'Srivalli' ಸಿಗ್ನೇಚರ್ ಸ್ಟೆಪ್ ಗೆ ಕೊರಿಯನ್ ಯುವತಿಯ Swag Dance, ಫಿದಾ ಆಗಲಿದ್ದಾನೆಯೇ 'Pushpa'?

Korean Woman Dance: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ವಿಡಿಯೋಗಳು (Viral Video) ವೈರಲ್ ಆಗುತ್ತಲೇ  ಇರುತ್ತವೆ. ಈ ವಿಡಿಯೋಗಳಲ್ಲಿ 'ಪುಷ್ಪಾ' ಚಿತ್ರದ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ ಗೆ ಕೊರಿಯನ್ ಯುವತಿಯೋರ್ವಳ (Korean Woman) ವಿಡಿಯೋ ಕೂಡ ಒಂದಾಗಿದೆ. ಆಕೆಯ ಈ ವಿಡಿಯೋ ವೈರಲ್ ಆಗುತ್ತಿರುವ ಪರಿ ನೋಡಿದರೆ ನೀವೂ ಕೂಡ ಒಂದು ಕ್ಷಣ ಆಕೆಯ ಡಾನ್ಸ್ ಗೆ ಫಿದಾ ಆಗುವಿರಿ.

Written by - Nitin Tabib | Last Updated : Feb 14, 2022, 02:25 PM IST
  • ಶ್ರೀವಲ್ಲಿ ಹಾಡಿಗೆ ಸ್ಟೆಪ್ ಹಾಕಿ ಹವಾ ಸೃಷ್ಟಿಸಿದ ಕೊರಿಯನ್ ಯುವತಿ
  • ಹಾಡಿನಲ್ಲಿ ಆಕೆ ಅಲ್ಲು ಅರ್ಜುನ್ ಅವರ ಲುಕ್ ಅನ್ನು ಕೂಡ ಕಾಪಿ ಮಾಡಿದ್ದಾಳೆ.
  • ಈ ವೈರಲ್ ವಿಡಿಯೋ ನೋಡಿದವರೆಲ್ಲರೂ ಕೂಡ ದಂಗಾಗಿದ್ದಾರೆ.
'Srivalli' ಸಿಗ್ನೇಚರ್ ಸ್ಟೆಪ್ ಗೆ ಕೊರಿಯನ್ ಯುವತಿಯ Swag Dance, ಫಿದಾ ಆಗಲಿದ್ದಾನೆಯೇ 'Pushpa'? title=
Korean Woman On Srivalli (File Photo)

Viral Video: Korean Woman On Srivalli - ದಕ್ಷಿಣ ಚಿತ್ರರಂಗದ ಖ್ಯಾತ ನಟ Allu Arjun ಅಭಿನಯದ Pushpa ಚಿತ್ರ ಬಿಡುಗಡೆಯಾಗಿ ಎರಡು ತಿಂಗಳುಗಳು ಕಳೆದರೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರ ಸೃಸ್ಥಿಸಿರುವ ಟ್ರೆಂಡ್ ಮಾತ್ರ ಕಮ್ಮಿಯಾಗುತ್ತಲೇ ಇಲ್ಲ. ಈ ಈ ಚಿತ್ರದ ಬಹುತೇಕ ಹಾಡುಗಳು ಇಂಟರ್ನೆಟ್ ಮೇಲೆ ಭಾರಿ ಹವಾ ಸೃಷ್ಟಿಸಿವೆ. ಅಷ್ಟೇ ಅಲ್ಲ ಚಿತ್ರ ನೋಡಿದ ಬಹುತೇಕರಲ್ಲಿ ಅಲ್ಲು ಅರ್ಜುನ್ ರೀತಿ ನಟಿಸುವ ಹುಚ್ಚು ಕಾಣ ಸಿಗುತ್ತಿದೆ. ಕೆಲವರು ನಟನಂತೆಯೇ ತನ್ನ ಲುಕ್ ಬದಲಾಯಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿರುವ ಹಲವು ರೀಲ್ ಗಳಲ್ಲಿ ನೀವು ವಿಡಿಯೋಗಳನ್ನು ನೋಡಬಹುದು. ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಧೂಳೆಬ್ಬಿಸಿದ ಹಾಡು ಎಂದರೆ ಅದು ಶ್ರೀವಲ್ಲಿ ಹಾಡು. ಈ ಹಾಡಿನ ಸಿಗ್ನೇಚರ್ ಸ್ಟೆಪ್ ಅನ್ನು ಕಾಪಿ ಮಾಡಲು ದೇಶದ ಯುವಕರಲ್ಲಿ ಭಾರಿ ಪೈಪೋಟಿಯೇ ಕಂಡುಬರುತ್ತಿದೆ.

ಇದನ್ನೂ ಓದಿ-ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ, ಫ್ಯಾನ್ಸ್ ಫುಲ್ ಫಿದಾ

ಶ್ರೀವಲ್ಲಿ ಹಾಡಿಗೆ ಟ್ರೆಂಡ್ ಸೃಷ್ಟಿಸಿದ ಕೊರಿಯಾ ಯುವತಿ
ಎಲ್ಲಕ್ಕಿಂತ ಬೆಚ್ಚಿಬೀಳಿಸುವ ವಿಷಯ ಎಂದರೆ 'ಪುಷ್ಪಾ' ಚಿತ್ರದ ಶ್ರೀವಲ್ಲಿ ಹಾಡಿನ ಟ್ರೆಂಡ್ ನಲ್ಲಿ ವಿದೇಶಿಗರೂ ಕೂಡ ಶಾಮೀಲಾಗಿದ್ದಾರೆ. ಕೆಲ ದಿನಗಳ ಹಿಂದೆ ತಾಂಜಾನಿಯಾದ ಕಿಲಿ ಪಾಲ್, ಈ ಹಾಡಿಗೆ ಡಾನ್ಸ್ ಮಾಡಿ ಎಲ್ಲರನ್ನು ನಿಬ್ಬೇರಗಾಗಿಸಿದ್ದರು. ಆದರೆ, ಇದೀಗ ಈ ಹಾಡಿಗೆ ಕೊರಿಯಾ ಯುವತಿಯೊಬ್ಬಳು ರೀಲ್ ತಯಾರಿಸಿದ್ದಾಳೆ. ಹಾಡಿನಲ್ಲಿ ಯುವತಿ ಯಾವ ರೀತಿ ನಟಿಸಿದ್ದಾಳೆ ಎಂದರೆ, ಲಕ್ಷಾಂತರ ಜನರು ಆಕೆಯ ಮೇಲೆ ಫಿದಾ ಆಗಿದ್ದಾರೆ. ಏಕೆಂದರೆ, ಈ ಹಾಡಿನಲ್ಲಿ ಕೊರಿಯನ್ ಯುವತಿ ಬಹುತೇಕ ಅಲ್ಲು ಅರ್ಜುನ್ ರೀತಿಯಲ್ಲೇ ಡ್ರೆಸ್ ಧರಿಸಿದ್ದಾಳೆ ಹಾಗೂ ಟಿವಿ ಪರದೆಯ ಮೇಲೆ ಶ್ರಿವಲ್ಲಿ ಹಾಡು ಪ್ಲೇ ಮಾಡಿ ಡಿಟ್ಟೋ ಅಲ್ಲು ಅರ್ಜುನ್ ಅವರನ್ನೇ ಕಾಪಿ ಮಾಡಲು ಯತ್ನಿಸಿದ್ದಾಳೆ.

ಇದನ್ನೂ ಓದಿ-Viral Video: ‘ಪುಷ್ಪ’ ಸಿನಿಮಾದ ಶ್ರೀವಲ್ಲಿ ಗುಂಗಿಗೆ ಹೆಂಗೆಂಗೋ ಆಡುತ್ತಿರುವ ಯುವಕ..!

ಅಲ್ಲು ಅರ್ಜುನ್ ಲುಕ್ ಅನ್ನು ಕೂಡ ಕಾಪಿ ಮಾಡಿದ ಯುವತಿ
ಈ ವಿಡಿಯೋದಲ್ಲಿ ಕೊರಿಯನ್ ಯುವತಿ ಬಲದಿಂದ ಎಡಕ್ಕೆ ಹಾಗೂ ಎಡದಿಂದ ಬಲಕ್ಕೆ ತನ್ನ ಕಾಲುಗಳನ್ನು ಎಳೆಯುತ್ತ ಸಾಗುವುದನ್ನು ನೀವು ನೋಡಬಹುದು. ವಿಡಿಯೋದಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಯುವತಿ ಶರ್ಟ್, ಪ್ಯಾಂಟ್, ಚಪ್ಪಲ್, ಕಪ್ಪು ಬಣ್ಣದ ಕನ್ನಡಕವನ್ನು ಡಿಟ್ಟೋ ಅಲ್ಲು ಅರ್ಜುನ್ ರೀತಿಯೇ ಧರಿಸಿದ್ದಾಳೆ. ಇದುವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವಿಕ್ಷೀಸಿದ್ದಾರೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ಈ ವಿಡಿಯೋ ಅನ್ನು korean.g1 ಹೆಸರಿನ ಇನ್ಸ್ಟಾಗ್ರಾಮ್  (Instagram Reels Video) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿರುವ ಬಹುತೇಕರು ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ-Pushpa Fever Videos: ಬ್ರಾವೋ-ಜಡ್ಡುರಿಂದ ಸೂರ್ಯ-ವಾರ್ನರ್-ರೈನಾವರೆಗೆ ವೈರಲ್ ಆದ 'ಶ್ರೀವಲ್ಲಿ' ಹಾಡಿನ ಫೀವರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News