ಭಾರತ-ಅಮೆರಿಕಾದ ಸಂಬಂಧ ದ್ವಿಗುಣಗೊಂಡಿದೆ ಎಂದ ಶ್ವೇತ ಭವನ

                     

Last Updated : Nov 14, 2017, 03:11 PM IST
ಭಾರತ-ಅಮೆರಿಕಾದ ಸಂಬಂಧ ದ್ವಿಗುಣಗೊಂಡಿದೆ ಎಂದ ಶ್ವೇತ ಭವನ title=

ವಾಷಿಂಗ್ಟನ್: ಭಾರತ-ಅಮೆರಿಕಾದ ದ್ವಿಪಕ್ಷಿಯ ಸಂಬಂಧ  ವಾಣಿಜ್ಯ ಮತ್ತು ಭಯೋತ್ಪಾದನೆಯಂತಹ ವಿಷಯಗಳಲ್ಲಿ ದ್ವಿಗುಣಗೊಂಡಿದೆ ಎಂದು ಅಮೇರಿಕಾದ  ಶ್ವೇತಭವನ ಅಭಿಪ್ರಾಯ ಪಟ್ಟಿದೆ.

ಈ ಕುರಿತು  ಮಾತನಾಡಿರುವ ಶ್ವೇತಭವನದ ಮುಖ್ಯ ಪತ್ರಿಕಾ ಕಾರ್ಯದರ್ಶಿ ರಾಜ ಶಾಹ್ ರಾಜ್ "ಪ್ರಧಾನಿ ಮೋದಿ ಮತ್ತು ಟ್ರಂಪ್ ಒಬ್ಬರಿಗೊಬ್ಬರು ಆತ್ಮೀಯ ಸಂಬಂಧವನ್ನು ಹೊಂದಿದ್ದು, ಅವರು ಇತರ ನಾಯಕರ ವಿಚಾರಗಳ ಕುರಿತಾಗಿಯೂ ಮಾತನಾಡುತ್ತಾರೆ ಎಂದು ತಿಳಿಸಿದರು. ಇನ್ನು ಮುಂದುವರೆದು "ಟ್ರಂಪ್ ನಿಜವಾಗಿಯೂ ಭಾರತದ ಪ್ರಧಾನ ಮಂತ್ರಿಗಳ ಕಾರ್ಯವೈಖರಿ ಇಷ್ಟ ಪಟ್ಟಿದ್ದಾರೆ. ಅದರ ಕುರಿತು ಇನ್ನು ಹೆಚ್ಚೇನೂ ನಾ ಹೇಳಲಾರೆ ಎಂದರು. 

ಅಲ್ಲದೆ ಕೆಲವು ಸನ್ನಿವೇಶಗಳು ಮತ್ತು ಸಂಗತಿಗಳು ಪರಸ್ಪರ ಇಬ್ಬರು ಮೆಚ್ಚುಗೆಯನ್ನು ಸೂಚಿಸಲು ಸಹಕಾರಿಯಾಗಿವೆ ಮತ್ತು ಮೂಲಭೂತವಾಗಿ ಇವು ಎರಡು ದೇಶಗಳ ಬಾಂಧವ್ಯ ವೃದ್ದಿಗೆ ಇನ್ನಷ್ಟು ಸಹಕಾರಿಯಾಗಲಿದೆ" ಎಂದು ಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಶಾ ರವರು ಶ್ವೇತಭವನದಲ್ಲಿ ಮಾಧ್ಯಮ ವಿಭಾಗದಲ್ಲಿ ಉನ್ನತ ಸ್ಥಾನವನ್ನು ಹೊಂದಿರುವ ಭಾರತೀಯ ಮೂಲದ ಅಮೇರಿಕಾದ ಪ್ರಜೆ. ಇವರು ಎರಡು ದೇಶಗಳ ಬಾಂಧವ್ಯ ಕುರಿತಾಗಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. 

ಸೋಮವಾರದಂದು ಫಿಲಿಪೈನ್ಸ್ ನ ಮನಿಲಾದಲ್ಲಿ ನಡೆಯುತ್ತಿರುವ ಆಸಿಯಾನ್ ಸಮ್ಮೇಳನದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ "ಅಮೇರಿಕಾ ಮತ್ತು ಭಾರತದ ನಡುವಿನ ಸಂಬಂಧ ವೃದ್ದಿಸಿದೆ ಮತ್ತು ಜಗತ್ತಿನ ಅತಿ ದೊಡ್ಡ ಪ್ರಜಾಭುತ್ವ ರಾಷ್ಟ್ರಗಳಾಗಿರುವ ಎರಡು ದೇಶಗಳ ಮಾತುಕತೆಯಲ್ಲಿ ಪ್ರಾದೇಶಿಕ ರಕ್ಷಣೆ, ವಾಣಿಜ್ಯ, ಆರ್ಥಿಕ ಮತ್ತು ಭಯೋತ್ಪಾದನೆ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.

ಈ ಹಿಂದೆ ಜೂನ್ ನಲ್ಲಿ ಮೋದಿ ಮತ್ತು ಟ್ರಂಪ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಮೂಲಕ ಟ್ರಂಪ್ ಮತ್ತು ಮೋದಿ ಉಭಯ ದೇಶಗಳ ದ್ವೀಪಕ್ಷಿಯ ಸಂಬಂಧಕ್ಕೆ ಹೊಸ ಅಧ್ಯಾಯ ಬರೆದಿದ್ದರು.

Trending News