"ಸಂಗೀತ ಜಗತ್ತನ್ನು ಆಳಿದ ಗಾಯಕಿ": ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ ಪಾಕ್ ಸಚಿವ

Condolence To Lata Mangeshkar: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆಯ ಫೆಡರಲ್ ಸಚಿವ ಫವಾದ್ ಚೌಧರಿ ಭಾನುವಾರ ಸಂತಾಪ ವ್ಯಕ್ತಪಡಿಸಿದ್ದಾರೆ.

Edited by - Chetana Devarmani | Last Updated : Feb 6, 2022, 02:01 PM IST
  • ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನ
  • ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಸಂತಾಪ
  • "ಅವರು ಸಂಗೀತ ಜಗತ್ತನ್ನು ಆಳಿದ ಗಾಯಕಿ" ಎಂದ ಪಾಕ್ ಸಚಿವ
"ಸಂಗೀತ ಜಗತ್ತನ್ನು ಆಳಿದ ಗಾಯಕಿ": ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ ಪಾಕ್ ಸಚಿವ title=
ಫವಾದ್ ಚೌಧರಿ

ಇಸ್ಲಾಮಾಬಾದ್ (ಪಾಕಿಸ್ತಾನ): ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆಯ ಫೆಡರಲ್ ಸಚಿವ ಫವಾದ್ ಚೌಧರಿ (Fawad Chaudhry) ಭಾನುವಾರ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು "ಅವರು ಸಂಗೀತ ಜಗತ್ತನ್ನು ಆಳಿದ ಗಾಯಕಿ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಎರಡು ದಿನಗಳ ರಾಷ್ಟ್ರೀಯ ಶೋಕ

92 ನೇ ವಯಸ್ಸಿನ ಲತಾ ಮಂಗೇಶ್ಕರ್ (Lata Mangeshkar) ಭಾನುವಾರ ನಿಧನರಾದರು. ಕೋವಿಡ್-19 ಮತ್ತು ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಗಾಯಕಿ ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.

 

 

"ದಂತಕಥೆ ಇನ್ನಿಲ್ಲ, ಲತಾಮಂಗೇಶ್ಕರ್ ಅವರು ಸಂಗೀತದ ಜಗತ್ತನ್ನು ದಶಕಗಳ ಕಾಲ ಆಳಿದ ಸುಮಧುರ ರಾಣಿಯಾಗಿದ್ದರು. ಅವರು ಸಂಗೀತ ಜಗತ್ತಿನಲ್ಲಿ ಕಿರೀಟವಿಲ್ಲದ ರಾಣಿಯಾಗಿದ್ದರು. ಅವರ ಧ್ವನಿಯು ಎಲ್ಲಾ ಕಾಲಕ್ಕೂ ಜನರ ಹೃದಯವನ್ನು ಆಳುತ್ತಿರುತ್ತದೆ" ಎಂದು ಸಚಿವ ಫವಾದ್ ಚೌಧರಿ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. 

ಅವರ ಮಧುರ ಧ್ವನಿಗಾಗಿ "ನೈಟಿಂಗೇಲ್ ಆಫ್ ಇಂಡಿಯಾ" (Nightingale of India) ಎಂದು ಲತಾ ಮಂಗೇಶ್ಕರ್ ಜನಪ್ರಿಯರಾಗಿದ್ದರು.  

ಇದನ್ನೂ ಓದಿ: Rashmika ಗೆ ಟ್ರೋಲ್‌ ಕಾಟ..! ʼಲೆಜೆಂಡ್‌ʼ ಬಾಯಲ್ಲಿ ಕನ್ನಡ ಕವನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News