Afghanistan Crisis: ಅಫ್ಘಾನಿಸ್ತಾನದಿಂದ ಸಂಪೂರ್ಣ ಹೊರಬಿದ್ದ ಅಮೆರಿಕ ಸೇನೆ; ತಾಲಿಬಾನ್ ಸಂಭ್ರಮಾಚರಣೆ

ಅಮೆರಿಕ ಸೇನೆ ಅಫ್ಘಾನ್ ದೇಶವನ್ನು ತೊರೆದ ಗಂಟೆಗಳ ಬಳಿಕ ತಾಲಿಬಾನ್ ನಾಯಕರ ಮೊಗದಲ್ಲಿ ಮಂದಹಾಸ ಮೂಡಿತ್ತು.

Written by - Puttaraj K Alur | Last Updated : Aug 31, 2021, 01:20 PM IST
  • ಬರೋಬ್ಬರಿ 2 ದಶಕಗಳ ಬಳಿಕ ಅಪ್ಘಾನಿಸ್ತಾನದಿಂದ ಸಂಪೂರ್ಣ ಹೊರಬಿದ್ದ ಅಮೆರಿಕದ ಸೇನಾಪಡೆ
  • ಅಮೆರಿಕ ಸೇನೆಗೆ ದೇಶ ತೊರೆಯುವಂತೆ ಆಗಸ್ಟ್ 31ರ ಗಡುವು ನೀಡಿದ್ದ ತಾಲಿಬಾನ್ ನಾಯಕರು
  • ‘ಅಫ್ಘಾನಿಸ್ತಾನಕ್ಕೆ ಅಭಿನಂದನೆಗಳು… ಈ ಗೆಲುವು ನಮ್ಮೆಲ್ಲರದ್ದು’ ಎಂದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್
Afghanistan Crisis: ಅಫ್ಘಾನಿಸ್ತಾನದಿಂದ ಸಂಪೂರ್ಣ ಹೊರಬಿದ್ದ ಅಮೆರಿಕ ಸೇನೆ; ತಾಲಿಬಾನ್ ಸಂಭ್ರಮಾಚರಣೆ  title=
ಅಫ್ಘಾನಿಸ್ತಾನದಿಂದ ಸಂಪೂರ್ಣ ಹೊರಬಿದ್ದ ಅಮೆರಿಕ ಸೇನೆ (Photo Courtesy: Twitter/@DeptofDefense)

ಕಾಬೂಲ್: ಬರೋಬ್ಬರಿ 2 ದಶಗಳ ಬಳಿಕ ಅಮೆರಿಕ ಸೇನೆ(US troops)ಯು ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹೊರಬಿದ್ದಿದೆ. 20 ವರ್ಷಗಳ ಮಿಲಿಟರಿ ಮಧ್ಯಸ್ಥಿಕೆಯ ನಂತರ ಕೊನೆಯ ಅಮೆರಿಕ ಪಡೆಗಳು ಆಗಸ್ಟ್ 31ರಂದು ಅಫ್ಘಾನ್ ದೇಶವನ್ನು ತೊರೆದಿವೆ. ಈ ಹಿನ್ನೆಲೆ ತಾಲಿಬಾನ್ ಭಯೋತ್ಪಾದಕರು, ಉಗ್ರ ಸಂಘಟನೆಯ ನಾಯಕರು ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ.

ಅಮೆರಿಕ ಸೇನೆ ಅಫ್ಘಾನ್ ದೇಶವನ್ನು ತೊರೆದ ಗಂಟೆಗಳ ಬಳಿಕ ತಾಲಿಬಾನ್ ನಾಯಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಮಂಗಳವಾರದಂದು ಅಫ್ಘಾನಿಸ್ತಾನದ ವಿಜಯಕ್ಕಾಗಿ ತಾಲಿಬಾನ್ ನ ಉನ್ನತ ವಕ್ತಾರರು ಅಭಿನಂದನೆ ಸಲ್ಲಿಸಿದರು. ‘ಅಫ್ಘಾನಿಸ್ತಾನಕ್ಕೆ ಅಭಿನಂದನೆಗಳು… ಈ ಗೆಲುವು ನಮ್ಮೆಲ್ಲರದ್ದು’ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್(Zabihullah Mujahid) ಕಾಬೂಲ್ ವಿಮಾನ ನಿಲ್ದಾಣದ ರನ್ ವೇನಲ್ಲಿ ನಿಂತು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ

ಆಗಸ್ಟ್ 31ರಂದು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಅಮೆರಿಕ ಸೇನೆ ವಾಪಸ್ ಆಗಲಿದೆ ಎಂದು ಅಧ್ಯಕ್ಷ ಜೋ ಬಿಡೆನ್(Joe Biden) ಹೇಳಿಕೆ ನೀಡಿದ್ದರು. ಅಮೆರಿಕ ಸೇನಾಪಡೆಯನ್ನು ಹಂತ ಹಂತವಾಗಿ ಅಮೆರಿಕ ವಾಪಸ್ ಕರೆಸಿಕೊಂಡ ಬಳಿಕ ತಾಲಿಬಾನ್ ಉಗ್ರರು ಕೂಡ ಹಂತ ಹಂತವಾಗಿ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ್ದರು. ಇತ್ತೀಚೆಗಷ್ಟೇ ರಾಜಧಾನಿ ಕಾಬೂಲ್(Fall Of Kabul) ಅನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಜಯೋತ್ಸವ ಆಚರಿಸಿದ್ದರು. ಆ.31ರೊಳಗೆ ಅಮೆರಿಕ ಸೇನೆಯನ್ನು ಸಂಪೂರ್ಣವಾಗಿ ವಾಪಸ್‌ ಪಡೆಯದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ತಾಲಿಬಾನ್(Taliban) ನಾಯಕರು ದೊಡ್ಡಣ್ಣನಿಗೆ ಎಚ್ಚರಿಕೆ ನೀಡಿದ್ದರು.

ಹೇಳಿದಂತೆ ನಡೆದುಕೊಂಡಿರುವ ಜೋ ಬಿಡೆನ್ ಸಂಪೂರ್ಣವಾಗಿ ತಮ್ಮ ಸೇನೆಯನ್ನು ವಾಪಸ್ ದೇಶಕ್ಕೆ ಕರೆಸಿಕೊಂಡಿದ್ದಾರೆ. ಮಂಗಳವಾರ ಅಫ್ಘಾನ್​​ನಿಂದ ಹೊರಬಿದ್ದ ಅಮೆರಿಕದ ಕೊನೆಯ ಯೋಧನ ಫೋಟೋವನ್ನು ಅಮೆರಿಕದ ರಕ್ಷಣಾ ಇಲಾಖೆ(US Department of Defense)ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್

‘ನಾವು ಅಮೆರಿಕ ಮತ್ತು ಪ್ರಪಂಚದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತೇವೆ. ಅವರೆಲ್ಲರೊಂದಿಗಿನ ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್(Zabihullah Mujahid) ಹೇಳಿದ್ದಾರೆ. ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಶರಿಯಾ ಕಾನೂನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿರುವ ತಾಲಿಬಾನ್ ನಾಯಕರು ಯಾರ ರೀತಿ ಆಡಳಿತ ನಡೆಸುತ್ತಾರೆಂದು ಇಡೀ ವಿಶ್ವವೇ ಎದುರು ನೋಡುತ್ತಿದೆ. ಅಫ್ಘಾನಿಸ್ತಾನದಲ್ಲಿನ ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳ ರಕ್ಷಿಸಲು ವಿಶ್ವದ ನಾಯಕರು ಕೈಜೋಡಿಸಬೇಕೆಂಬ ಕೂಗಿ ಕೇಳಿಬರುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News