ಸ್ವಪಕ್ಷದ ವಿರುದ್ಧವೇ‌ ಯತ್ನಾಳ್ ಗಂಭೀರ ಆರೋಪ, ಸದನದಲ್ಲಿ ಬಿಜೆಪಿಗೆ ಮುಜುಗರ

Basanagouda Patil Yatnal : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಮತ್ತೊಮ್ಮೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ.

Written by - Chetana Devarmani | Last Updated : Dec 12, 2023, 05:54 PM IST
  • ಸ್ವಪಕ್ಷದ ವಿರುದ್ಧವೇ‌ ಯತ್ನಾಳ್ ಗಂಭೀರ ಆರೋಪ
  • ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
  • ವಿಧಾನಸಭೆ ಅಧಿವೇಶನದಲ್ಲಿ ಮತ್ತೊಮ್ಮೆ ಪಕ್ಷಕ್ಕೆ ಮುಜುಗರ
ಸ್ವಪಕ್ಷದ ವಿರುದ್ಧವೇ‌ ಯತ್ನಾಳ್ ಗಂಭೀರ ಆರೋಪ, ಸದನದಲ್ಲಿ ಬಿಜೆಪಿಗೆ ಮುಜುಗರ  title=
ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ : ಹಿಂದಿನ ಬಿಜೆಪಿ ಸರ್ಕಾರವು ತಮ್ಮ ಕ್ಷೇತ್ರಕ್ಕೆ ನೀಡಲಾಗಿದ್ದ 105 ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಆರೋಪಿಸಿದ್ದಾರೆ. ಈ ಮೂಲಕ ಪಕ್ಷಕ್ಕೆ ಮತ್ತೊಮ್ಮೆ ಮುಜುಗರ ಉಂಟು ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಹಣ ಮಂಜೂರು ಮಾಡಿದ್ದರು. ದುರದೃಷ್ಟವಶಾತ್, ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ತಡೆಹಿಡಿಯಲಾಯಿತು ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ: ಸಾವರ್ಕರ್‌ಗೆ ʼವೀರʼ ಎಂದು ಕರೆದದ್ದೇ ಇಂದಿರಾ ಗಾಂಧಿ : ಜೂ‌.ಖರ್ಗೆಗೆ ಮಹೇಶ್ ತಿರುಗೇಟು 

ಹೆಚ್ಚು ಮಾತನಾಡಬೇಡಿ ಎಂದು ಜನರು ನನಗೆ ಸಲಹೆ ನೀಡುತ್ತಾರೆ. ಇದರಿಂದ ನಾನು ಸಿಎಂ ಆಗುವ ಅವಕಾಶವನ್ನು ಕಳೆದು ಕೊಂಡಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ ಮತ್ತು ನೇರವಾಗಿಯೇ ಮಾತನಾಡುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಬಸನಗೌಡ ಪಾಟೀಲ್‌ ಯತ್ನಾಳ್ ಬಿಜೆಪಿ ಮುಜುಗರಕ್ಕೀಡಾಗುವ ರೀತಿ ಮಾತನಾಡಿದ್ದಾರೆ. 

ಬಸವರಾಜ ಬೊಮ್ಮಾಯಿ, ಭೈರತಿ ಬಸವರಾಜ್ ಅನುದಾನ ನೀಡಿ ಸಹಾಯ ಮಾಡಿದರು. ಆದರೆ ಅಧಿಕಾರದಲ್ಲಿದ್ದಾಗ ನೆರವಿಗೆ ಬಾರದವರು ಇಂದು ಮಾಜಿಗಳಾಗಿದ್ದಾರೆ. ನಾನು ಒಮ್ಮೆ ಟಾರ್ಗೆಟ್ ಮಾಡಿದರೆ ಅವರು ಮಾಜಿ ಆಗೋ ತನಕ ಬಿಡುವುದಿಲ್ಲ ಎಂದು ಯತ್ನಾಳ್‌ ಕಿಡಿಕಾರಿದ್ದಾರೆ. ಯತ್ನಾಳ್‌ ಅವರ ಈ ಆತು ಬಿಜೆಪಿ ಶಾಸಕರಿಗೆ ಮುಜುಗರ ತರಿಸಿದೆ. 

ಇದನ್ನೂ ಓದಿ: ಹುಲಿ ದಾಳಿ: ಕುರಿಗಾಹಿಯ ಅರ್ಧ ತಿಂದುಂಡ ಶವಪತ್ತೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News