Voter ಐಡಿಗಾಗಿ ಸುಲಭವಾಗಿ ನೀವು ಕುಳಿತಲ್ಲಿಯೇ ಅರ್ಜಿ ಸಲ್ಲಿಸಿ

Voter ID: ಮತದಾನ ಪ್ರತಿಯೊಬ್ಬ ನಾಗರೀಕರ ಹಕ್ಕು. ಮತದಾನಕ್ಕಾಗಿ ವೋಟರ್ ಐಡಿ ಹೊಂದಿರುವುದು ಬಹಳ ಮುಖ್ಯ. ಆದರೀಗ ವೋಟರ್ ಐಡಿ ಪಡೆಯಲು ನೀವು ಸುತ್ತುವ ಅಗತ್ಯವಿಲ್ಲ, ಇದಕ್ಕಾಗಿ ಭಾರತ ಸರ್ಕಾರವು ರಾಷ್ಟ್ರೀಯ ಮತದಾರರ ಪೋರ್ಟಲ್ ಅನ್ನು ಪ್ರಾರಂಭಿಸಿದೆ. 

Written by - Yashaswini V | Last Updated : Nov 15, 2023, 07:15 AM IST
  • ವೋಟರ್ ಐಡಿ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಭಾರತ ಸರ್ಕಾರವು ರಾಷ್ಟ್ರೀಯ ಮತದಾರರ ಪೋರ್ಟಲ್ ಅನ್ನು ಪ್ರಾರಂಭಿಸಿದೆ
  • ಇದರ ಸಹಾಯದಿಂದ ನೀವು ಹೊಸದಾಗಿ ವೋಟರ್ ಐಡಿಯನ್ನು ಪಡೆಯಲು ಸುಲಭವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Voter ಐಡಿಗಾಗಿ ಸುಲಭವಾಗಿ ನೀವು ಕುಳಿತಲ್ಲಿಯೇ ಅರ್ಜಿ ಸಲ್ಲಿಸಿ  title=

Voter ID: ಇತ್ತೀಚೆಗಷ್ಟೇ ರಾಜ್ಯ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. 18 ವರ್ಷ ತುಂಬಿದ ಪ್ರತಿ ನಾಗರೀಕರಿಗೆ ನಮ್ಮ ದೇಶದಲ್ಲಿ ಮತದಾನದ ಹಕ್ಕನ್ನು ನೀಡಲಾಗಿದೆ. ಭಾರತದ ಸಂವಿಧಾನದ ಅಡಿಯಲ್ಲಿ, 18 ವರ್ಷ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗುತ್ತಾರೆ. ಆದರೆ, ಇದಕ್ಕಾಗಿ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ವೋಟರ್ ಐಡಿ ಎಂದರೆ ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಮೊದಲೆಲ್ಲಾ ಪದೇ ಪದೇ ಸ್ಥಳೀಯ ಕಚೇರಿಗಳಿಗೆ ಸುತ್ತಬೇಕಿತ್ತು. ಆದರೀಗ, ಈ ಚಿಂತೆಯೇ ಇಲ್ಲ. ಆನ್‌ಲೈನ್ ಮೂಲಕ ನೀವು ಕುಳಿತಿರುವಲ್ಲಿಯೇ ಹೊಸ ಮತದಾರರ ಗುರುತಿನ ಚೀಟಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ- ಸಾರ್ವಜನಿಕ ಭವಿಷ್ಯ ನಿಧಿಯ 5 ಸಂಗತಿಗಳ ಬಗ್ಗೆ ಗೊತ್ತಿದೆಯೇ? ಹಾಗಾದ್ರೇ ನೀವು ನಂಬಿಕೆದ PPF ನಲ್ಲಿ ಹೂಡಿಕೆ ಮಾಡಬಹುದು!

ಹೌದು, ವೋಟರ್ ಐಡಿ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಭಾರತ ಸರ್ಕಾರವು ರಾಷ್ಟ್ರೀಯ ಮತದಾರರ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಇದರ ಸಹಾಯದಿಂದ ನೀವು ಹೊಸದಾಗಿ ವೋಟರ್ ಐಡಿಯನ್ನು ಪಡೆಯಲು ಸುಲಭವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಾಗರಿಕರು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಫಾರ್ಮ್ 6 ಅನ್ನು ಭರ್ತಿ ಮಾಡುವ  ಮೂಲಕ ತಮ್ಮನ್ನು ಸಾಮಾನ್ಯ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. 

ಇದನ್ನೂ ಓದಿ- UPI ಪಾವತಿ ಅಪ್ಲಿಕೇಶನ್‌ಗಳೊಂದಿಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಬಹುದೇ? ಇದರಿಂದಾಗುವ ಪರಿಣಾಮಗಳೇನು ತಿಳಿದಿದೆಯೇ? ‌

ಆನ್‌ಲೈನ್‌ನಲ್ಲಿ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಲು ಈ ಸುಲಭ ಹಂತಗಳನ್ನು ಅನುಸರಿಸಿ: 
* ಮೊದಲಿಗೆ voterportal.eci.gov.in ಮತದಾರರ ಸೇವಾ ಪೋರ್ಟಲ್‌ಗೆ ಹೋಗಿ.
* ನೀವು ಹೊಸ ಬಳಕೆದಾರರಾಗಿದ್ದರೆ ಲಾಗಿನ್ ಖಾತೆಯನ್ನು ರಚಿಸಿ. ನೀವು ಅಸ್ತಿತ್ವದಲ್ಲಿರುವ ಬಳಕೆದಾರರಾಗಿದ್ದರೆ ಕೇಳಿದ ರುಜುವಾತುಗಳನ್ನು ನಮೂದಿಸಿ ಲಾಗಿನ್ ಆಗಿ. 

>> ಹೊಸ ವೋಟರ್ ಐಡಿಗಾಗಿ: 
'ಮೊದಲ ಬಾರಿಗೆ ಮತದಾರರು' ಮತ್ತು 'ತಮ್ಮ ಕ್ಷೇತ್ರವನ್ನು ಬದಲಿಸಿದ ಮತದಾರರು' ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಲು ಫಾರ್ಮ್ 6 ಅನ್ನು  ಭರ್ತಿ ಮಾಡಿ. 

>> ಎನ್‌ಆರ್‌ಐ:
ಒಂದೊಮ್ಮೆ ನೀವು ಎನ್‌ಆರ್‌ಐ ಮತದಾರರಾಗಿದ್ದರೆ ಫಾರ್ಮ್ 6A ಅನ್ನು ಭರ್ತಿ ಮಾಡಿ. 

>> ಮಾಹಿತಿ ಬದಲಾವಣೆ: 
ನಿಮ್ಮ ಗುರುತಿನ ಚೀಟಿಯಲ್ಲಿ ಹೆಸರು, ವಯಸ್ಸು, ವಿಳಾಸ, ಫೋಟೋ, ಜನ್ಮ ದಿನಾಂಕ ಇತ್ಯಾದಿ ಡೇಟಾ ಅಥವಾ ಮಾಹಿತಿಯಲ್ಲಿನ ಬದಲಾವಣೆಗಳಿಗಾಗಿ ಫಾರ್ಮ್ 8 ಅನ್ನು ಭರ್ತಿ ಮಾಡಿ. 

>> ವಿಳಾಸ ಬದಲಾವಣೆ: 
ನೀವು ಒಂದೇ ಕ್ಷೇತ್ರದಲ್ಲಿ ನಿವಾಸಿ ವಿಳಾಸ ಬದಲಾವಣೆಗಾಗಿ ಫಾರ್ಮ್ 8ಎ ಭರ್ತಿ ಮಾಡಿ. 

* ಫಾರ್ಮ್ ಮತ್ತು ಫೋಟೋದಲ್ಲಿ ಕೇಳಲಾದ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

* ನೀವು ಅರ್ಜಿ ಭರ್ತಿ ಮಾಡಿದ ನಂತರ ಸೇವ್ ಮಾಡುವ ಮೊದಲು ನೀವು ಅರ್ಜಿಯನ್ನು ವಿವರವಾಗಿ ಪರಿಶೀಲಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News