ನವದೆಹಲಿ: ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟರ್ರೆಸ್ ಅವರು ಭದ್ರತಾ ಮಂಡಳಿಯಲ್ಲಿ ಅಧಿಕಾರದ ಸಮತೋಲನವನ್ನು ಸ್ಥಾಪಿಸುವುದರ ಮೂಲಕ ವಿಶ್ವಸಂಸ್ಥೆಯನ್ನು ಹೆಚ್ಚು ಪ್ರಜಾಪ್ರಭುತ್ವವಾದಿಯನ್ನಾಗಿ ಮಾಡಲು ಕರೆ ನೀಡಿದ್ದಾರೆ.
ಶನಿವಾರದಂದು ಈಜಿಪ್ಟ್ ಜಿ 77 ಮತ್ತು ಚೀನಾ ಇಕ್ವೆಡಾರ್ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಅವರು ಜಾಗತಿಕ ಅಧಿಕಾರವನ್ನು ಪ್ರಾದೇಶಿಕ ಪ್ರಾತಿನಿಧ್ಯದ ಮೂಲಕ ಹೆಚ್ಚು ಜನತಾಂತ್ರಿಕವಾಗಿ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಆದ್ದರಿಂದ ಅದರ ಮೂಲ ಸುಧಾರಣೆಯನ್ನು ಭದ್ರತಾ ಮಂಡಳಿಯನ್ನು ಸುಧಾರಿಸುವುದರ ಅದನ್ನು ಕಾರ್ಯರೂಪಕ್ಕೆ ತರಬಹುದೆಂದರು.
ಜಿ-77 ರಾಷ್ಟ್ರಗಳು ವಿಶ್ವ ಸಂಸ್ಥೆಯನ್ನು ಸಮತೋಲಿತ ಮತ್ತು ಪ್ರಜಾಪ್ರಭುತ್ವವಾದಿಯಾಗಿ ಪರಿವರ್ತಿಸಲು ಪರಿಣಾಮಕಾರಿಯಾದ ಕೊಡುಗೆ ನೀಡುತ್ತದೆ ಎನ್ನುವುದನ್ನು ನಾವು ತಿಳಿಯಬೇಕಾಗಿದೆ. ಜಿ-77 ರಾಷ್ಟ್ರಗಳು ಬಹುಪಕ್ಷೀಯ ಜಗತ್ತಿನಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಕೂಡ ಹೆಚ್ಚು ನ್ಯಾಯಯುತ ಪಾತ್ರವನ್ನು ವಹಿಸುತ್ತವೆ ಎಂದರು.