ಒಂದು ಕಡೆ ಉಕ್ರೇನ್ ನೆಲದಲ್ಲಿ ರಷ್ಯಾ ಭೀಕರ ದಾಳಿ ನಡೆಸುತ್ತಿದೆ. ದಾಳಿಗೆ ಉಕ್ರೇನ್ ಕೂಡ ಪ್ರತ್ಯುತ್ತರ ನೀಡುತ್ತಿದ್ದರೂ, ಪ್ರಬಲ ರಷ್ಯಾ ದಾಳಿಗೆ ಉಕ್ರೇನ್ ಧೂಳಿಪಟವಾಗಿದೆ. ಇಷ್ಟೆಲ್ಲಾ ನಡೆದರೂ ಉಕ್ರೇನ್ ಇನ್ನೂ ಸಂಪೂರ್ಣವಾಗಿ ಶರಣಾಗಿಲ್ಲ. ಹಾಗಾದರೆ ಉಕ್ರೇನ್‌ಗೆ ಶಕ್ತಿ ತುಂಬುತ್ತಿರುವ ಆ ಕಾಣದ ಕೈಗಳು ಯಾವುವು..? ಎಂಬ ಪ್ರಶ್ನೆ ಸಹಜವಾಗಿ ಕುತೂಹಲ ಕೆರಳಿಸುತ್ತಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಸದ್ಯಕ್ಕೆ ಉಕ್ರೇನ್ ಸೇನೆ ರಷ್ಯಾ ಎದುರು ಮಂಡಿಯೂರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬದಲಾಗಿ ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಭೀಕರವಾಗಿ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಪಾಶ್ಚಿಮಾತ್ಯರು ರಷ್ಯಾ ಮಣಿಸಲು ಹೂಡಿದ ರಣತಂತ್ರ. ಹಾಗಾದ್ರೆ ಉಕ್ರೇನ್ ನೆರವಿಗೆ ಯಾರ‍್ಯಾರು ನಿಂತಿದ್ದಾರೆ? ಮತ್ತು ಏಕೆ? ಎಂಬುದನ್ನು ಡೀಟೇಲ್ ಆಗಿ ನೋಡೋಣ.
ಇದನ್ನೂ ಓದಿ-PSI Recruitment Scam : ಪಿಎಸ್‌ಐ ಪರೀಕ್ಷೆ ಅಕ್ರಮ : ಸಿಐಡಿ ಬಲೆಗೆ ಬಿದ್ದ ಮಹಿಳಾ ಅಭ್ಯರ್ಥಿ!
1) ಅಮೆರಿಕದ ಸಹಾಯ
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ಗೆ ಭಾರಿ ಪ್ರಮಾಣದ ಸೇನಾ ನೆರವು ಘೋಷಿಸಿದ್ದಾರೆ. ಈ ಮೂಲಕ ಅಮೆರಿಕದ ಶತ್ರು ರಷ್ಯಾ ಮೇಲೆ ಪರೋಕ್ಷ ಆಕ್ರಮಣಕ್ಕೆ ವಿಶ್ವದ ದೊಡ್ಡಣ್ಣ ಮುಂದಾಗಿದ್ದಾನೆ. ಸುಮಾರು 300 ಕೋಟಿ ಅಮೆರಿಕನ್ ಡಾಲರ್ ಮೊತ್ತದ ಸೇನಾ ನೆರವನ್ನ ಅಮೆರಿಕ ಅಧ್ಯಕ್ಷರು ಉಕ್ರೇನ್‌ಗೆ 31ನೇ ಸ್ವಾತಂತ್ರ್ಯೋತ್ಸವ ಉಡುಗೊರೆಯಾಗಿ ನೀಡಿದ್ದಾರೆ. ಹೀಗೆ ಒಂದೇ ಕಲ್ಲಿನಲ್ಲಿ 2 ಹಕ್ಕಿಗೆ ಗುರಿಯಿಟ್ಟಿದೆ ಅಮೆರಿಕ. ಒಂದ್ಕಡೆ ತನ್ನ ಅಸ್ತಿತ್ವ ಉಳಿಸಿಕೊಂಡು, ಯಾವುದೇ ರೀತಿ ಅಪಾಯವಿಲ್ಲದೆ ರಷ್ಯಾ ವಿರುದ್ಧ ಯುದ್ಧ ರೂಪಿಸುವುದು. ಮತ್ತೊಂದು ಕಡೆ ಉಕ್ರೇನ್‌ಗೆ ನೆರವಾದೆ ಎಂಬ ಹೆಸರನ್ನೂ ಪಡೆಯುವುದು ಅಮೆರಿಕ ತಂತ್ರವಾಗಿದೆ.
2) 'ನ್ಯಾಟೋ' ನೆರವು
ಅಮೆರಿಕದ ರೀತಿಯೇ 'ನ್ಯಾಟೋ' ಸದಸ್ಯ ರಾಷ್ಟ್ರಗಳು ಕೂಡ ಉಕ್ರೇನ್ ಸೇನೆ ಮತ್ತು ಅಲ್ಲಿನ ರಾಜಕೀಯ ನಾಯಕರಿಗೆ ನೆರವಾಗುತ್ತಿದ್ದಾರೆ. ಗುಟ್ಟಾಗಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸೇನಾ ನೆರವು ನೀಡುತ್ತಿವೆ 'ನ್ಯಾಟೋ' ಸದಸ್ಯ ರಾಷ್ಟ್ರಗಳು. ಇಲ್ಲೂ ಲಾಭ-ನಷ್ಟದ ಲೆಕ್ಕಾಚಾರ ಹಾಕಿಯೇ ಪಾಶ್ಚಿಮಾತ್ಯರು ಉಕ್ರೇನ್ ಬೆನ್ನಿಗೆ ನಿಂತಿದ್ದಾರೆ. ಒಂದು ಕಡೆ ಉಕ್ರೇನ್ ಯುರೋಪ್‌ನ ರಾಷ್ಟ್ರ ಎಂಬ ಸಿಂಪತಿ ಜೊತೆಗೆ ಆ ರಾಷ್ಟ್ರದ ಬೆನ್ನಿಗೆ ನಿಂತ ಲಾಭ ಸಿಗುತ್ತದೆ. ಹಾಗೇ ರಷ್ಯಾ ಮೇಲೂ ಪರೋಕ್ಷವಾಗಿ ಸೇಡು ತೀರಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನ್ 'ನ್ಯಾಟೋ' ಪಡೆಗಳದ್ದು. ಉಕ್ರೇನ್ ಈ ಅನಿವಾರ್ಯ ಪರಿಸ್ಥಿತಿಯಲ್ಲಿ ರಷ್ಯಾ ಜೊತೆ ರಾಜಿ ಮಾಡಿಕೊಳ್ಳುವ ಬದಲು ಪಾಶ್ಚಿಮಾತ್ಯರ ಹಿಡಿತಕ್ಕೆ ಸಿಲುಕುತ್ತಿದೆ ಎಂಬ ಅಭಿಪ್ರಾಯ ತಜ್ಞರದ್ದಾಗಿದೆ.
ಇದನ್ನೂ ಓದಿ-Diabetes Remedies: ಮಧುಮೇಹಕ್ಕೆ ಖಚಿತ ಪರಿಹಾರ, ಪ್ರತಿದಿನ ಈ ಪದಾರ್ಥ ಸೇವಿಸಿದ್ರೆ ಸಾಕು
3) ಸೂತ್ರದಾರ ಜರ್ಮನಿ..?
ಮೇಲೆ ನಾವು ಓದಿದಂತೆ ಉಕ್ರೇನ್ ಸೇನೆಗೆ ಅಮೆರಿಕ ಮತ್ತು 'ನ್ಯಾಟೋ' ಸದಸ್ಯ ರಾಷ್ಟ್ರಗಳ ನೆರವು ಸಿಗುತ್ತಿರುವುದರ ಹಿಂದೆ ಮಾಸ್ಟರ್ ಮೈಂಡ್ ಒಂದಿದೆ. ಆ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ, ಈ ತಂತ್ರದ ಸೂತ್ರದಾರ ಜರ್ಮನಿ. ಅರೆರೆ ಇದರಿಂದ ಜರ್ಮನಿಗೆ ಏನು ಲಾಭ..? ಎಂಬ ಪ್ರಶ್ನೆ ಸಹಜ. ಅಷ್ಟಕ್ಕೂ ಇದು ಲಾಭ-ನಷ್ಟದ ಪ್ರಶ್ನೆ ಅಲ್ಲವೇ ಅಲ್ಲ. ಜರ್ಮನಿಯ ಅಳಿವು-ಉಳಿವಿಗಾಗಿ ಈ ಗುಟ್ಟಾದ ರಣತಂತ್ರ ರೂಪುಗೊಂಡಿದೆ. ಹೇಗೆಂದರೆ ನಿಮಗೆ ಗೊತ್ತಿದ್ದಂತೆ 2ನೇ ಮಹಾಯುದ್ಧದಲ್ಲಿ ಜರ್ಮನಿ ಸೋಲಿಗೆ ಕಾರಣವಾಗಿದ್ದು ಇದೇ ರಷ್ಯಾ. ಅಮೆರಿಕ ಕೂಡ ಹಿಟ್ಲರ್ ವಾಯುಪಡೆ ದಾಳಿಗೆ ಬೆಚ್ಚಿಬಿದ್ದಿತ್ತು. ಆದರೆ ರಷ್ಯಾ ಹೀರೋ ರೀತಿ ಜರ್ಮನಿಯನ್ನ ಬಗ್ಗುಬಡಿದು 2ನೇ ಮಹಾಯುದ್ಧದಲ್ಲಿ ಮಿತ್ರ ಕೂಟಕ್ಕೆ ಗೆಲುವು ತಂದುಕೊಟ್ಟಿತ್ತು. ಇದಾದ ಬಳಿಕ ಜರ್ಮನಿ 2 ಭಾಗವಾಗಿ, ರಷ್ಯಾ & ಅಮೆರಿಕದ ಕೈಯಲ್ಲಿ ಬಂಧಿಯಾಗಿತ್ತು. ಆದರೆ 1990ರಲ್ಲಿ ಜರ್ಮನಿ ಮತ್ತೆ ಒಗ್ಗೂಡಿ, ಅಖಂಡ ಜರ್ಮನಿ ರೂಪುಗೊಂಡಿದೆ. ಈ ಹೊತ್ತಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತೆ ಜರ್ಮನಿ ವಿರುದ್ಧ ದಾಳಿ ಮಾಡಲಿದ್ದಾರೆ ಎಂಬ ಭ್ರಮೆ ಜರ್ಮನಿಗೆ ಬಂದಿದೆ. ಹೀಗಾಗಿಯೇ ರಷ್ಯಾ ವಿರುದ್ಧ ಕೆಂಡ ಉಗುಳುತ್ತಿದ್ದಾರೆ ಜರ್ಮನಿ ನಾಯಕರು. ಇದೇ ಕಾರಣಕ್ಕೆ ಉಕ್ರೇನ್‌ಗೆ ನೆರವು ನೀಡಲು ಜರ್ಮನಿ ಸಾಥ್ ಕೊಟ್ಟಿದೆ ಎಂಬ ಅಭಿಪ್ರಾಯ ತಜ್ಞರದ್ದು.
4) ಚೀನಾ ಡಬಲ್ ಗೇಮ್..?
6 ಕೊಟ್ಟರೆ ಅತ್ತೆ ಮನೆ, 3 ಕೊಟ್ಟರೆ ಸೊಸೆ ಮನೆ ಅನ್ನುತ್ತೆ ಚೀನಾ. ಏಕೆಂದರೆ ಈ ಹಿಂದೆ ಕೂಡ ರಷ್ಯಾಗೆ ಡ್ರ್ಯಾಗನ್ ರಾಷ್ಟ್ರ ಚೀನಾ ಮೋಸ ಮಾಡಿದ ಕುರಿತು ಉದಾಹರಣೆಗಳಿವೆ. ಈ ಸಂದರ್ಭದಲ್ಲಿ ಸದ್ಯಕ್ಕೆ ರಷ್ಯಾ ಪರ ನಿಂತಂತೆ ಮಾಡಿ, ತಟಸ್ಥ ನಿಲುವು ಅನುಸರಿಸುತ್ತಿರುವಂತೆ ಚೀನಾ ನಾಟಕ ಮಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಆದರೆ ಮುಂದೊಂದು ದಿನ ತನಗೆ ಇದರಿಂದ ಲಾಭ ಆಗುತ್ತೆ ಎಂದಾದರೆ ರಷ್ಯಾ ವಿರುದ್ಧ ನಿಲ್ಲುವುದಕ್ಕೂ ಚೀನಾ ಹಿಂದೆ, ಮುಂದೆ ಯೋಚಿಸಲ್ಲ. ಹಾಗೇ ಉಕ್ರೇನ್‌ಗೆ ಬೆಂಬಲ ನೀಡಲು ಕೂಡ ಚೀನಾ ಮುಂದೆ ಬಂದರೂ ಆಶ್ಚರ್ಯವೇ ಇಲ್ಲ.
5) ಸೂಪರ್ ಪವರ್ ರಷ್ಯಾ..!
ಹೌದು, ರಷ್ಯಾ ಭವಿಷ್ಯದಲ್ಲಿ ಒಂದಲ್ಲ ಒಂದುದಿನ ಜಗತ್ತಿನ ಸೂಪರ್ ಪವರ್ ರಾಷ್ಟ್ರವೆಂಬ ಬಿರುದು ಗಳಿಸುತ್ತದೆ. ಈಗಾಗಲೇ ಅಮೆರಿಕದ ಸೂಪರ್ ಪವರ್ ಸ್ಥಾನವನ್ನ ಡ್ರ್ಯಾಗನ್ ಚೀನಾ ಕಸಿದುಕೊಂಡಿದೆ. ಆದ್ರೆ ಚೀನಾ ಈ ಸ್ಥಾನದಲ್ಲಿ ಬಹಳಷ್ಟು ದಿನ ಉಳಿಯುವ ಸಾಧ್ಯತೆ ಕಡಿಮೆ. ಹೀಗೆ ಹೇಳುವುದಾದರೆ ರಷ್ಯಾ ಭವಿಷ್ಯದ ಸೂಪರ್ ಪವರ್ ರಾಷ್ಟ್ರವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ರಷ್ಯಾ ವಿರುದ್ಧ ಎಲ್ಲರೂ ಒಂದಾಗುತ್ತಿದ್ದಾರೆ. ಆದ್ರೆ ಭಾರತ ಮಾತ್ರ ರಷ್ಯಾ ಜೊತೆಗಿನ ಸ್ನೇಹವನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಿದೆ. ಇದೇ ಕಾರಣಕ್ಕೆ ರಷ್ಯಾ ವಿಚಾರದಲ್ಲಿ ಭಾರತ ಮೃದು ಧೋರಣೆ ಅನುಸರಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.