ಪತ್ನಿಯ ಹಾವಿನ ಉಡುಗೆ ಕಂಡು ಬೆಚ್ಚಿಬಿದ್ದ ಪತಿ ಮಾಡಿದ್ದೇನು ಗೊತ್ತಾ...!

ಘಟನೆ ಬಳಿಕ ತನ್ನ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿರುವ ಗಂಡ.

Last Updated : Jan 4, 2019, 01:41 PM IST
ಪತ್ನಿಯ ಹಾವಿನ ಉಡುಗೆ ಕಂಡು ಬೆಚ್ಚಿಬಿದ್ದ ಪತಿ ಮಾಡಿದ್ದೇನು ಗೊತ್ತಾ...! title=
Pic Courtesy: Facebook

ಮೆಲ್ಬೋರ್ನ್: ಸಾಮಾನ್ಯವಾಗಿ ಜನರು ವಿವಿಧ ರೀತಿಯ ಉಡುಪುಗಳನ್ನು ಧರಿಸಿ ಪ್ರಯೋಗ ಮಾಡುವುದನ್ನು ನಾವು ನೋಡಿದ್ದೇವೆ. ಈ ಮಧ್ಯೆ ಅನನ್ಯ ಶೈಲಿಯಲ್ಲಿ ಮತ್ತು ವಿಭಿನ್ನವಾಗಿ ಕಾಣುವ ಬಯಕೆಯಲ್ಲಿ ಗೊಂದಲಮಯ ಬಟ್ಟೆಗಳನ್ನು ಧರಿಸುವವರೂ ಉಂಟು...! ಆದರೆ ಕೆಲವೊಮ್ಮೆ ಅವುಗಳಿಂದಾಗುವ ತೊಂದರೆಗಳು ಕೆಲವೊಮ್ಮೆ ಜೀವಿತಾವಧಿವರೆಗೂ ಉಳಿಯುವುದುಂಟು. ಮೆಲ್ಬೋರ್ನ್ ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. 

ಇಲ್ಲಿ ಒಬ್ಬ ಮಹಿಳೆ ಅಂತಹದ್ದೇ ಪ್ರಯೋಗ ಮಾಡಿದ್ದಳು. ಆಕೆಯ ಅನನ್ಯ ಶೈಲಿಯ ಉಡುಪನ್ನು ಕಂಡು ಬೆಚ್ಚಿಬಿದ್ದ ಪತಿ ತನ್ನ ಜೀವ ಉಳಿಸಿಕೊಳ್ಳಲು ಆಕೆಯ ಕಾಲನ್ನೇ ಮುರಿದನು. ವಾಸ್ತವವನ್ನು ಅರಿತುಕೊಂಡ ಪತಿ ತನ್ನ ಕೃತ್ಯಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಳಗಿನ ಚಿತ್ರವನ್ನು ನೋಡಿ, ಅದನ್ನು ಕಂಡೊಡನೆ ನೀವು ನೀವು ಏನು ಯೋಚಿಸುತ್ತೀರಿ? ನೋಡಲು ಎರಡು ಹಾವಿರುವಂತೆ ಕಾಣುತ್ತಿಲ್ಲವೇ...

ಮಹಿಳೆ ರಾತ್ರಿ ವೇಳೆ ಹಾವಿನಂತೆ ಕಾಣುವ ಸ್ಟಾಕಿಂಗ್ಸ್(Stockings) ಧರಿಸಿ ತನ್ನ ಹಾಸಿಗೆ ಮೇಲೆ ಮಲಗಿದ್ದರು. ಆಕೆಯ ಪತಿ ರಾತ್ರಿ ಮನೆಗೆ ಬಂದಾಗ ಕೊಠಡಿ ಕತ್ತಲೆಯಾಗಿತ್ತು. ಅವರು ಹೊದಿಕೆಯ ಹೊರಗಿದ್ದ ಪತ್ನಿಯ ಕಾಲುಗಳು ಹಾವಿನಂತೆ ಕಂಡವು.  ಅದನ್ನು ಕಂಡು ಗಾಬರಿಗೊಂಡ ಪತಿ ತಕ್ಷಣವೇ ಬಾಗಿಲ ಬಳಿ ಇದ್ದ ಬೇಸ್ಬಾಲ್ ಬ್ಯಾಟ್ ಅನ್ನು ತೆಗೆದುಕೊಂಡು ಮಹಿಳೆಯ ಕಾಲುಗಳ ಮೇಲೆ ಹೊಡೆದರು. ಮಹಿಳೆ ಜೋರಾಗಿ ಕೂಗಿದ ಕೂಡಲೇ ಪತಿ ತಾನು ತನ್ನ ಪತ್ನಿಯ ಕಾಲುಗಳ ಮೇಲೆ ಹೊಡೆದಿರುವುದನ್ನು ಅರಿತುಕೊಂಡರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮಹಿಳೆಯ ಪಾದಗಳಿಗೆ ಗಂಭೀರ ಗಾಯವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

Trending News