ಆರು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮರಳಿದ ಮಲಾಲಾ ಯೂಸುಫ್ಜೈ

"ಪ್ರಯಾಣದ ಸೂಕ್ಷ್ಮತೆಯ ದೃಷ್ಟಿಯಿಂದ, ಅವರ ಕಾರ್ಯಕ್ರಮಗಳು ಮತ್ತು ಇತರ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ" ಎಂದು ಈ ಭೇಟಿಯ ಬಗ್ಗೆ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

Last Updated : Mar 29, 2018, 12:16 PM IST
ಆರು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮರಳಿದ ಮಲಾಲಾ ಯೂಸುಫ್ಜೈ title=

ಇಸ್ಲಾಮಾಬಾದ್:  ನೊಬೆಲ್ ಶಾಂತಿ ಪುರಸ್ಕಾರ ವಿಜೇತೆ, ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ಜೈ 2012 ರಲ್ಲಿ ತಾಲಿಬಾನ್ ಆಕ್ರಮಣದ ನಂತರ ಅಂದರೆ ಆರು ವರ್ಷಗಳ ಬಳಿಕ ತನ್ನ ದೇಶ ಪಾಕಿಸ್ತಾನಕ್ಕೆ ಮರಳಿದ್ದಾರೆ. "ಪ್ರಯಾಣದ ಸೂಕ್ಷ್ಮತೆಯ ದೃಷ್ಟಿಯಿಂದ, ಅವರ ಕಾರ್ಯಕ್ರಮಗಳು ಮತ್ತು ಇತರ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ" ಎಂದು ಈ ಭೇಟಿಯ ಬಗ್ಗೆ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ಈ ನಾಲ್ಕು ದಿನಗಳ ಭೇಟಿಯ ಸಮಯದಲ್ಲಿ ಮಲಾಲಾ ಪ್ರಧಾನ ಮಂತ್ರಿ ಶಾಹಿದ್ ಖಕೊನ್ ಅಬ್ಬಾಸಿಯವರನ್ನು ಭೇಟಿಯಾಗಲಿದ್ದಾರೆ.

ಸ್ಥಳೀಯ ಟಿವಿ ಚಾನೆಲ್ಗಳ ಪ್ರಕಾರ, 20 ವರ್ಷದ ಮಲಾಲಾ ಇಸ್ಲಾಮಾಬಾದ್ನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ತನ್ನ ಪೋಷಕರೊಂದಿಗೆ ಆಗಮಿಸಿದ್ದು, ಭಾರಿ ಭದ್ರತೆಯೊಂದಿಗೆ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. 

ಟೆಹರಿಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಯ ಗನ್ಮೆನ್ ಸ್ವಾಟ್ ಕಣಿವೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿದ್ದ ಮಲಾಲಾ ಅವರನ್ನು ಅಕ್ಟೋಬರ್ 9, 2012 ರಂದು ಶಾಲಾಗೆ ತೆರಳುತ್ತಿದ್ದ ಆಕೆಯ ಬಸ್ ಅನ್ನು ನಿಲ್ಲಿಸಿ, ಅದರೊಳಗೆ ಪ್ರವೇಶಿಸಿ "ಮಲಾಲಾ ಯಾರು?" ಎಂದು ಕೇಳಿದರು. ಪ್ರತ್ಯುತ್ತರ ಪಡೆದ ನಂತರ ಮಲಾಲಾಳಿಗೆ ಗುಂಡು ಹಾರಿಸಲಾಗಿತ್ತು. 

ಈ ಘಟನೆಯ ನಂತರ, ಮಲಾಲಾ ಬರ್ಮಿಂಗ್ಹ್ಯಾಮ್ನಲ್ಲಿ ತನ್ನ ಚಿಕಿತ್ಸೆಯನ್ನು ನಡೆಸಿದ ಬ್ರಿಟನ್ಗೆ ತೆರಳಿದಳು ಮತ್ತು ಅವಳು ಅಲ್ಲಿಯೇ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದಳು. 2014 ರಲ್ಲಿ ಕಿರಿಯ ವಯಸ್ಸಿನಲ್ಲಿ ಮಲಾಲಾ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಅವರು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಕೆನಡಾಕ್ಕೆ ಕಳೆದ ವರ್ಷ ಭೇಟಿ ನೀಡಿದ ನಂತರ, ಮಲಾಲಾ ಅವರು ದೇಶದ ಸಂಸತ್ತನ್ನು ಉದ್ದೇಶಿಸುವ 
ಅವಕಾಶವನ್ನು ಹೊಂದಿದ್ದರು.

Trending News