World's First SMS Auction - ಟೆಲಿಕಾಂ ಕಂಪನಿ ವೊಡಾಫೋನ್ ವಿಶ್ವದ ಮೊಟ್ಟಮೊದಲ SMS ಅನ್ನು ಹರಾಜು ಮಾಡಲಿದೆ. ಈ ಜಗತ್ತಿನ ಮೊದಲ SMS 14 ಪದಗಳದ್ದಾಗಿದ್ದು, 1.5 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಗಲು ಸಿದ್ಧವಾಗಿದೆ. ಕಂಪನಿಯು ಈ SMS ಅನ್ನು Non-Fungible Token (NFT) ಆಗಿ ಹರಾಜು ಮಾಡುವುದಾಗಿ ಹೇಳಿದೆ. ಈ ಕುರಿತು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿರುವ ವೊಡಾಫೋನ್‌ನ, ಇದು ಮೊದಲ NFT ಆಗಿರಲಿದ್ದು, ಕಂಪನಿಯು ವಿಶ್ವದ ಮೊದಲ SMS ಪಠ್ಯವನ್ನು ಹರಾಜು ಮಾಡಲು NFT ಗೆ ಅದನ್ನು ಪರಿವರ್ತಿಸುತ್ತಿರುವುದಾಗಿ ಹೇಳಿದೆ. ಈ ಹರಾಜಿನಿಂದ 2 ಲಕ್ಷ ಡಾಲರ್ ಗೂ (ಅಂದಾಜು 1,52,48,300 ರೂ.) ಹೆಚ್ಚು ಹಣ ಸಂಗ್ರಹವಾಗುವ ನಿರೀಕ್ಷೆ ಇದ್ದು, ನಿರಾಶ್ರಿತರಿಗೆ ಸಹಾಯ ಮಾಡಲು ಕಂಪನಿ ಈ ಹಣವನ್ನು ವ್ಯಯಿಸಲಿದೆ.
1992 ರಲ್ಲಿ ವಿಶ್ವದ ಮೊದಲ SMS ಕಳುಹಿಸಲಾಗಿತ್ತು
ವಿಶ್ವದ ಮೊದಲ SMS ಅನ್ನು ಡಿಸೆಂಬರ್ 3, 1992 ರಂದು ವೊಡಾಫೋನ್ ನೆಟ್‌ವರ್ಕ್ ಮೂಲಕ ಕಳುಹಿಸಲಾಗಿತ್ತು. ಸುಮಾರು ಮೂರು ದಶಕಗಳ ಹಿಂದೆ ಕಳುಹಿಸಲಾದ ಈ ಎಸ್‌ಎಂಎಸ್‌ನಲ್ಲಿ ‘ಮೆರ್ರಿ ಕ್ರಿಸ್‌ಮಸ್’ ಎಂಬ ಸಂದೇಶವಿತ್ತು. ಇದನ್ನು ವೊಡಾಫೋನ್ ಉದ್ಯೋಗಿ ರಿಚರ್ಡ್ ಜಾರ್ವಿಸ್ ಪಡೆದಿದ್ದಾರೆ. ವಿಶ್ವದ ಮೊದಲ SMS NFT ಅನ್ನು ಪ್ಯಾರಿಸ್‌ನಲ್ಲಿ ಡಿಸೆಂಬರ್ 21 ರಂದು ಹರಾಜು ಮಾಡಲಾಗುತ್ತಿದೆ. ಹರಾಜಿನಲ್ಲಿ ಬಿಡ್ಡಿಂಗ್‌ಗಾಗಿ ನೀವು ಆನ್‌ಲೈನ್‌ನಲ್ಲಿ ಸಹ ಭಾಗವಹಿಸಬಹುದು.
NFT ಖರೀದಿಸುವವರಿಗೆ ಸರ್ಟಿಫಿಕೆಟ್ ಸಿಗಲಿದೆ
ಫಸ್ಟ್ ಎಡಿಷನ್ ನಲ್ಲಿ ವಿಶೇಷ NFT ಅನ್ನು ರಚಿಸಲಾಗಿದೆ ಮತ್ತು ಭವಿಷ್ಯದಲ್ಲಿ ಈ ಪ್ರಪಂಚದ ಮೊದಲ SMS ಎರಡನೇ NFT ಯನ್ನು ತಾನು ಎಂದಿಗೂ ಕೂಡ ರಚಿಸುವುದಿಲ್ಲ ಎಂದು Vodafone ಭರವಸೆ ನೀಡಿದೆ. NFT ಗಳನ್ನು ತೆಗೆದುಕೊಳ್ಳುವ ಖರೀದಿದಾರರಿಗೆ ವೊಡಾಫೋನ್ ಗ್ರೂಪ್ CEO ನಿಕ್ ರೀಡ್ ಸಹಿ ಮಾಡಿದ ಪ್ರಮಾಣಪತ್ರವನ್ನು ಸಹ ನೀಡಲಾಗುವುದು. ಇದು NFTಯ ಅನನ್ಯತೆ ಮತ್ತು ದೃಢೀಕರಣವನ್ನು ಖಾತರಿಪಡಿಸುತ್ತದೆ.
ಇದನ್ನೂ ಓದಿ-ಭೂಮಿಯ ಈ ಸ್ಥಳವು ಸೂರ್ಯನಿಗಿಂತ ಹೆಚ್ಚು ಬಿಸಿಯಾಗಿರುತ್ತದಂತೆ.. ಇಲ್ಲಿನ ತಾಪಮಾನ 50 ಕೋಟಿ ಡಿಗ್ರಿ ಸೆಲ್ಸಿಯಸ್.!!
TXT ಹಾಗೂ PDF ಫೈಲ್ ರೂಪದಲ್ಲಿ ಸಿಗಲಿದೆ ಮೂಲ ಕಮ್ಯೂನಿಕೇಶನ್ ಪ್ರೋಟೋಕಾಲ್
NFT ಅನ್ನು ಖರೀದಿಸುವ ಗ್ರಾಹಕರಿಗೆ ವೊಡಾಫೋನ್‌ನಿಂದ ಮೂಲ ಸಂವಹನ ಪ್ರೋಟೋಕಾಲ್‌ನ ವಿವರವಾದ ಪ್ರತಿಕೃತಿ ಸಿಗಲಿದೆ. ಇದು ವಿಶ್ವದಲ್ಲಿ ಕಳುಹಿಸಿದ ಮೊದಲ SMS ಕಳುಹಿಸುವ ಮತ್ತು ಸ್ವೀಕರಿಸುವ ಮಾಹಿತಿಯನ್ನು ಒಳಗೊಂಡಿರಲಿದೆ. ಇದರೊಂದಿಗೆ, ಗ್ರಾಹಕರಿಗೆ TXT ಮತ್ತು PDF ಫೈಲ್‌ಗಳಲ್ಲಿ (ಕೋಡೆಡ್/ಅನ್‌ಕೋಡೆಡ್ ಆವೃತ್ತಿಗಳು) ವೊಡಾಫೋನ್‌ನಿಂದ ಮೂಲ ಸಂವಹನ ಪ್ರೋಟೋಕಾಲ್ ಅನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ-ಸೌರ ವಿಜ್ಞಾನದಲ್ಲಿ ಐತಿಹಾಸಿಕ ಮೈಲಿಗಲ್ಲು.. ಸೂರ್ಯನನ್ನು ಸ್ಪರ್ಶಿಸಿದ ನಾಸಾ ಬಾಹ್ಯಾಕಾಶ ನೌಕೆ!
8 ಕೋಟಿಗೂ ಅಧಿಕ ಶರಣಾರ್ಥಿಗಳಿಗೆ ದಾನ
ವರದಿಗಳ ಪ್ರಕಾರ, ಈ ಹರಾಜಿನಲ್ಲಿ 2 ಲಕ್ಷ ಡಾಲರ್‌ಗಳಿಗಿಂತ ಹೆಚ್ಚು (ಸುಮಾರು 1,52,48,300 ರೂ.) ಮೊತ್ತ ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು UNHRCಗೆ ನೀಡುವುದಾಗಿ ವೊಡಾಫೋನ್ ಘೋಷಿಸಿದೆ, ಇದು ಯುದ್ಧ ಮತ್ತು ಇತರ ಕಾರಣಗಳಿಂದ ನಿರಾಶ್ರಿತರಾದ 82.4 ಮಿಲಿಯನ್ (ಸುಮಾರು 8.24 ಕೋಟಿ) ಜನರಿಗೆ ಸಹಾಯ ಒದಗಿಸಲಿದೆ.
15 Letters that changed the world. @Vodafone auctions the #1stSMS as NFT. It’s message “Merry Christmas”. We will donate the proceeds to @UNHCR. @Celebrity Spread the word @tyler @cameron @saylor @MatthewRoszak @TimDraper @FEhrsam @cz_binance @jack @frank_thelen @Gemini pic.twitter.com/feZr3syAWl
— Vodafone Deutschland (@vodafone_de) December 15, 2021
ಇದನ್ನೂ ಓದಿ-Booster Dose: ಬೂಸ್ಟರ್ ಡೋಸ್ ಪಡೆದ ಬಳಿಕ ಸಮುದ್ರ ತೀರದಲ್ಲಿ ಮಾಡೆಲ್ ಸಂಭ್ರಮ, ಫೋಟೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.