಕಾಂಗ್ರೆಸ್ ಶಾಸಕರಾಗಿರುವ ಆರ್. ರೋಶನ್ ಬೈಗ್ ಅವರಿಗೇ ಉಪಮುಖ್ಯಮಂತ್ರಿ(ಡಿಸಿಎಂ) ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳ ಗುಂಪೊಂದು ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಮುಸ್ಲಿಂ ಸಂಘಟನೆ, 7 ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿರುವ ರೋಶನ್ ಬೈಗ್ ಅವರಿಗೆ ಡಿಸಿಎಂ ಹುದ್ದೆ ನೀಡಲಿ ಅಥವಾ ಮುಸ್ಲಿಂ ಸಮುದಾಯದ ಒಬ್ಬ ನಾಯಕನಿಗೆ ಡಿಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದ್ದಾರೆ.
A group of Muslim organisations brief media, demand that either 7-time Congress MLA Roshan Baig or some other leader from muslim community be made the Deputy CM in the new government in Karnataka. #Karnataka pic.twitter.com/cO39oNqLhZ
— ANI (@ANI) May 22, 2018