Wolf Man ಹೆಸರಿನಿಂದ ಗಿನ್ನಿಸ್ ಬುಕ್ ನಲ್ಲಿ ಹೆಸರು, ಶೇ 98 ರಷ್ಟು ಮುಖ ಮತ್ತು ಶರೀರದ ಮೇಲೆ ಕೂದಲು!

World's Hairiest Family: ಯಾವುದೇ ಓರ್ವ ವ್ಯಕ್ತಿಯ ಮುಖ ಮತ್ತು ದೇಹದ ಮೇಲೆ ಅಸಂಖ್ಯಾತ ರೋಮಗಳನ್ನು ನೋಡಿದ್ದೀರಾ? ನೋಡಿದರೆ, ಸ್ವಲ್ಪ ಕ್ಷಣದವರೆಗೆ ಹೆದರಿಕೆಯಾಗುವುದು ಗ್ಯಾರಂಟಿ ಆದರೆ ಮೆಕ್ಸಿಕೋದ ಅಂತಹ ವ್ಯಕ್ತಿ ಅಷ್ಟೇ ಅಲ್ಲ, ಒಂದು ಕುಟುಂಬ ಇದಕ್ಕಾಗಿಯೇ ಅದ್ಭುತ ಖ್ಯಾತಿಯನ್ನು ಗಳಿಸಿದೆ.  

Written by - Nitin Tabib | Last Updated : May 5, 2024, 03:22 PM IST
  • CGH ಅನ್ನು ಅರ್ಥಮಾಡಿಕೊಳ್ಳಲು ಗೊಮೆಜ್ ಕುಟುಂಬವು ವಿಜ್ಞಾನಿಗಳಿಗೆ ಸಾಕಷ್ಟು ಸಹಾಯ ಮಾಡಿದೆ.
  • ಈ ಅಪರೂಪದ ಸ್ಥಿತಿಗೆ ಯಾವ ಜೀನ್ ಕಾರಣವಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
  • ಈ ಸ್ಥಿತಿಯು ಎಕ್ಸ್ ಕ್ರೋಮೋಸೋಮ್‌ಗೆ ಸಂಬಂಧಿಸಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.
Wolf Man ಹೆಸರಿನಿಂದ ಗಿನ್ನಿಸ್ ಬುಕ್ ನಲ್ಲಿ ಹೆಸರು, ಶೇ 98 ರಷ್ಟು ಮುಖ ಮತ್ತು ಶರೀರದ ಮೇಲೆ ಕೂದಲು! title=

Wolf Man: ಪ್ರತಿಯೊಬ್ಬರೂ ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆದುಹಾಕಲು ಬಯಸುತ್ತಾರೆ, ಆದರೆ ಕೆಲವರಿಗೆ ಇದು ಖ್ಯಾತಿಗೆ ಕಾರಣವಾಗಿದೆ ಎಂದರೆ ನೀವು ನಂಬುತ್ತೀರಾ?  ಹೌದು, ಮೆಕ್ಸಿಕೋದ ಕುಟುಂಬವೊಂದು ಇತ್ತೀಚೆಗೆ 'ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್' ಒಂದು ಕುಟುಂಬಕ್ಕೆ ದೇಹದ ಮೇಲೆ ಅತಿ ಹೆಚ್ಚು ರೋಮಗಳನ್ನು ಹೊಂದಿರುವ ಕುಟುಂಬದ ಸ್ಥಾನಮಾನವನ್ನು ನೀಡಿದೆ. ವಿಕ್ಟರ್ 'ಲ್ಯಾರಿ' ಗೊಮೆಜ್, ಗೇಬ್ರಿಯಲ್ 'ಡ್ಯಾನಿ' ರಾಮೋಸ್ ಗೊಮೆಜ್, ಲೂಯಿಸಾ ಲಿಲಿಯಾ ಡಿ ಲಿರಾ ಏಸೆವ್ಸ್ ಮತ್ತು ಜೀಸಸ್ ಮ್ಯಾನುಯೆಲ್ ಫಜಾರ್ಡೊ ಅಸಿವೆಸ್ ಇವರೆಲ್ಲರೂ ಒಂದೇ ಕುಟುಂಬದ ವೃಕ್ಷದ ಭಾಗವಾಗಿದ್ದು, ಅವರ ಹೆಸರುಗಳನ್ನು ಈ ದಾಖಲೆ ಪುಸ್ತಕದಲ್ಲಿ ಸೇರಿಸಲಾಗಿದೆ. ತೋಳದಂತೆ ಕಾಣುವ ಅವರ ಮುಖದಲ್ಲಿ ಲೆಕ್ಕವಿಲ್ಲದಷ್ಟು ರೋಮಗಳಿವೆ.

ಅಷ್ಟಕ್ಕೂ ಮುಖದ ಮೇಲೆ ಕೂದಲು ಏಕೆ ಬರುತ್ತಿದೆ?
ವಿಕ್ಟರ್ ಗೊಮೆಜ್ ಅವರ ಕುಟುಂಬದ ಒಟ್ಟು 4 ಸದಸ್ಯರು 'ಕಾಂಜೆನಿಟಲ್ ಜೆನರಲೈಸ್ಡ್ ಹೈಪರ್ಟ್ರಿಕೋಸಿಸ್' ಎಂಬ ಅತ್ಯಂತ ಅಪರೂಪದ ಆನುವಂಶಿಕ ಸ್ಥಿತಿಯಿಂದ ಬಳಲುತ್ತಿದ್ದಾರೆ, ಸಂಕ್ಷಿಪ್ತ ರೂಪದಲ್ಲಿ ಅಂದನ್ನು ಸಿಹಿಹೆಚ್ ಎಂದೂ ಕೂಡ ಕರೆಯುತ್ತಾರೆ.
 

ಅತ್ಯಂತ ಹೆಚ್ಚು ಕೂದಲುಳ್ಳ ಕುಟುಂಬ
ಈ ಕುಟುಂಬದಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರ ಮುಖ ಮತ್ತು ಮುಂಡದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಬೆಳೆದಿವೆ. 2009 ರ ವರದಿಯ ಪ್ರಕಾರ, ಕೇವಲ 100 ಕ್ಕಿಂತ ಕಡಿಮೆ ಇಂತಹ ಪ್ರಕರಣಗಳು ವರದಿಯಾಗಿವೆ. ಹೈಪರ್ಟ್ರಿಕೋಸಿಸ್ ಜನನದ ಸಮಯದಲ್ಲಿ ಗೋಚರಿಸಬಹುದು ಅಥವಾ ಕಾಲಾನಂತರದಲ್ಲಿ ಬೆಳವಣಿಗೆಯಾಗಬಹುದು.

ಇದನ್ನೂ ಓದಿ-Mahendra Singh Dhoni ತಂಡದ ದಿಗ್ಗಜ ಆಟಗಾರನ ಹೃದಯ ಕದ್ದ ಈ ಸುಂದರಿ ಯಾರು?

ವಿಜ್ಞಾನಿಗಳಿಗೆ ಇದು ಅಧ್ಯಯನದ ವಿಷಯ
CGH ಅನ್ನು ಅರ್ಥಮಾಡಿಕೊಳ್ಳಲು ಗೊಮೆಜ್ ಕುಟುಂಬವು ವಿಜ್ಞಾನಿಗಳಿಗೆ ಸಾಕಷ್ಟು ಸಹಾಯ ಮಾಡಿದೆ. ಈ ಅಪರೂಪದ ಸ್ಥಿತಿಗೆ ಯಾವ ಜೀನ್ ಕಾರಣವಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಈ ಸ್ಥಿತಿಯು ಎಕ್ಸ್ ಕ್ರೋಮೋಸೋಮ್‌ಗೆ ಸಂಬಂಧಿಸಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಅಂದರೆ ಪೋಷಕರಿಂದ ಈ ಸ್ಥಿತಿ ಅವರ ಮಕ್ಕಳಿಗೆ ವರ್ಗಾವಣೆಯಾಗಬಹುದು. ಗೊಮೆಜ್ ಕುಟುಂಬದಲ್ಲಿ, ಪುರುಷರ ಕೂದಲು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಅವರ ದೇಹದ ಭಾಗಗಳ 98 ಪ್ರತಿಶತವನ್ನು ಆವರಿಸುತ್ತದೆ, ಆದರೆ ಮಹಿಳೆಯರ ಕೂದಲು ಸ್ವಲ್ಪ ಮೃದುವಾಗಿರುತ್ತದೆ.

ಇದನ್ನೂ ಓದಿ-Rishabh Pant ಜೊತೆ ವಿವಾಹದ ಕುರಿತು ಈ ಖ್ಯಾತ ಬಾಲಿವುಡ್ ನಟಿ ಹೇಳಿದ್ದೇನು?

'ವುಲ್ಫ್ ಮ್ಯಾನ್' ಜೀವನ ಸುಲಭವಲ್ಲ
1941 ರಲ್ಲಿ, ಅಮೇರಿಕನ್ ಚಲನಚಿತ್ರವೊಂದು ಬಿಡುಗಡೆಯಾಗಿತ್ತು, ಅದರ ಹೆಸರು 'ದಿ ವುಲ್ಫ್ ಮ್ಯಾನ್', ಇದರಿಂದ ಸ್ಫೂರ್ತಿ ಪಡೆದ ಜನರು ವಿಕ್ಟರ್ ಗೊಮೆಜ್ ಅವರನ್ನು 'ವುಲ್ಫ್ ಮ್ಯಾನ್' ಎಂದು ಕರೆಯಲಾರಂಭಿಸಿದ್ದಾರೆ. ಇದರಿಂದ ಸಾಕಷ್ಟು ಖ್ಯಾತಿ ಗಳಿಸಿದ್ದರೂ ಅವರ ಬದುಕು ಸುಗಮವಾಗಿಲ್ಲ. ಜನರು ಅವರ ಕೂದಲನ್ನು ನೋಡಿ ಕೀಟಲೆ ಮಾಡುತ್ತಿದ್ದರು, ಆದರೆ ವಿಕ್ಟರ್ ತನ್ನ ಈ ಜೀವನದ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ತಮ್ಮ ಈ ಲುಕ್ ಅನ್ನು ಪ್ರೀತಿಸಲು ಪ್ರಾರಂಭಿಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News