ರಿಯೊ ಡಿ ಜನೈರೊ: ಬಾರ್ನಲ್ಲಿ ಬಂದೂಕುದಾರಿಗಳು ನಡೆಸಿದ ಆಕ್ರಮಣದಲ್ಲಿ 11 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಬ್ರೆಜಿಲ್ ನಲ್ಲಿ ನಡೆದಿದೆ. ಉತ್ತರ ಪ್ಯಾರಾ ಸ್ಟೇಟ್ ಪಬ್ಲಿಕ್ ಸೆಕ್ಯುರಿಟಿ ಡಿಪಾರ್ಟ್ಮೆಂಟ್ ಬೆಲೆಮ್ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಗುಂಡಿನ ದಾಳಿಗೆ ಕಾರಣ ತಿಳಿದಿಲ್ಲ;
ದಾಳಿಕೋರರು ದಾಳಿ ನಡೆಸಿದ ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದ್ದು, ದಾಳಿಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಆದರೆ ಸುದ್ದಿ ವೆಬ್ಸೈಟ್ ಜಿ 1 ಓರ್ವ ಆಕ್ರಮಣಕಾರರಿಗೆ ಗಾಯವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
6 ಮಹಿಳೆಯರು ಮತ್ತು 5 ಪುರುಷರ ಮೃತ್ಯು;
ಗುಂಡಿನ ದಾಳಿಯಲ್ಲಿ ಆರು ಮಹಿಳೆಯರು ಮತ್ತು ಐದು ಮಂದಿ ಪುರುಷರು ಮೃತಪಟ್ಟಿದ್ದಾರೆ ಎಂದು ಜಿ 1 ತಿಳಿಸಿದೆ. ಮೋಟಾರ್ ಸೈಕಲ್ ಮತ್ತು ಮೂರು ಕಾರುಗಳಲ್ಲಿ ಬಂದಿದ್ದ ಏಳು ಮಂದಿ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ, ಬಳಿಕ ಅವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.