ವಾಶಿಂಗ್ಟನ್: Student-Teacher Affair - ಅಮೆರಿಕದ (America) ಫ್ಲೋರಿಡಾದಲ್ಲಿ (Florida) ಪೊಲೀಸರು ಗರ್ಭಿಣಿ ಶಿಕ್ಷಕಿಯೋರ್ವಳನ್ನು (Pregnant Teacher) ಬಂಧಿಸಿದ್ದಾರೆ. ಬಂಧನದ ಕಾರಣ ಹೊರಬಂದ ನಂತರ, ಜನರು ಶಿಕ್ಷಕಿಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಹಿಳಾ ಶಿಕ್ಷಕಿ ತನ್ನ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಸಂಬಂಧದ ನಂತರ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವರದಿಯಾಗಿದೆ.
ತನಿಖೆ ಕೈಗೊಂಡ ಪೊಲೀಸರು
'ಡೈಲಿ ಸ್ಟಾರ್' ವರದಿ ಪ್ರಕಾರ, ಆರೋಪಿ 41 ವರ್ಷದ ಶಿಕ್ಷಕಿಯ ಹೆಸರು ಹೇರಿ ಕ್ಲಾವಿ (Heiry Clavi). ಹೇರಿ 15 ವರ್ಷದ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ಈಗ ಅವಳು ತನ್ನ ವಿದ್ಯಾರ್ಥಿಯ ಮಗುವಿನ ತಾಯಿಯಾಗಲಿದ್ದಾಳೆ ಎಂದು ಆರೋಪಿಸಲಾಗಿದೆ. ಸದ್ಯ ಆಕೆ 8 ತಿಂಗಳ ಗರ್ಭಿಣಿ. ಪೊಲೀಸರು ಶಿಕ್ಷಕಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ-Covid-19&Flu: Corona ಆತಂಕದ ನಡುವೆಯೇ ಎದುರಾದ ಹೊಸ ಅಪಾಯ, Twindemic ನಿಂದ ಪಾರಾಗುವುದು ಕಷ್ಟ!
ಹಲವು ಆರೋಪಗಳ ಅಡಿ ಪ್ರಕರಣ ದಾಖಲಾಗಿದೆ
ಶಿಕ್ಷಕಿ ಅಪ್ರಾಪ್ತ ವಿದ್ಯಾರ್ಥಿಯ ಜೊತೆಗೆ ಸಂಬಂಧ ಹೊಂದಿದ್ದಾರೆ ಹಾಗೂ ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿ ಶಾಲೆಗೇ ಬರುವಾಗ ಪಿಸ್ತೂಲ್ ಕೂಡ ತಂದಿರುವ ಆರೋಪ ಹೊರಿಸಲಾಗಿದೆ. ಇದೆ ವೇಳೆ ಸಂತ್ರಸ್ತ ವಿದ್ಯಾರ್ಥಿ ಶಿಕ್ಷಕಿಯ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ. ಶಿಕ್ಷಕಿ ತನಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಅವನು ಹೇಳಿದ್ದಾನೆ.ನಡೆದಿದ್ದೆಲ್ಲವೂ ತನ್ನ ಒಪ್ಪಿಗೆಯ ಮೇರೆಗೆ ನಡೆದಿದೆ ಎಂದು ಆತ ಹೇಳಿದ್ದಾನೆ. ಆದರೆ, ಅಪ್ರಾಪ್ತ ವಯಸ್ಕರ ಒಪ್ಪಿಗೆ ಕಾನೂನಿನಲ್ಲಿ ಮುಖ್ಯವಲ್ಲ. ಆದ್ದರಿಂದ ಶಿಕ್ಷಕಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ-Nobel Prize 2021: ಅಮೆರಿಕ ಮೂಲದ 3 ಆರ್ಥಿಕ ತಜ್ಞರಿಗೆ ಅರ್ಥಶಾಸ್ತ್ರಜ್ಞದ ನೊಬೆಲ್ ಪುರಸ್ಕಾರ
ಶಾಲೆಯಿಂದ ಹೊರಹಾಕುವ ಸಿದ್ಧತೆ
ಸಂತ್ರಸ್ತ ವಿದ್ಯಾರ್ಥಿಯ ಫೋನಿನಲ್ಲಿ ಶಿಕ್ಷಕಿ ಮತ್ತು ವಿದ್ಯಾರ್ಥಿಯ ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳನ್ನು ನೋಡಿದ್ದೇವೆ ಎಂದು ವಿದ್ಯಾರ್ಥಿಯ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೇರಿ 8 ತಿಂಗಳ ಗರ್ಭಿಣಿ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. ಆದರೆ ತಮ್ಮ ಹೊಟ್ಟೆಯಲ್ಲಿ ಬೆಳೆಯುವ ಮಗು ಯಾರ ಮಗು ಎಂಬ ಬಗ್ಗೆ ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಏತನ್ಮಧ್ಯೆ, ಮಿಯಾಮಿ ಡೇಡ್ ಕೌಂಟಿ ಪಬ್ಲಿಕ್ ಸ್ಕೂಲ್‌ಗಳ ಅಧಿಕಾರಿಗಳು ಹೇರಿ ಕಳೆದ ಮಾರ್ಚ್‌ನಿಂದ ಶಾಲೆಗೆ ಬರುತ್ತಿಲ್ಲ ಮತ್ತು ಆಕೆಯನ್ನು ಶಾಲೆಯ ಬೇರೆ ಕೇಂದ್ರದಲ್ಲಿ ಕೆಲಸಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಬಂಧನದ ನಂತರ, ಶಿಕ್ಷಕಿಯನ್ನು ಶಾಲೆಯಿಂದ ಹೊರಹಾಕುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಮತ್ತು ಇದರಿಂದ ಆಕೆ ಜಿಲ್ಲೆಯ ಬೇರೆ ಯಾವುದೇ ಶಾಲೆಯಲ್ಲಿ ಪಾಠ ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-G20 Extraordinary Leaders' Summit: G20 ನಾಯಕತ್ವದ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.